ಬಳ್ಳಾರಿ/ ಕುರುಗೋಡು : ಪ್ರತಿಯೊಬ್ಬರೂ ದೇಶ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಜೆ.ಎನ್. ಗಣೇಶ ಹೇಳಿದರು.
ನಿವೃತ್ತರಾದ ಸೈನಿಕ ಆರ್. ನಾಗರಾಜ ರವರನ್ನು ಯರಂಗಳಿಗೆ ಗ್ರಾಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಬಿ. ಎಸ್. ಎಫ್. ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವಾಸಿ ಆರ್ ನಾಗರಾಜ್ ಅವರು 28 ವರ್ಷ ನಿರಂತರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸೈನಿಕ ವೃತ್ತಿಯಲ್ಲಿ ದೇಶ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸುವ ನನಗೆ ಸಿಕ್ಕಿದ್ದು ಪುಣ್ಯದ ಕಾರ್ಯ ಎಂದರು.
ಮಾಜಿ ಸೈನಿಕ ಆರ್. ನಾಗರಾಜ ಮಾತನಾಡಿ ದೇಶ ಕಾಯುವ ವೃತ್ತಿಯಲ್ಲಿ ಸೇವೆ ಸಲ್ಲಿಸಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಲು ಮುಂದಾಗಬೇಕು ದೇಶ ಸೇವೆ ಈಶ ಸೇವೆ ಇಂದಿನ ಯುವಕರು ದೇಶ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ ಕಾಂಗ್ರೆಸ್ ಮುಖಂಡರು ಮಾಜಿ ಸೈನಿಕ ಆರ್ ನಾಗರಾಜ ರವರ ಕುಟುಂಬ ವರ್ಗ ಹಾಗೂ ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್