ಬಳ್ಳಾರಿ/ ಕಂಪ್ಲಿ : ಪಟ್ಟಣದ ಗುರುಮಠದಲ್ಲಿ ಲಿಂಗೈಕ್ಯ ಗೊಗ್ಗ ಚನ್ನಬಸಯ್ಯ ಮತ್ತು ಆದೋನಿ ಮಿಠಾಯಿ ಚನ್ನಬಸಯ್ಯನವರ ಪುಣ್ಯಸ್ಮರಣೆ ಅಂಗವಾಗಿ 247ನೇ ಶಿವಾನುಭವ ವಿಶೇಷ ಉಪನ್ಯಾಸ ಮತ್ತು ವಚನ ಹೇಳುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಲಿಂಗೈಕ್ಯ ಗೊಗ್ಗ ಚನ್ನಬಸಯ್ಯ ಮತ್ತು ಆದೋನಿ ಮಿಠಾಯಿ ಚನ್ನಬಸಯ್ಯನವರನ್ನು ಕುರಿತು ಗಿಣಿವಾರದ ಶಿವಾಚಾರ್ಯ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅವರ ಸಾಮಾಜಿಕ ಕಳಕಳಿಯನ್ನು ಕುರಿತು ವಿವರಿಸಿದರು. ವಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತನುಷ್ಕಾ, ಪವಾಡಿಶೆಟ್ಟಿ ರತನ್, ಬಿ.ಶ್ರೀರಕ್ಷಾ, ಶ್ರೇಯಾ, ದ್ವಿತೀಯ ಬಹುಮಾನವನ್ನು ಶ್ರೇಯಾ, ದೀಪಿಕಾ, ಜಾಜಿ ಅನುಷ್ಕಾ, ಕೆ. ದೀಪಿಕಾ ಪಡೆದರು.
ಕಾರ್ಯಕ್ರಮದಲ್ಲಿ ಗೊಗ್ಗ ಚನ್ನಬಸವರಾಜ, ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ನಿವೃತ್ತ ಪ್ರಾಚಾರ್ಯ ಎಂ.ಎಸ್. ಶಶೀಧರ ಶಾಸ್ತ್ರಿ, ಮುಖಂಡರಾದ ಅಯೋದ್ಯೆ ಶರಣಬಸವರಾಜ, ಅರವಿ ಬಸವನಗೌಡ, ಗೊಗ್ಗ ಶಾಂತಾ, ಗೊಗ್ಗ ಕಾರ್ತಿಕ್, ಸುಪ್ರಿಯಾ, ಬಸವಕುಮಾರ್, ಚಂದ್ರಶೇಖರ ಶಾಸ್ತಿ ಸೇರಿದಂತೆ ಅಕ್ಕನ ಬಳಗದ ಸದಸ್ಯರು,ವೀರಶಯವ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್