ಧಾರವಾಡ ಜಿಲ್ಲಾ ವರಿಷ್ಠಾಧಿಕಾರಿಗಳೇ ಎಲ್ಲಿದ್ದೀರಿ ?
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ದಾಟನಾಳ ಗ್ರಾಮದಲ್ಲಿ ಮೇಲ್ವರ್ಗದ ಭಾಗ್ಯ ಶಿವಪ್ಪ ಕುರಿ ಮತ್ತು ದಲಿತ ಸಮುದಾಯಕ್ಕೆ ಸೇರಿದ ಭಾಗ್ಯ ಶಿವಪ್ಪ ಛಲವಾದಿ ವಿದ್ಯಾರ್ಥಿನಿಯರು ಆ ಗ್ರಾಮದ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಈ ಭಾಗ್ಯ ಶಿವಪ್ಪ ಕುರಿ ಎಂಬ ವಿದ್ಯಾರ್ಥಿನಿಗೆ ಜಾತಿ ತಾರತಮ್ಯ ತುಂಬಿ ತುಳುಕುತ್ತಿರುತ್ತೆ ಈ ಮೇಲ್ವರ್ಗದ ಭಾಗ್ಯ ಶಿವಪ್ಪ ಕುರಿ ದಲಿತ ಸಮುದಾಯಕ್ಕೆ ಸೇರಿದ ಭಾಗ್ಯ ಶಿವಪ್ಪ ಛಲವಾದಿಗೆ ಪ್ರತಿ ದಿನ ಮಾನಸಿಕ ಹಿಂಸೆ ಕೊಡುತ್ತಿರುತ್ತಾಳೆ.
ಶಾಲೆಯಲ್ಲಿ ಪ್ರತಿದಿನ ಈ ಭಾಗ್ಯ ಶಿವಪ್ಪ ಕುರಿ ದಲಿತ ಸಮುದಾಯಕ್ಕೆ ಸೇರಿದ ಭಾಗ್ಯ ಛಲವಾದಿಗೆ ಶಾಲೆಯಲ್ಲಿ ಏ ನೀನು ಕೀಳು ಜಾತಿಯವಳು ನೀನು ಕ್ಲಾಸಿನಲ್ಲಿ ನನ್ನ ಪಕ್ಕದಲ್ಲಿ ಕೂರಬೇಡ ಎಂದು ಬಹಳ ದಿನಗಳಿಂದ ಮಾನಸಿಕವಾಗಿ ಚಿತ್ರ ಹಿಂಸೆ ಕೊಡುತ್ತಿದ್ದಾಳೆ ಇದನ್ನು ಬಹಳ ದಿನಗಳಿಂದ ಸಹಿಸಿಕೊಂಡು ಬಂದ ದಲಿತ ಸಮುದಾಯದ ಭಾಗ್ಯ ದಿ. 7.3.2025 ಶುಕ್ರವಾರರಂದು ನೀನು ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ ಈ ಶಾಲೆ ಎಲ್ಲರಿಗೂ ಸರಿಸಮಾನ ನೀನು ನನ್ನ ಜಾತಿಗೆ ಅವಮಾನ ಮಾಡುವುದರೊಂದಿ ಪ್ರತಿ ದಿನ ನನಗೆ ನೀನು ಜಾತಿ ನಿಂದನೆ ಮಾಡುವುದರಿಂದ ನನಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಬಂದಿದ್ದೀಯಾ ಈ ನಿನ್ನ ವರ್ತನೆ ಸರಿಯಲ್ಲವೆಂದು ದಲಿತ ಸಮುದಾಯದ ಭಾಗ್ಯ ಮೇಲ್ವರ್ಗದ ಭಾಗ್ಯಳಿಗೆ ತಿಳಿ ಹೇಳುತ್ತಾಳೆ.
ಅಷ್ಟಕ್ಕೇ ಸುಮ್ಮನಾಗದ ಈ ಮೇಲ್ವರ್ಗದ ವಿದ್ಯಾರ್ಥಿನಿ ಭಾಗ್ಯ ಶಿವಪ್ಪ ಕುರಿ ಅವರ ಅಣ್ಣನಿಗೆ ನಮ್ಮ ಶಾಲೆಯಲ್ಲಿ ಹೊಲೆಯ ಜಾತಿಗೆ ಸೇರಿದ ಭಾಗ್ಯ ಶಾಲೆಯಲ್ಲಿ ನನ್ನ ಜೊತೆ ಜಗಳ ಮಾಡುತ್ತಿದ್ದಾಳೆ ಎಂದು ಮೇಲ್ವರ್ಗದ ಭಾಗ್ಯಳ ಅಣ್ಣ ಸಚಿನ್ ಗೆ ವಿಷಯ ಮುಟ್ಟಿಸುತ್ತಾಳೆ.
ಮರುದಿನ ದಿ 8/3/2025 ಶನಿವಾರರಂದು ಮೇಲ್ವರ್ಗದ ಭಾಗ್ಯಾಳ ಅಣ್ಣ ಸಚಿನ್ ಶಿವಪ್ಪ ಕುರಿ ಮತ್ತು ಅವನ ಸಹಪಾಠಿ ಜಯಪ್ಪ ರಾಮಪ್ಪ ಅಡ್ನೂರು ಇವರಿಬ್ಬರ ಗ್ಯಾಂಗ್ ಕಟ್ಟಿಕೊಂಡು ಗ್ರಾಮದ ಬಸ್ ಸ್ಟಾಂಡ್ ಹತ್ತಿರ ದಲಿತ ವಿದ್ಯಾರ್ಥಿನಿ ಭಾಗ್ಯ ಶಾಲೆ ಮುಗಿಸಿಕೊಂಡು ಬರುವುದನ್ನು ಕಾಯುತ್ತಿರುತ್ತಾರೆ ಶಾಲೆ ಮುಗಿಸಿಗೊಂಡು ಬರುತ್ತಿದ್ದ ದಲಿತ ವಿದ್ಯಾರ್ಥಿನಿ ಭಾಗ್ಯಳನ್ನು ಸುಮಾರು ಮಧ್ಯಾಹ್ನ 12 ರಿಂದ 12.30 ಸುಮಾರಿಗೆ ಗ್ರಾಮದ ಬಸ್ ಸ್ಟಾಂಡ್ ಹತ್ತಿರ ಸಚಿನ್ ಜಯಪ್ಪ ಮತ್ತು ಇವರಿಬ್ಬರೂ ದಲಿತ ವಿದ್ಯಾರ್ಥಿನಿ ಭಾಗ್ಯಳನ್ನು ಅಡ್ಡಗಟ್ಟಿ ಏ ನೀನು ನನ್ನ ತಂಗಿಯ ಜೊತೆ ಜಗಳ ಮಾಡಿದ್ದೀಯಂತೆ ಎಂದು ಸಚಿನ್ ಮತ್ತು ಜಯಪ್ಪನ ತಂಡ ದಲಿತ ವಿದ್ಯಾರ್ಥಿನಿಗೆ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದ್ದಲ್ಲದೇ ದಲಿತ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ.
ಈ ವಿಷಯ ತಿಳಿದ ದಲಿತ ವಿದ್ಯಾರ್ಥಿನಿಯ ಕುಟುಂಬಸ್ಥರು ಭಾಗ್ಯಾಳ ತಾಯಿ ಶೋಭಾ ಮತ್ತು ಆಕೆಯ ಅಜ್ಜ ಶರಣಪ್ಪ ಮಾವಂದಿರಾದ ಹಣಮಂತ ಮಹಾಂತೇಶ ಮತ್ತು ದಲಿತ ಸಮುದಾಯದ ಕೆಲವರು ಪ್ರಜ್ಞಾವಂತ ಯುವಕರು ಗ್ರಾಮದ ಬಸ್ ಸ್ಟಾಂಡ್ ಘಟನಾ ಸ್ಥಳಕ್ಕೆ ಬರುತ್ತಾರೆ ಘಟನಾ ವಿಷಯವನ್ನು ಕೇಳಲು ಮುಂದಾದ ದಲಿತ ಸಮುದಾಯದವರಿಗೂ ಕೂಡಾ ಸಚಿನ್ ಶಿವಪ್ಪ ಕುರಿ ಮತ್ತು ಜಯಪ್ಪ ರಾಮಪ್ಪ ಅಡ್ನೂರು ಇವರಿಬ್ಬರ ತಂಡ ಬಸ್ ಸ್ಟಾಂಡ್ ಆವರಣದಲ್ಲೇ ದಲಿತ ಛಲವಾದಿ ಸಮುದಾಯದ ಘಟನಾ ವಿಷಯ ಕೇಳಲು ಹೋದ ಎಲ್ಲರ ಮೇಲೆಯೂ ಕೂಡಾ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದಲ್ಲದೆ ಅವರ ಮೇಲೆಯೂ ಕೂಡಾ ಹಲ್ಲೆ ಮಾಡಿರುತ್ತಾರೆ.
ಹಲ್ಲೆಗೆ ಒಳಗಾದ ದಾಟನಾಳ ಗ್ರಾಮದ ದಲಿತ ಸಮುದಾಯದವರು ತಾಲೂಕಿನ ಸರಕಾರಿ ಆಸ್ಪತ್ರೆ ನವಲಗುಂದ ಚಿಕಿತ್ಸೆ ಪಡೆಯಲು ದಾಖಲಾಗಿರುತ್ತಾರೆ ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಧಾರವಾಡ ಜಿಲ್ಲಾ ಅಧ್ಯಕ್ಷ ಪುಂಡಲೀಕ ಛಲವಾದಿ ಮತ್ತು ಅವರ ತಂಡ ಹಲ್ಲೆ ಮಾಡಿದ 11 ಆರೋಪಿಗಳಾದ ಸಚಿನ್ ಶಿವಪ್ಪ ಕುರಿ, ಜಯಪ್ಪ ರಾಮಪ್ಪ ಅಡ್ನೂರ, ಕಾರ್ತಿಕ್ ಮುದಿಯಪ್ಪ ಹಿಟ್ನಾಯ್ಕರ, ಫಕೀರಪ್ಪ ಜಟ್ಟೇನ್ನವರ, ರವಿ ಸಿದ್ದಪ್ಪ ಗುಡಿಸಗಾರ, ಎಲ್ಲಪ್ಪ ಸಿದ್ದಪ್ಪ ಗುಡಿಸಾಗರ್, ಸಲೀಂ ಪಕೀರಸಾಬ್ ಮುಲ್ಲಾನವರ್, ಮೈಲಾರಿ ಎಲ್ಲಪ್ಪ ಕುರಿ, ಶಿವಾನಂದ್ ಸಿದ್ದಲಿಂಗಪ್ಪ ಗುಡಿಸಾಗರ, ಪಾರವ್ವ ಶಿವಾನಂದ ಕುರಿ, ಮುದಿಯಪ್ಪ ಎಲ್ಲಪ್ಪ ಹಿಟ್ನಾಯ್ಕರ್ ವ್ಯಕ್ತಿಗಳ ಮೇಲೆ ಎಸ್ ಸಿ ಎಸ್ ಟಿ ಪ್ರಕರಣ ದಾಖಲಿಸುವ ಮೂಲಕ ಸಧ್ಯ ಈ ಆರೋಪಿಗಳನ್ನು ಧಾರವಾಡ ಸಬ್ ಜೇಲ್ ಗೆ ಶಿಫ್ಟ್ ಮಾಡಲಾಗಿದೆ.
ದೌರ್ಜನ್ಯಕ್ಕೆ ಒಳಗಾದ ದಲಿತ ಸಮುದಾಯದ ಭಾಗ್ಯಾಳ ಕುಟುಂಬಸ್ಥರ ಮೇಲೆಯೂ ಕೂಡಾ ಹಲ್ಲೆ ಮಾಡಿದ ಮೇಲ್ವರ್ಗದ ಜನರಿಂದ ಕೌಂಟರ್ ಕೇಸ್ ದಾಖಲಿಸಿದ್ದಾರೆ ದಲಿತ ಸಮುದಾಯದ ಶರಣಪ್ಪ ಛಲವಾದಿ ಮತ್ತು ಮಹಾಂತೇಶ ಛಲವಾದಿ ಇವರನ್ನು ಕೂಡ ಜಿಲ್ಲಾ ಸಬ್ ಜೈಲ್ ಗೆ ಶಿಫ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
FIR ದಾಖಲಾಗಿರುವ ಹಿನ್ನೆಲೆಯಲ್ಲಿ ಆ ದಾಟನಾಳ ಗ್ರಾಮದ ದಲಿತ ಕುಟುಂಬಸ್ಥರು ಭಯದ ಭೀತಿಯಲ್ಲಿ ಜೀವನ ನಡೆಸುವಂತ ಪರಸ್ಥಿತಿ ನಿರ್ಮಾಣವಾಗಿದೆ FIR ದಾಖಲಾದ ಬಳಿಕ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಆ ದಾಟನಾಳ ಗ್ರಾಮಕ್ಕೆ ಹೋಗದೆ ಇರೋದು ದೊಡ್ಡ ದುರಂತ.
ಧಾರವಾಡ ಜಿಲ್ಲಾ ವರಿಷ್ಟಾಧಿಕಾರಿಗಳೇ ಎಲ್ಲಿದ್ದೀರಿ?
ನಿಮ್ಮ ಚಿತ್ತ ನವಲಗುಂದ ತಾಲೂಕು ದಾಟನಾಳ ಗ್ರಾಮದತ್ತ ಹರಿಸಿರಿ ದೌರ್ಜನ್ಯ ಪ್ರಕರಣ ದಾಖಲಾಗಿದೆ 2 ದಿನ ಗತಿಸಿದರೂ ಕೂಡಾ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಆಗಲಿ ಆ ಗ್ರಾಮದ ದಲಿತ ಕಾಲೋನಿಗಳಾಗಲೀ ಯಾವ ಒಬ್ಬ ಸಿಬ್ಬಂದಿ ಕೂಡಾ ಬಂದೋಬಸ್ತಿಗೆ ಹೋಗಿಲ್ಲವಂತೆ ಆ ಗ್ರಾಮದ ದಲಿತ ಕಾಲೋನಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಪತ್ರಿಕೆ ವರದಿ ಪ್ರಕಟವಾದ ನಂತರವೂ ಭಯದಿಂದ ಇರುವ ದಾಟನಾಳ ಗ್ರಾಮದ ದಲಿತರಿಗೆ ರಕ್ಷಣೆ ಕೊಡುವುದರ ಮೂಲಕ ಭಯದ ವಾತಾವರಣ ಹೋಗಲಾಡಿಸಿ.
ಇನ್ನುಳಿದ ದಲಿತ ನಾಯಕರೇ ಎಲ್ಲಿದ್ದೀರಿ ನಿಮ್ಮ ಚಿತ್ತ ಧಾರವಾಡ ಜಿಲ್ಲಾ ನವಲಗುಂದ ಭಾಗದತ್ತ ಹರಿಸಿರಿ ದಲಿತರು ದೌರ್ಜನ್ಯ ದಬ್ಬಾಳಿಕೆಗೆ ಒಳಗಾಗಿದ್ದಾರೆ
ಎಸ್. ಸಿ., ಎಸ್. ಟಿ. ಪ್ರಕರಣ ದಾಖಲಾದ ಬಳಿಕ ಕೌಂಟರ್ ಕೇಸ್ ಮಾಡಿ ಕೇಸ್ ಖುಲಾಸೆ ಮಾಡುವ ಪ್ಲಾನ್ ನಡೆಸುವರನ್ನು ಬಗ್ಗು ಬಡಿಯಿರಿ ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಒಗ್ಗೂಡಿಕೊಂಡು ದಲಿತರ ಮೇಲೆ ಕೌಂಟರ್ ಕೇಸಾಗಿರುವ ಕೇಸನ್ನು ರದ್ದುಗೊಳಿಸಿ ಎಂದು ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ತಾಕಿತ್ತು ಮಾಡಿ ಇಲ್ಲವಾದರೆ ಮುಂದೊಂದು ದಿನ ದಲಿತರ ಗತಿ ಅಧೋ ಗತಿ ಆಗುವುದು ಖಂಡಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾ ವರದಿ ಕಂಡ ಮೇಲಾದರೂ ಈ ದಲಿತ ನಾಯಕರು ಮತ್ತು ಸಂಘಟನೆಗಳು ಒಗ್ಗೂಡಿಕೊಂಡು ದಲಿತರ ಮೇಲೆ ಆಗಿರುವ ಕೌಂಟರ್ ಕೇಸ್ ರದ್ದು ಮಾಡಲು ಯಶಸ್ವಿ ಆಗುವುದರೊಂದಿಗೆ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡುವರೋ ಇಲ್ಲವೋ ಎಂದು ಕಾದು ನೋಡಬೇಕಿದೆ…
- ಕರುನಾಡ ಕಂದ
