ಕಲಬುರಗಿ /ಕಾಳಗಿ : ಆರಂಭವೋ ಪರೀಕ್ಷೆಗಳ ಚೈತ್ರ, ಮರೆಯದಿರಿ ಪ್ರವೇಶ ಪತ್ರ, ಉಡುಗೆಯಲ್ಲಿ ಶಿಸ್ತು ಸಮವಸ್ತ್ರ ಆತ್ಮ ವಿಶ್ವಾಸ ಗೆಲುವಿನ ಮಂತ್ರ , ಮುಂಚಿತವಾಗಿರಿ ಕೇಂದ್ರದ ಹತ್ರ, ಪ್ರಶ್ನೆಗಳ ಅರ್ಥ ಓದಿದರೆ ಮಾತ್ರ, ಬಿಟ್ಟು ಹೋಗಬೇಡಿ ನೀವು ಕುಳಿತ ಕ್ಷೇತ್ರ, ಕಣ್ಣಾಗವಲಿದೆ ಕ್ಯಾಮೆರಾದ ನೇತ್ರ , ಪ್ರಶ್ನೆಗೆ ತಕ್ಕಂತಿರಲಿ ಉತ್ತರ ಗಾತ್ರ ಜ್ಞಾಪಿಸಿಕೊಳ್ಳಿ, ಆರು ವಿಷಯ ಶಾಸ್ತ್ರ, ಉತ್ತಮ ಪೆನ್ನಿನಿಂದ ಬರೀರಿ ಉತ್ರ, ಸಮಯ ಶಿಸ್ತು ನಿಮ್ಮಯ ಮಿತ್ರ, ಮೂರು ಗಂಟೆ ಮುಖ್ಯ ನಿಮ್ಮ ಪಾತ್ರ, ಕಾಪಾಡಿ ಪರೀಕ್ಷೆ ಎಂಬುದು ಪವಿತ್ರ ನಿಯಮ ಪಾಲನೆ ಯಶಸ್ವಿನ ಸೂತ್ರ, ಉತ್ತಮ ಫಲಿತಾಂಶ ಪಡೆದರೆ ಜೈತ್ರ ಎಂಬ ಶುಭ ಮಾತಿನಂತೆ ವಿದ್ಯಾರ್ಥಿಗಳಿಗೆ ಯಾವುದೇ ಭಯಬೇಡ ಮನಃಪೂರ್ವಕವಾಗಿ ಪರೀಕ್ಷೆಯನ್ನು ಬರೆದು ಯಶಸ್ವಿನ ಹಾದಿಯನ್ನು ಹುಡುಕಿ ಉತ್ತಮವಾದ ಅಂಕಗಳನ್ನು ಪಡೆದು ಶಾಲೆಗೆ ಮತ್ತು ತಂದೆ ತಾಯಿಯರ ಕೀರ್ತಿಗೆ ಪಾತ್ರರಾಗಿರುವಿರಿ ಎಂದು ಭಾವಿಸುತ್ತೇನೆ ಎಂಬ ಮಾತನ್ನು ವಿರುಪಾಕ್ಷಯ್ಯ ಹಿರೇಮಠ ಮುಖ್ಯ ಗುರುಗಳು ಶ್ರೀ ಕಾಳಪ್ಪ ಗೌಡ ಪೊಲೀಸ್ ಪಾಟೀಲ್ ಪ್ರೌಢಶಾಲೆ ಕಾಳಗಿ ರವರು ಹೇಳಿದರು. ತಮ್ಮ ಜೀವನದ ಮಹತ್ತರವಾದ ಘಟ್ಟ ಅಂದರೆ ಎಸ್. ಎಸ್. ಎಲ್. ಸಿ. ಇದು ಬದಲಾವಣೆಯ ದಾರಿ ಎಂದು ಹೇಳಬಹುದು. ಅದು ಈಗ ತಮ್ಮ ಮುಂದೆ ಇದೆ. ತಾವುಗಳು ಸತತ ಪ್ರಯತ್ನದಿಂದ ಓದಿದ್ದರೆ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ತಾವುಗಳು ಅಂಜದೆ,ನಿರ್ಭೀತವಾಗಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಿ ತಮ್ಮ ಜೀವನಕ್ಕೆ ದಾರಿ ಮಾಡಿಕೊಳ್ಳುತ್ತಿರಿ ಎಂಬ ಆಶಯವನ್ನು ವ್ಯಕ್ತಪಡಿಸಿದ ಸಹ ಶಿಕ್ಷಕರಾದ ರೇವಣಸಿದ್ದಪ್ಪ ಕೆ. ಪಾಟೀಲ್ ಅವರು ಹೇಳಿದರು.
ಕಷ್ಟ ಎಂಬ ನುಡಿ ನನ್ನ ಜೀವನದಲ್ಲಿ ಇಲ್ಲ ಅಸಾಧ್ಯವಾದದ್ದು ಸಾಧಿಸಿ ತೋರಿಸುತ್ತಿನೆ. ಮತ್ತು ವಿದ್ಯಾರ್ಥಿಗಳಲ್ಲಿ ಭಯ, ಗೊಂದಲ, ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಆರಾಮವಾಗಿ 15 ನಿಮಿಷಗಳ ಕಾಲ ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಂಡು ಉತ್ತರವನ್ನು ಬರೆಯಿರಿ. ನಿಮಗೆ ಒಳ್ಳೆಯದು ಆಗಲಿ, 100 ನೂರು ಪ್ರತಿಶತ ಪಡೆಯಿರಿ ಎಂದು ಶಿಕ್ಷಕರಾದ ಪ್ರಕಾಶ್ ಮಠಪತಿ ಹೇಳಿದರು.
ಶ್ರೀ ಶಿವ ಬಸವೇಶ್ವರ ದಕ್ಷಿಣಾಭಿವೃದ್ಧಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಗುರು ನಂಜಯ್ಯ ಹಿರೇಮಠ ಈ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದರು.
ವಿರೂಪಾಕ್ಷಯ್ಯ ಹಿರೇಮಠ ಶ್ರೀ ಕಾಳಪ್ಪ ಗೌಡ ಪೊಲೀಸ್ ಪಾಟೀಲ್ ಪ್ರೌಢ ಶಾಲೆಯ ಮುಖ್ಯಗುರುಗಳು, ರೇವಣ ಸಿದ್ದಯ್ಯ ಹಿರೇಮಠ ಶ್ರೀ ಶಿ. ಬ. ವಿ. ದ. ಟ್ರಸ್ಟ್ ನ ಆಡಳಿತ ಜವಾಬ್ದಾರಿ ಮತ್ತು ಮಾರ್ಗದರ್ಶಕರು, ಪ್ರಕಾಶ್ ಮಠಪತಿ, ರೇವಣ ಸಿದ್ದಪ್ಪ ಕೆ ಪಾಟೀಲ್, ಸಂಗೀತ ಬೊಮ್ಮಾಣಿ, ಅಂಜನಾ ಮಾತಾಜಿ, ಪ್ರೇಮಾವತಿ ಮಾತಾಜಿ, ಚಂದ್ರಶೇಖರ್ ಆರ್ ಪಾಟೀಲ್, ವನಿತಾ ಪಾಟೀಲ್, ಶೋಭಾ ವತಿ ಮಾತಾಜಿ, ಶೃತಿ ಹಿರೇಮಠ, ಶಿಲ್ಪಾ ಮಾತಾಜಿ, ಶೃತಿ ಮಾತಾಜಿ, ಸತೀಶ್ ಪಾಟೀಲ್ ಪ್ರಾಥಮಿಕ ವಿಭಾಗ ಮುಖ್ಯ ಗುರುಗಳು, ಶರಣು ಮೇಲಕೆರಿ , ಪ್ರಕಾಶ್ ಮಠಪತಿ ಶಿಕ್ಷಕರು ಹಾಜರಿದ್ದರು. ಈ ಕಾರ್ಯಕ್ರಮದ ಗಾಯತ್ರಿ ಎಸ್. ನಿರೂಪಣೆ ಮಾಡಿದರು. ರಾಧಿಕಾ ಎಚ್. ಸ್ವಾಗತಿಸಿದರು. ಶೃತಿ ಸಿ. ಬಹುಮಾನ ಕಾರ್ಯಕ್ರಮ ನಡೆಸಿದರು. ಚೈತ್ರಾ ಎಸ್. ವಂದಿಸಿದರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್