ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ?

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ “ರೋಜಾ” ಮಹತ್ವವಾದ ಸ್ತಂಭ

1)ಕಲ್ಮಾ ಏ ತೋಯ್ಯಬ
2 )ರೋಜಾ
3 )ಜಕಾತ್
4 )ನಮಾಜ್
5 )ಹಜ್
ಇವೆಲ್ಲಾ ಇಸ್ಲಾಂ ಧರ್ಮದ 5 ಭದ್ರ ಬುನಾದಿಗಳು.

ಉದಾಹರಣೆಗೆ : ಒಂದು ಮನೆಗೆ ಅದರ ಅಡಿಪಾಯ ಎಷ್ಟು ಮುಖ್ಯವಾಗಿರುತ್ತದೆಯೋ ಹಾಗೆಯೇ ಅದರ ಸ್ತಂಭಗಳು ಕೂಡಾ ಅಷ್ಟೇ ಮುಖ್ಯ ಅದೇ ರೀತಿ ಇಸ್ಲಾಂ ಧರ್ಮದಲ್ಲಿ 5 ಸ್ತಂಭಗಳಲ್ಲಿ ಒಂದು ರಮಜಾನ್ ತಿಂಗಳಿನಲ್ಲಿ ” ರೋಜಾ ” ( ಉಪವಾಸ ) ಆಚರಣೆ ಮಾಡುವಂತ ಒಂದು ಸ್ತಂಭ ಈ ರೋಜಾ ಉಪವಾಸ ಆಚರಣೆ ಶ್ರೀಮಂತ, ಬಡವ, ಮೇಲು, ಕೀಳು ಅನ್ನುವಂತ ಭಾವನೆ ಇಲ್ಲದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಡಲೇಬೇಕಾದಂತಹ ಉಪವಾಸ ಆಚರಣೆಯೇ “ರೋಜಾ” ಆಗಿದೆ. ಇಸ್ಲಾಂ ಧರ್ಮದಲ್ಲಿ ಕೇವಲ ರೋಜಾ ಉಪವಾಸ ಇರುವುದು ಅಷ್ಟೇ ಅಲ್ಲದೆ, ತನ್ನ ಇಡೀ ದೇಹವೇ “ರೋಜಾ ” ಉಪವಾಸ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಉಪವಾಸ ಆಚರಣೆ ಆಗುವುದು ಸತ್ಯ.

ಇಡೀ ದೇಹವೇ ರೋಜಾ ಉಪವಾಸ ಅಂದರೆ ಏನು ಅಂತೀರಾ ? ಬನ್ನಿ ತಿಳಿಯೋಣ…

ಉಪವಾಸ ಆಚರಣೆಯ ಸಂದರ್ಭದಲ್ಲಿ ಕೆಟ್ಟ ದುರಾಲೋಚನೆ ಮಾಡದೆ, ಕಣ್ಣುಗಳಿಂದ ಕೆಟ್ಟದ್ದನ್ನು ನೋಡದೆ, ನಾವು ಮಾತಾಡುವಂತ ಬಾಯಿಂದ ಕೆಟ್ಟ ಪದಗಳ ಬಳಸದೆ, ಸ್ವಂತ ಹೆಂಡತಿಯನ್ನು ಕೂಡಾ ಕೆಟ್ಟ ರೀತಿಯಿಂದ ನೋಡದೆ , ತನ್ನ ಕೈಗಳಿಂದ ಕೆಟ್ಟ ಕೆಲಸವನ್ನು ಮಾಡದೆ, ತನ್ನ ಕಾಲುಗಳ ಮೂಲಕ ಕೆಟ್ಟ ಕೆಲಸದ ಕಡೆ ಹೋಗದೆ ಈ ಪ್ರಕಾರವಾಗಿ ಉಪವಾಸ ರೋಜಾವನ್ನು ಮಾಡಿದರೆ ಮಾತ್ರ ಅಲ್ಲಾಹನಿಗೆ ಅರ್ಪಣೆಯಾಗುತ್ತದೆ .
ಪವಿತ್ರ ರಮಜಾನ್ ತಿಂಗಳ ಉಪವಾಸ ಇಸ್ಲಾಂ ಧರ್ಮದ ಈದ್ ಮಿಲಾದ್, ಮೊಹರಂ, ಬಕ್ರೀದ್ ಈ ಹಬ್ಬಗಳಲ್ಲಿ ಶ್ರೇಷ್ಠ ರಮಜಾನ್ ಹಬ್ಬ .ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಬತ್ತನೆಯ ತಿಂಗಳಲ್ಲಿ ಬರುತ್ತದೆ. ರಮಜಾನ್‌ನಲ್ಲಿ ಒಂದು ತಿಂಗಳು ರೋಜಾ ಉಪವಾಸ ಮಾಡುವುದರಿಂದ ವೈಜ್ಞಾನಿಕವಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗಾಣು ಸೂಕ್ಷ್ಮ ಜೀವಿಗಳು ಕೂಡಾ ಸಾಯುತ್ತವೆ ಹಾಗೂ ಅಲ್ಲಾಹನ ಕೃಪೆಗೆ ಕೂಡಾ ಪಾತ್ರರಾಗುತ್ತೇವೆ.

ಅಲ್ಲಾಹನು ನಮಗೆ 30 ದಿನ ಉಪವಾಸ ರೋಜಾ ಉಪವಾಸ ಕಾರ್ಯ ಕೊಟ್ಟಿದ್ದರಿಂದ ಅಲ್ಲಾಹನಿಗೆ ಏನು ಸಿಗುತ್ತದೆ ?

ಅನ್ನುವ ಪ್ರಶ್ನೆ ಉದ್ಭವವಾಗುತ್ತದೆ ಮನುಷ್ಯನು ಏನೇ ಮಾಡಿದರೂ, ಮಾಡದಿದ್ದರೂ ಕೂಡಾ ಅಲ್ಲಾಹನ ಭಂಡಾರದಲ್ಲಿ ಒಂದು ಸಾಸಿವೆ ಕಾಳಷ್ಟು ಕಡಿಮೆಯಾಗುವುದಿಲ್ಲ ಹಾಗೇನೇ ಹೆಚ್ಚಿಗೆ ಕೂಡಾ ಆಗುವುದಿಲ್ಲ ಅದೇ ರೀತಿ ಮನುಷ್ಯನು ಯಾವ ರೀತಿ ಭಕ್ತಿಯಿಂದ ತನ್ನ ದೇಹವನ್ನು ತ್ಯಾಗದ ಮೂಲಕ ಅರ್ಪಣೆ ಮಾಡುತ್ತಾನೋ ಅದೇ ಅಲ್ಲಾಹನಿಗೆ ಅರ್ಪಣೆಯಾಗುತ್ತದೆ, ಮತ್ತು ಅಲ್ಲಾಹನಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರ ನಂಬಿಕೆ ಹಾಗಾಗಿ ರಮಜಾನ್ ತಿಂಗಳಲ್ಲಿ ” ರೋಜಾ ” ನಮಾಜ್, ಬಡವ ಶ್ರೀಮಂತ ಮೇಲು ಕೀಳು ಇಲ್ಲದೆ ಮಾಡುವಂತಹ ಪುಣ್ಯದ ಕಾರ್ಯ ,ಆದರೆ ಶ್ರೀಮಂತರಿಗೆ ಮಾತ್ರ ಹಜ್ , ಜಕಾತ್ (ದಾನ) ನೀಡುವುದಕ್ಕೆ ಕಟ್ಟೆಪ್ಪಣೆ ನೀಡುತ್ತದೆ ಇಸ್ಲಾಂ.

ಉಪವಾಸವು ಕೇವಲ ದಿನವಿಡೀ ಹಸಿವಿನಿಂದ ಇರಲು ಮಾತ್ರವಲ್ಲದೆ ಆತ್ಮ ನಿಯಂತ್ರಣ, “ತಾಳ್ಮೆ ಸಬರ ತ್ಯಾಗ, ಆಧ್ಯಾತ್ಮಿಕ ಮತ್ತು ಮಾನಸಿಕ ಶುದ್ಧೀಕರಣದೊಂದಿಗೆ ತಕ್ವಾವನ್ನು ಕಲಿಯುವುದು.

ಮುಸ್ಲಿಂ ಬಾಂಧವರು ಈ ರಮಜಾನ್ ತಿಂಗಳಿಗಾಗಿ ಇಡೀ ವರ್ಷ ಉತ್ಸಾಹದಿಂದ ಕಾಯುತ್ತಾರೆ. “ಸಹೇರಿ ” ಅಂದರೆ ನಸುಖಿನ ಜಾವದ ವೇಳೆ ಅಲ್ಪ ಭೋಜನ ಸೇವಿಸುವ ಮೂಲಕ ಉಪವಾಸ ಆರಂಭವಾಗಿ , ಸಾಯಂಕಾಲ ಸೂರ್ಯಸ್ತದ ನಂತರ ನೀರು ಮತ್ತು ಪೂರ್ಣ ಪ್ರಮಾಣದಲ್ಲಿ ಭೋಜನವನ್ನು ಮಾಡಿ ಉಪವಾಸಕ್ಕೆ ತೆರೆ ಮಾಡಲಾಗುತ್ತದೆ.

ರಮಜಾನ್ ತಿಂಗಳ ಆಚರಣೆಯ ಪ್ರತಿದಿನ ರಾತ್ರಿ 9 ಘಂಟೆಯ ವೇಳೆಯಲ್ಲಿ ವಿಶೇಷ ನಮಾಜ್ “ತರಾವೀಹ್” ವೇಳೆ ಸಂಪೂರ್ಣವಾಗಿ ಕುರಾನ್ ಪಠಿಸಲಾಗುತ್ತದೆ, ಬಡವ ಶ್ರೀಮಂತ ಭೇದ-ಭಾವ ಇಲ್ಲದೆ ಪುರುಷರು ಮಸೀದಿಗಳಲ್ಲಿ ಸಂಘಟಿತರಾಗಿ ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಿದರೆ, ಮಹಿಳೆಯರು ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಈ ತಿಂಗಳಲ್ಲಿ ಯಾವ ರಾತ್ರಿಯ ದಿನ ಕುರಾನಿನ ಪ್ರಥಮ ವಾಕ್ಯಗಳು ಅವತೀರ್ಣಗೊಂಡವೋ ಅದಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. “ಲೈಲತುಲ್ ಕದ್ರ “ಎಂದು ಕರೆಯಲಾಗುವ ಈ ರಾತ್ರಿ ಯಾವುದೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ ರಮಜಾನ್ ಮಾಸದಲ್ಲಿ 21, 23, 25, 27, 29ನೇ ದಿನಾಂಕದಂದು ಅಂದರೆ ಕೊನೆಯ ಹತ್ತು ದಿನಗಳ ಬೆಸ ಸಂಖ್ಯೆಗಳ ದಿನಗಳ ರಾತ್ರಿ ಲೈಲತುಲ್ ಕದ್ರ ಆಗಿರಬಹುದು ಅನ್ನುವುದು ನಂಬಿಕೆ. 27ನೇ ದಿನದ ಮುನ್ನಾರಾತ್ರಿ ಹೆಚ್ಚು ಸಂಭವನೀಯ ಇರಬಹುದು ಎಂದು ಹೆಚ್ಚಿನವರ ನಂಬಿಕೆ ಈ ರಾತ್ರಿಯಲ್ಲಿ ನಡೆಸುವ ಪ್ರಾರ್ಥನೆಗಳು ಉಳಿದ ಸಮಯದ ಪ್ರಾರ್ಥನೆಗಿಂತ ಸಾವಿರಾರು ಪಟ್ಟು ಹೆಚ್ಚು ಪುಣ್ಯದ ಪ್ರತಿ ಫಲಪ್ರದ ಎಂದು ಹೇಳಲಾಗುತ್ತದೆ.

ರಮಜಾನ್ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ಮೂಲಕ ನೆನಪಿಸಿಕೊಳ್ಳುವುದು ಕುರಾನ್ ಎಂಬ ನಂಬಿಕೆ ಇದೆ. ಈ ಅವಧಿಯಲ್ಲಿ ಮುಸ್ಲಿಮರು ಮಸೀದಿಯಲ್ಲೇ “ಅಯತೇಕಾಬ ” (ತಂಗುವುದು) ಭಕ್ತಿಯಿಂದ ಮಾಡುವ ಮೂಲಕ ಧಾರ್ಮಿಕ ಜ್ಞಾನವನ್ನು ಹೆಚ್ಚಿಸಿಗೊಂಡು ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ.

ರಮಜಾನ್ ತಿಂಗಳಲ್ಲಿ ಜಕಾತ್ ದಾನ ಶ್ರೀಮಂತರು ತಮ್ಮ ಸಂಪತ್ತಿನ ಅಂದರೆ ಒಂದು ವರ್ಷದ ಅವಧಿಯಲ್ಲಿ ಗಳಿಸಿದ ಆದಾಯದಲ್ಲಿ ಶೇ.2.5ರಷ್ಟು ಪಾಲನ್ನು ಜಕಾತ್ ಮತ್ತು ಸದಕಾ, ಫೀತರಾ ಎಂಬ ದಾನದ ರೂಪದಲ್ಲಿ ಬಡವರಿಗೆ, ವಿಧವೆ , ಅನಾಥ ಮಕ್ಕಳಿಗೆ ನೀಡಲೇಬೇಕು ಅನ್ನುವುದು ಇಸ್ಲಾಂ ಧರ್ಮದ ಕಟ್ಟಾಜ್ಞೆಯಾಗಿದೆ ಇನ್ನು ದಾನ ಕೊಡುವಾಗ ಹೆಮ್ಮೆಯ ಬದಲು ವಿನೀತ ಭಾವವಿರಬೇಕು. ದಾನಕ್ಕಾಗಿ ಬಡವರು ತಮ್ಮ ಮನೆಗೆ ಬರುವುದು ಇಸ್ಲಾಂ ಧರ್ಮದಲ್ಲಿಲ್ಲ ದಾನಿಗಳೇ ಅವರ ಮನೆಗೆ ಹೋಗಿ ದಾನ ನೀಡಬೇಕು ಎಂಬ ನಿಯಮ ಕೂಡಾ ಇದೆ ಎಂದು ಹೇಳಲಾಗುತ್ತಿದೆ.

ಲೇಖನ – ಮಹಿಬೂಬ್ .ಎಂ. ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ