ಬಳ್ಳಾರಿ/ ಕಂಪ್ಲಿ : ಕಂಪ್ಲಿ ತಾಲೂಕಿನ ಹಂಪದೇವನಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕಜಾಯಿನೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ಕಲ್ಬುರ್ಗಿ ವಿಕಾಸ್ ಅಕಾಡೆಮಿಯ ಕಂಪ್ಲಿ ಸಂಚಾಲಕ ಅಮರೇಗೌಡ ಉದ್ಘಾಟಿಸಿ ಮಾತನಾಡಿ ಇಂದಿನ ಮಕ್ಕಳು ಸಾಹಿತ್ಯ, ನಾಟಕ, ಸಂಗೀತ ಮತ್ತು ಸಮೂಹ ನೃತ್ಯವನ್ನು ಮರೆತು ಹೋಗಿದ್ದಾರೆ ಯುವ ಪೀಳಿಗೆಗೆ ಜನಪದ ಕಲೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಪ್ರತಿಯೊಬ್ಬ ತಂದೆ ತಾಯಂದಿರು ಮಾಡಬೇಕು ಅಂತ ಕೆಲಸವನ್ನು ಗ್ರಾಮೀಣ ಪ್ರದೇಶಗಳಲ್ಲಿ ಸದಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ನವರು ಮಾಡುತ್ತಿದ್ದಾರೆ ಎಂದರು. ನಂತರ ರಂಗಭೂಮಿ ಕಲಾವಿದ ಶ್ರೀ ವಿಜಯಕುಮಾರ ಮಾತನಾಡಿ ಮಕ್ಕಳನ್ನು ರಂಗ ಸೇವೆಗೆ ತರುವಂತಹ ಕೆಲಸವಾಗಬೇಕು ಮನರಂಜನೆಯಲ್ಲಿ ತೊಡಗಿದ ಮಕ್ಕಳು ತಮ್ಮ ಜೀವನವನ್ನು ಸರಳವಾಗಿ ನಡೆಸಿಕೊಂಡು ಮುಂದುವರೆಯುತ್ತಾರೆ ಅದಕ್ಕಾಗಿ ಶಾಲೆ ಕಾಲೇಜುಗಳಲ್ಲಿ ಮಕ್ಕಳಿಗೆ ಪಠ್ಯತರ ಚಟುವಟಿಕೆಗಳು ಆದ ನಾಟಕ , ಸಂಗೀತ, ನೃತ್ಯದ ಸಾಂಸ್ಕೃತಿಕ ಅರಿವು ಮೂಡಿಸಬೇಕೆಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕವಿತಾ ಪಂಪನಗೌಡ ಮಾತನಾಡಿ ರಂಗಭೂಮಿ ಎಂಬುದು ಜೀವನದ ಹಾದಿ ಉದ್ದಕ್ಕೂ ಮಾರ್ಗದರ್ಶನಕ್ಕಾಗಿ ನಡೆಸುತ್ತದೆ ಜೀವನದಲ್ಲಿ ನಗು ಮತ್ತು ಅಳು ಎರಡನ್ನು ಸಮವಾಗಿ ಸ್ವೀಕರಿಸಬೇಕು ಎಂದರು. ಸಿದ್ದೇಶ್ವರರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಅಧ್ಯಕ್ಷರಾದ ಬಿ. ಗುರು ಮಹಾಂತೇಶ್ ಮತ್ತು ಕುರುಬರ ಹಮೇಶ್ವರ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಕಲೆ ಮತ್ತು ಸಾಹಿತ್ಯದ ಬಗ್ಗೆ ಜನರಿಗೆ ಮನರಂಜನೆ ನೀಡುತ್ತಾ ಬಂದಿದ್ದಾರೆ ಎಂದರು. ಹಿಂದುಸ್ತಾನಿ ಗಾಯಕ ಪುರುಷೋತ್ತಮ್ ಡಿ ಅವರು ಗ್ರಾಮೀಣ ಸಂಸ್ಕೃತಿಕ ಸೌರಭ ಕಾರ್ಯಕ್ರಮಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಚಂದ್ರಶೇಖರ್ ಬಸಾಪುರ ಮತ್ತು ತಂಡದವರಿಂದ ಮತ್ತು ಸಮೂಹ ನೃತ್ಯ ಸಂಗೀತ ಸಣಾಪುರ ಕಂಪ್ಲಿ ತಾಲೂಕು ಮತ್ತು ತಂಡವರಿಂದ ಅಶ್ವಿನಿ ನೃತ್ಯ ಅಕಾಡೆಮಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಯ ಕಾರ್ಯಕ್ರಮ ಹಾಗೂ ಐತಿಹಾಸಿಕ ನಾಟಕ ಮೋಳಿಗೆ ಮಾರಯ್ಯ ಶ್ರೀ ಭೀಮೇಶ್ ಎಚ್ ಮತ್ತು ತಂಡದವರಿಂದ ಕಾರ್ಯಕ್ರಮ ಜರುಗಿದವು. ಈ ಸಂದರ್ಭದಲ್ಲಿ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಬಿ. ಗುರು ಮಹಾಂತೇಶ್ ಮತ್ತು ಕಾರ್ಯದರ್ಶಿ ಕುರುಬರ ಹಮೇಶ್ವರ, ಖಜಾಂಚಿ ಕೆ ಹೇಮಂತರಾಜ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಮುಖಂಡರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್