ಬೆಳಗಾವಿ /ಬೈಲಹೊಂಗಲ: ಕರ್ನಾಟಕ ಅಂಬೇಡ್ಕರ್ ಯುವ ಸೇನೆ ವತಿಯಿಂದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕ ತಹಶೀಲ್ದಾರ್ ಕಾರ್ಯಾಲಯದಲ್ಲಿರುವ ಗ್ರೇಡ್ 2 ತಹಶೀಲ್ದಾರ ವ್ಯಾಪ್ತಿಯಲ್ಲಿ ಬರುವ ದಾಖಲಾತಿಗಳನ್ನು ಮಂಜೂರು ಮಾಡಲು ಫಲಾನುಭವಿಗಳು ನೀಡಿದ ಅರ್ಜಿಯನ್ನು ಕಾಯ್ದಿರಿಸಿ ಅರ್ಜಿದಾರರು ಬಂದು ಅರ್ಜಿಯನ್ನು ಪರಿಶೀಲಿಸಿ ಕೇಳಿದಾಗ ಅರ್ಜಿಯ ಜೊತೆ ಹಣ ನೀಡುವುದಾದರೆ ಮತ್ತೊಂದು ಬಾರಿ ಅರ್ಜಿ ಸಲ್ಲಿಸಿ ಮಂಜೂರು ಮಾಡೋಣ ಎಂದು ಪ್ರತಿ ಅರ್ಜಿಗೆ ರಾಜಾ ರೋಷವಾಗಿ ಹಣ ಕೇಳಿ ಪಡೆಯುತ್ತಾ ಸಾಗಿದ್ದಾರೆ ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ಬಂದರೂ ಸುಮ್ಮನಿರುವ ಪರಿಸ್ಥಿತಿ ಎದುರಾಗಿದೆ ಆದ್ದರಿಂದ ಮೇಲಾಧಿಕಾರಿಗಳು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕೂಡಲೇ ಅಮಾನತುಗೊಳಿಸಬೇಕೆಂದು ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಪರಶುರಾಮ ರಾಯಬಾಗ ಮಾತನಾಡಿ ತಾಲೂಕು ತಹಶೀಲ್ದಾರ ಕಚೇರಿಯಲ್ಲಿ ಭ್ರಷ್ಟ ಲಂಚಾವತಾರ ಉಕ್ಕಿ ಹರಿಯುತ್ತಿದ್ದರೂ ಉನ್ನತ ಅಧಿಕಾರಿಗಳು ಈ ವಿಷಯವಾಗಿ ಕೂಡಲೇ ಗಮನಹರಿಸಿ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಬೇಕು ಇಲ್ಲವಾದಲ್ಲಿ ಈ ವಿಷಯವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ಭೀಮಪ್ಪ ಮಾದರ್, ದುರ್ಗಪ್ಪ ಚಿಕ್ಕನವರ್, ಮಂಜು ಮಾದರ್, ಸಂತೋಷ ಮಾದರ್, ಹಾಗೂ ಆತ್ಮಾನಂದ ಮಾದರ್ ಉಪಸ್ಥಿತರಿದ್ದರು.
- ಮಂಜು ಎಂ.ಚಿಕ್ಕಣ್ಣವರ
