ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಬೂದೂಬಾಳು ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿ ವೆಂಕಟರಮಣ ಸ್ವಾಮಿಯ ಮೂರ್ತಿಯನ್ನು
ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ತೇರಿನಲ್ಲಿ ಕೂರಿಸಿ ತೇರಿನ ಮೇಲೆ ( ಬಾನಂಗಳದಲ್ಲಿ ಗರುಡ ಪ್ರದಕ್ಷಿಣೆ ಹಾಕಿದ ) ನಂತರ ರಥೋತ್ಸವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ವೇಳೆ ಭಕ್ತರು ಗೋವಿಂದಾ ಗೋವಿಂದಾ ಜಯಘೋಷವನ್ನು ಮೊಳಗಿಸಿ, ದವಸ ಧಾನ್ಯ, ಹಣ್ಣು ಕಾಯಿ ಎಸೆದು ಭಕ್ತಿ ಭಾವ ಮೆರೆದರು. ಭಕ್ತರು ಸರದಿ ಸಾಲಿನಲ್ಲಿ ತೆರಳಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ಮಾಜಿ ಶಾಸಕ ಆರ್ ನರೇಂದ್ರ, ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಕುಟುಂಬದವರು ದೇವರ ದರ್ಶನ ಪಡೆದು, ರಥೋತ್ಸವದಲ್ಲಿ ಭಾಗಿಯಾದರು.
ಬರುವ ಭಕ್ತರಿಗೆ ಮೊಸರನ್ನ, ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಲಾಯಿತು.
ಬಿಗಿ ಬಂದೋಬಸ್ತ್:
ಹನೂರು ಪಟ್ಟಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಯಿತು.
ವರದಿ ಉಸ್ಮಾನ್ ಖಾನ್