ಕಲಬುರಗಿ :ಕಿತ್ತೂರು ರಾಣಿ ಚೆನ್ನಮ್ಮ ಸ್ವಯಂ ರಕ್ಷಣೆಯ ಕರಾಟೆ ತರಬೇತಿಯ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಕಾ ಕಾರ್ಯಕ್ರಮ ಜಾರಿಗೆ ತಂದಿದ್ದು ಒಳ್ಳೆಯ ಬೆಳವಣಿಗೆ ಆದರೆ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ ಆದ್ರೆ ಸಮಯದ ಅಭಾವದಿಂದ ಈ ಅನುದಾನ ಸಮರ್ಪಕವಾಗಿ ಕೆಲವೊಂದು ಪ್ರೌಢಶಾಲೆಗಳಲ್ಲಿ ಸದ್ಬಳಕೆ ಆಗಿರುವುದಿಲ್ಲ ಆದ್ದರಿಂದ ರಾಜ್ಯ ಸರಕಾರವು ಮುಂದೆ ಬರುವ ಜೂನ್ ತಿಂಗಳಲ್ಲಿ ಕರಾಟೆ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕು ಅದೇ ರೀತಿಯಾಗಿ ರಾಜ್ಯದ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಕಾ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕು ಇದರಿಂದ ಎಲ್ಲಾ ಹೆಣ್ಣು ಮಕ್ಕಳು ಈ ಕರಾಟೆ ಕಲಿಕಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು ಆದ್ದರಿಂದ ಕರಾಟೆ ಕಲಿಕಾ ಕಾರ್ಯಕ್ರಮದ ಯೋಜನೆಯಿಂದ ವಂಚಿತವಾದ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ವಿಸ್ತರಿಸಿದರೆ ಪ್ರತಿಯೊಬ್ಬ ವಿದ್ಯಾರ್ಥಿನಿಯರು ಸ್ವಯಂ ರಕ್ಷಣಾ ಕಲೆಯನ್ನು ಕಲಿಯುವುದರಿಂದ ನಿಜವಾದ ಮಹಿಳಾ ಸಬಲೀಕರಣ ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗುತ್ತದೆ ಆದ್ದರಿಂದ ಪ್ರಾಥಮಿಕ ಶಾಲೆಗಳಿಗೂ ಕರಾಟೆ ಕಲಿಕೆಯ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಕರಾಟೆ ಶಿಕ್ಷಕರಾದ ಸೆನ್ನಸೈ ಶಾಂತಪ್ಪ ಮಾಸ್ಟರ್ ಎಂ. ದೇವರಮನಿ ಅವ್ರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
- ಕರುನಾಡ ಕಂದ