
ಬಳ್ಳಾರಿ/ ಕಂಪ್ಲಿ : ಕಂಪ್ಲಿ ಹಾಗೂ ಕುರುಗೋಡು ಭಾಗದಲ್ಲಿ ಅತ್ಯಂತ ದೊಡ್ಡ ಜಾತ್ರೆಯಲ್ಲಿ ಒಂದಾದ ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ಜಾತ್ರೆಯ ಪ್ರಯುಕ್ತ ಕಂಪ್ಲಿ ಶಾಸಕರಾದ ಜೆಎನ್ ಗಣೇಶ್ ಅವರು ನಾಲ್ಕನೇ ವರ್ಷದ ಸಂಕಲ್ಪ ಪಾದಯಾತ್ರೆಯನ್ನು ನಡೆಸಿದರು.
ಕಂಪ್ಲಿ ಪಟ್ಟಣದ ಆರಾಧ್ಯ ದೈವ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಸಂಕಲ್ಪ ಪಾದಯಾತ್ರೆಯನ್ನು ಆರಂಭಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ J.N. ಗಣೇಶ್ ಅವರು ಕಳೆದ ಮೂರು ವರ್ಷಗಳಿಂದ ಕಂಪ್ಲಿ ಕ್ಷೇತ್ರದಲ್ಲಿ ಹಾಗೂ ನಾಡಿನಲ್ಲಿ ಸಮೃದ್ಧ ಮಳೆಯಾಗಲಿ ಉತ್ತಮ ಬೆಳೆಯಾಗಿ ಅನ್ನದಾತರು ಚೆನ್ನಾಗಿರಲಿ ಎಂದು ನಾಡಿನಲ್ಲಿ ಸುಭಿಕ್ಷ ನೆಲಸಲಿ ಪ್ರತಿಯೊಬ್ಬರಲ್ಲಿಯೂ ಶಾಂತಿ ನೆಮ್ಮದಿ ನೆಲೆಸಲಿ ಎಂದು ಸಂಕಲ್ಪ ಮಾಡಿ ಪಾದಯಾತ್ರೆ ಮಾಡುತ್ತಿದ್ದೇನೆ, ನನ್ನೊಂದಿಗೆ ಕ್ಷೇತ್ರದ ಜನತೆಯು ಭಾಗವಹಿಸುತ್ತಿದ್ದು ಕಳೆದ ವರ್ಷ ಉತ್ತಮ ಮಳೆಯಾಗಿತ್ತು ಆದರೆ ರೈತರು ಬೆಳೆದ ಬೆಳಗ್ಗೆ ಉತ್ತಮ ಬೆಲೆ ದೊರಕುವಂತಾಗಬೇಕು ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲಿ ಎಂದು ಶ್ರೀ ಪೇಟೆ ಬಸವೇಶ್ವರ ಮತ್ತು ಕುರುಗೋಡು ಶ್ರೀ ದೊಡ್ಡ ಬಸವೇಶ್ವರರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು. ನಂತರ ಕಂಪ್ಲಿ, ಕೊಟ್ಟಲ್ , ನೆಲುಡಿ ಕೊಟ್ಟಾಲ್, ಎಮಿಗನೂರು ಮುಖಾಂತರ ಕುರುಗೋಡಿಗೆ ಪಾತ್ರೆಯಾತ್ರೆ ನಡೆಸಿದರು.
ಶಾಸಕರೊಂದಿಗೆ ನೂರಾರು ಮುಖಂಡರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ಪ್ರತಿಯೊಂದು ಗ್ರಾಮದಲ್ಲಿ ಶಾಸಕರು ಪಾದಯಾತ್ರೆ ಮೂಲಕ ಆಗಮಿಸಿದಾಗ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಪಾನಕ ಮಜ್ಜಿಗೆ ನೀಡಿ ಸಾರ್ವಜನಿಕರು ಸ್ವಾಗತ ಕೋರಿ ಶುಭ ಹಾರೈಸಿದರು. ದಾರಿ ಉದ್ದಕ್ಕೂ ಪಾದಯಾತ್ರೆಗಳ ಸಾಲು ಅತ್ಯಂತ ಭಕ್ತಿ ಭಾವದಿಂದ ಕೂಡಿತ್ತು. ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ಜಾತ್ರೆಗೆ ಕೇವಲ ಬಳ್ಳಾರಿ ಜಿಲ್ಲೆಯೊಂದೇ ಅಲ್ಲ ನೆರೆಹೊರೆಯ ಅನ್ಯ ರಾಜ್ಯಗಳಿಂದಲೂ ಹಾಗೂ ಜಿಲ್ಲೆಗಳಿಂದಲೂ ಭಕ್ತರು ಬರುತ್ತಿರುವುದು ಕಂಡುಬಂತು ಅದರಲ್ಲೂ ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಭಕ್ತರು ಕಂಪ್ಲಿ ಮೂಲಕವಾಗಿ ಕುರುಗೋಡಿಗೆ ಪಾದಯಾತ್ರೆಯ ಮೂಲಕ ಸಾಗಿದರು. ಗ್ರಾಮದಿಂದಲೇ ಪಾದಯಾತ್ರೆಗಳಿಗೆ ಜಾತ್ರೆ ತೆರಳುವವರಿಗೆ ಅನೇಕ ಭಕ್ತರು ರಸ್ತೆ ಯುದ್ಧಕ್ಕೂ ಪಾದಯಾತ್ರೆಗಳಿಗೆ ಉಪಹಾರ , ತಂಪು ಪಾನೀಯ, ಮಜ್ಜಿಗೆ ಉಚಿತವಾಗಿ ವಿತರಿಸುತ್ತಿರುವುದು ಕಂಡುಬಂತು ಜೊತೆಗೆ ಅಲ್ಲಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಿರುವುದು ಕಂಡು ಬಂತು. ರಸ್ತೆ ಉದ್ದಕ್ಕೂ ಮಹಿಳೆಯರು, ಪುರುಷರು ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ತೆರಳುತ್ತಿರುವುದು ಕಂಡು ಬಂದರೆ ಇನ್ನೂ ಕೆಲವು ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿಕೊಂಡು ಚಕ್ಕಡಿಗಳ ಮೂಲಕ ತೆರಳುತ್ತಿರುವುದು ಕಂಡುಬಂತು.
ವರದಿ : ಜಿಲಾನ್ ಸಾಬ್ ಬಡಿಗೇರ್