ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ 8000 ಮೌಲ್ಯದ ಎರಡು ಗ್ರೀನ್ ಮತ್ತು ವೈಟ್ ಬೋರ್ಡ್ ಗಳನ್ನು ದಾನಿಗಳಾದ ಸುವರ್ಧನ್ ಯತಿರಾಜ್ ಬೆಂಗಳೂರು, ಡಾ. ಸುದರ್ಶನ್ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರು ಮತ್ತು ಗಿರೀಶ್ ಮೂಡಿಗೆರೆ ಇವರು ನೀಡಿದ್ದಾರೆ.
ಇವರ ಸೇವಾ ಕಾರ್ಯವನ್ನು ಶಿಕ್ಷಕರಾದ ಸಿ ಆರ್ ಸುರೇಶ್ ರವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಮಮತಾ, ಅಧ್ಯಕ್ಷರಾದ ಸತೀಶ್, ಉಪಾಧ್ಯಕ್ಷರಾದ ಮಮತಾ, ಸದಸ್ಯರಾದ ದಿವ್ಯ, ಪೂರ್ಣಿಮಾ ಮತ್ತು ನವ್ಯ ಹಾಜರಿದ್ದರು. ಸರ್ಕಾರಿ ಶಾಲೆಗಳ ಉಳಿವಿಗೆ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ದಾನಿಗಳು ಹೇಳಿದರು.
- ಕರುನಾಡ ಕಂದ
