
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಆರ್. ಎಸ್. ದೊಡ್ಡಿ ಗ್ರಾಮದ ಕನಕ ಭವನದಲ್ಲಿ ಹಮ್ಮಿಕೊಂಡಿದ್ದ ಕುರುಬ ಸಂಘದ ಉದ್ಘಾಟನೆಯನ್ನು ನೆರವೇರಿಸಿ, ಪದಾಧಿಕಾರಿಗಳಿಗೆ ಸನ್ಮಾನ ಮಾಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ರವರು ನೂತನ ಸಂಘ ಕೊಳ್ಳೇಗಾಲ ತಾಲೂಕಿನಿಂದ ಪ್ರತ್ಯೇಕವಾಗಿ ಹನೂರಿನಲ್ಲಿ ಆಗಿರುವುದು ಸಂತಸದ ವಿಷಯ ಹಾಗೆಯೇ ಸಂಘಟಿತರಾಗಿ ಸಮುದಾಯವನ್ನು ಉನ್ನತ ಸ್ಥಾನಕ್ಕೆ ತಗೆದುಕೊಂಡು ಹೋಗುವುದು ಪ್ರತಿಯೊಬ್ಬರ ಸಂಘದ ಸದಸ್ಯರ ಕರ್ತವ್ಯ ಸಂಘದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಇದ್ದರೆ ಕೂತು ಅಧ್ಯಕ್ಷರ ಸಮ್ಮುಖದಲ್ಲಿ ಬಗೆ ಹರಿಸಕೊಳ್ಳಬೇಕು ವೈಯಕ್ತಿಕ ಮನಸ್ತಾಪಗಳಿಗೆ ಆಸ್ಪದ ನೀಡದೆ ಸಮುದಾಯದ ಏಳಿಗೆಗೆ ವತ್ತು ನೀಡಬೇಕು ಹಾಗೆಯೇ ಹನೂರು ತಾಲೂಕಿನ ಆರ್ ಎಸ್ ದೊಡ್ಡಿಯಲ್ಲಿ ಇರುವ ಸಮುದಾಯ ಭವನ ಸುಮಾರು ಅರ್ಧ ಮುಕ್ಕಾಲು ಭಾಗ ಮುಗಿದು ಹೋಗಿದೆ ಇನ್ನುಳಿದ ಭಾಗವನ್ನು ಈ ವರ್ಷದಲ್ಲಿ ನವಂಬರ್ ತಿಂಗಳ ಒಳಗೆ ಮುಗಿಸಬೇಕು ಇದಕ್ಕೂ ಸಹ ಸುಮಾರು 1 ಕೋಟಿ ಅನುದಾನ ಬಂದಿದೆ ಆದಷ್ಟು ಬೇಗ ಈ ಕನಕ ಭವನ ಮುಗಿಸುತ್ತೇನೆ ಮುಂದಿನ ವರ್ಷದ ಕನಕ ಜಯಂತಿ ಇಲ್ಲೇ ಮಾಡುವ ಆಸೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಹನೂರು ಕುರುಬ ಸಂಘದ ನೂತನ ಅಧ್ಯಕ್ಷರಾದ ಶಿವಪ್ಪ, ಕೊಳ್ಳೇಗಾಲ ಕುರುಬರ ಸಂಘದ ಉಪಾಧ್ಯಕ್ಷರಾದ ನಂಜೇಗೌಡ, ಕಾರ್ಯದರ್ಶಿ ಸೋಮಶೇಖರ್,ಮೈಸೂರ್ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶಿವಕುಮಾರ್, ಆಡಳಿತಾಧಿಕಾರಿ, ವೈದ್ಯಾಧಿಕಾರಿ ವಿಜ್ಞಾನಗಳ ಸಂಸ್ಥೆ ಚಾ.ನಗರ ನಂಜುಂಡೇಗೌಡ, ಬೆಂಗಳೂರು ಕೆ,ಆರ್,ಡಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಬಸವರಾಜು, ಚಿತ್ರದುರ್ಗ ಅಬಕಾರಿ ಜಿಲ್ಲಾಧಿಕಾರಿ ಬಿ.ಮಾದೇಶ್ ಹಾಗೂ ಹನೂರು ವೆಂಕೆಟೇಗೌಡ, ಮಲ್ಲಣ್ಣ, ಶಿವಮೂರ್ತಿ, ಯಾರಂಬಡಿ ಹುಚ್ಚಯ್ಯ, ಮಹದೇವ್, ಶಿವಣ್ಣ, ಚಂದ್ರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್