ಬೀದರ್/ ಬಸವಕಲ್ಯಾಣ: ನಗರದ ತ್ರಿಪುರಾಂತ ಸರ್ಕಾರಿ ಪ್ರಾಥಮಿಕ ಶಾಲೆಯ ಎದುರುಗಡೆ ನಾಲಿ ಚರಂಡಿ ತುಂಬಿ ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರು ಶಾಲೆಗೆ ಹೋಗುವ ಸಮಯದಲ್ಲಿ ಮಕ್ಕಳು ಮೂಗು ಮುಚ್ಕೊಂಡು ಹೋಗುವ ಪ್ರಸಂಗವಾಗಿದೆ, ಶಾಲೆಯ ಎದುರುಗಡೆ ನಾಲಿ ಚರಂಡಿ ಗಳಲ್ಲಿ ಬಹಳಷ್ಟು ಸೊಳ್ಳೆ, ಹುಳುವು ಮತ್ತು ನೀರು ಹರಿದು ಬರುತ್ತಿವೆ ಕೊಳಕು ನೀರು ನಿಂತು ಶಾಲೆಯ ಎದುರು ಮತ್ತು ಒಳಗಡೆ ಊಟ ಮಾಡುವ ಸಮಯದಲ್ಲಿ ಮತ್ತು ಆಡುವ ಸಮಯದಲ್ಲಿ ಸೊಳ್ಳೆಗಳು ಕಚ್ಚಿದರೆ ಡೆಂಗ್ಯೂ, ಟೈಫಾಯಿಡ್ ಕಾಯಿಲೆಗಳನ್ನು ಬರುವ ಸಂಭವಿಸಿದ್ದು, ಕೂಡಲೇ ಸಂಬಂಧಪಟ್ಟ ಸನೆಟ್ ನರಿ ಮತ್ತು ಜೆ.ಇ ರವರಿಗೆ ನಗರಸಭೆ ಪೌರಾಯುಕ್ತರು ಕರೆದು ಕೂಡಲೇ ಸ್ವಚ್ಛಗೊಳಿಸಬೇಕೆಂದು ಖಡಕ್‌ಆಗಿ ಎಚ್ಚರಿಕೆ ನೀಡಬೇಕೆಂದು ಬಸವಕಲ್ಯಾಣದ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಧನರಾಜ ಡಿ. ರಾಜೋಳೆ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ