ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ಲ ಪಟ್ಟಣದ R.K ನಗರದಲ್ಲಿ ಇಂದು ವನಸಿರಿ ಫೌಂಡೇಷನ್ (ರಿ.) ರಾಜ್ಯ ಘಟಕ ರಾಯಚೂರು ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳ ಸಹಯೋಗದಲ್ಲಿ ಬೇಸಿಗೆಯಲ್ಲಿ ಪ್ರಾಣಿಪಾಕ್ಷಿಗಳ ದಾಹವನ್ನು ತೀರಿಸಲು “ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ” ಹಾಗೂ “ಪರಿಸರ ಜಾಗೃತಿ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮಾತನಾಡಿದರು.
ವನಸಿರಿ ತಂಡ ಸುಮಾರು 10ವರ್ಷಗಳಿಂದ ಯಾವುದೇ ಫಲಾಪೇಕ್ಷೆಗಳಿಲ್ಲದೆ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದೆ, ದಿನನಿತ್ಯ ಪರಿಸರ ಸೇವೆಯಲ್ಲಿ ತೊಡಗಿದೆ ಯುವಕ ಯುವತಿಯರು ಪ್ರತಿ ವರ್ಷ ಏಪ್ರಿಲ್ 1 ರಂದು ಎಪ್ರೀಲ್ ಫೂಲ್ ಮಾಡುತ್ತಾರೆ ಆದರೆ ಯುವಕ ಯುವತಿಯರನ್ನು ಪರಿಸರ ಕಾಳಜಿ ಹೊಂದಲೆಂದು ಎಪ್ರೀಲ್ ಫೂಲ್ ಬದಲಿಗೆ ಎಪ್ರೀಲ್ ಕೂಲ್ ಆಚರಿಸುತ್ತೇವೆ, ಆದರೆ ಈ ವರ್ಷ ಎಪ್ರೀಲ್ ಗೂ ಮೊದಲೇ ಬೇಸಿಗೆ ಶುರುವಾಗಿದೆ. ಪ್ರಾಣಿಪಾಕ್ಷಿಗಳಿಗೆ ನೀರಿನ ದಾಹ ತೀರಿಸಲು ಇದೀಗ ಗಿಡಮರಗಳಿಗೆ ಮಣ್ಣಿನ ಅರವಟ್ಟಿಗೆಗಳನ್ನು ಕಟ್ಟಿ ಕಾಳು ಮತ್ತು ನೀರುಣಿಸುವ ಕಾರ್ಯ ಮಾಡುತ್ತಿದ್ದೇವೆ. ಪಕ್ಷಿಗಳ ಸಂಕುಲ ಉಳಿಸುವ ಕಾರ್ಯಕ್ಕೆ ಮುದಗಲ್ ಪಟ್ಟಣದ R.K ನಗರದ ನಿವಾಸಿಗಳು ಕೈಜೋಡಿಸಿರುವುದು ತುಂಬಾ ಸಂತೋಷದಾಯಕವಾಗಿದೆ. ಯಾರೇ ಪಕ್ಷಿಗಳ ಸಂಕುಲ ಉಳುವಿಗೆ ಕೈಜೋಡಿಸುವುದಾದರೆ ನಾವು ಉಚಿತವಾಗಿ ಮಣ್ಣಿನ ಅರವಟ್ಟಿಗೆಗಳನ್ನು ನೀಡುತ್ತೇವೆ ಎಂದರು.
ನಂತರ ಲಿಂಗಸಗೂರು ತಾಲೂಕ ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು ಅವರು ಮಾತನಾಡಿ ಈ ಪ್ರಕೃತಿಯಲ್ಲಿ ವಾಸವಾಗಿರುವ ಪ್ರತಿಯೊಂದು ಜೀವಿಯು ವಾಸವಾಗಿರಲು ಗಾಳಿ,ನೀರು,ಆಹಾರ ಅತ್ಯವಶ್ಯಕವಾಗಿ ಬೇಕಾಗಿದೆ. ಆದರೆ ಇತ್ತೀಚಿನ ದಿನಕ್ಕೆ ಅವಶ್ಯವಾಗಿ ಬೇಕಾಗಿರುವುದು ಶುದ್ಧಗಾಳಿ, ಶುದ್ಧನೀರು, ಶುದ್ಧವಾದ ಆಹಾರ, ಶುದ್ಧವಾದ ಗಾಳಿ, ನೀರು, ಆಹಾರ ಒದಗುಸುವ ಕಾರ್ಯದಲ್ಲಿ ವನಸಿರಿ ತಂಡ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನಿಯ. ಶುದ್ಧವಾದ ಗಾಳಿಯನ್ನು ಪಡೆಯಬೇಕಾದರೆ ಗಿಡಮರಗಳನ್ನು ಬೆಳಸಬೇಕು. ಇದರಿಂದ ಪ್ರಣೀಪಕ್ಷಿಗಳಿಗೂ ಕೂಡಾ ಆಶ್ರಯ ತಾಣವಾಗಿ ಮಾಡಿಕೊಂಡು ಅದರಲ್ಲಿನ ಹಣ್ಣುಗಳನ್ನು ತಿಂದು ಜೀವಿಸುತ್ತವೆ. ಇಂತಹ ಕಾರ್ಯದಲ್ಲಿ ತೊಡಗಿರುವ ವನಸಿರಿ ಫೌಂಡೇಷನ್ ಕಾರ್ಯ ತುಂಬಾ ಶ್ಲಾಘನೀಯ ವನಸಿರಿ ತಂಡದ ಜೊತೆಗೆ ನಾವು ನೀವುಗಳೆಲ್ಲರೂ ಕೈಜೋಡಿಸುವ ಮೂಲಕ ಪ್ರಾಣಿ ಪಕ್ಷಿಗಳು ಸಂಕುಲ ಉಳುವಿಗೆ ಶ್ರಮಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಆದೇಶ ಶಿಕ್ಷಕರು, ಗಣೇಶ ವಕೀಲರು ಹುಲಿಗುಡ್ಡ, ಶಿವನಗೌಡ ಹುಲಿಗುಡ್ಡ, ರಾಜು ಬಳಗನೂರು, ಚನ್ನಪ್ಪ ಕೆ ಹೊಸಹಳ್ಳಿ, ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ RK ನಗರದ ಪರಿಸರ ಪ್ರೇಮಿಗಳಾದ ಲಿಂಗಸಗೂರು ತಾಲೂಕ ಕಾ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರ್, ಷಣ್ಮುಖಪ್ಪ ಚಲುವಾದಿ, ರಾಮಚಂದ್ರಪ್ಪ ದೌಳೇ, ಚನ್ನಬಸವ ಮಟ್ಟೂರು, ರಾಘವೇಂದ್ರ ಗುಮಸ್ತೆ ಪತ್ರಕರ್ತರು, ಶಶಿಧರ ಕಂಚಿಮಠ ಪತ್ರಕರ್ತರು, ಬಸವರಾಜ ಹೂನೂರು, ಸುರೇಶ ಪತ್ರಕರ್ತರು, ಚನ್ನಬಸವ ಚುಕನಟ್ಟಿ ಇನ್ನಿತರರು ಇದ್ದರು.
- ಕರುನಾಡ ಕಂದ