ಉತ್ತರ ಕನ್ನಡ/ ಮುಂಡಗೋಡ : 2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಸ್ಯ ಸಂರಕ್ಷಣಾ ಔಷದಿ ಖರೀದಿಗೆ ಸಹಾಯಧನ ನೀಡಲು ತೋಟಗಾರಿಕೆ ಇಲಾಖೆ, ಮುಂಡಗೋಡ ಮೂಲಕ ರೈತರಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ, ರೈತರು ಅಡಿಕೆ ಎಲೆ ಚುಕ್ಕೆರೋಗ ನಿಯಂತ್ರಣದ ಸಸ್ಯ ಸಂರಕ್ಷಣಾ ಔಷಧ ಖರೀದಿಸಿದ ಮೊತ್ತಕ್ಕೆ (ರೂ.1600/ಎಕರೆ) ಶೇ.30 ರ ಸಹಾಯಧನದಂತೆ ಗರಿಷ್ಠ 480 ರೂ. ಗಳ ಸಹಾಧನವನ್ನು ಮಾರ್ಗಸೂಚಿಯಂತೆ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು, ಆಸಕ್ತ ರೈತರು ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಯ ನಗದು ಬಿಲ್ (ಮೂಲ ಪ್ರತಿ) ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ ಕಾರ್ಡ ನಕಲು ಪ್ರತಿಗಳನ್ನು ನಿಗದಿತ ನಮೂನೆಯ ಅರ್ಜಿಯೊಂದಿಗೆ ಮಾರ್ಚ್ 24 ರೊಳಗೆ ತೋಟಗಾರಿಕೆ ಕಚೇರಿ, ಮುಂಡಗೋಡಗೆ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ತೋಟಗಾರಿಕೆ ಇಲಾಖೆ, ಮುಂಡಗೋಡ ನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೃಷ್ಣ ಕೊಳ್ಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ
