ಹನೂರು : ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹನೂರು ತಾಲೂಕಿನ ಚಿಕ್ಕಲತ್ತೂರು ಸಮೀಪ ಶುಕ್ರವಾರ ಬೆಳಕಿಗೆ ಬಂದಿದೆ.
ಹನೂರು ತಾಲೂಕಿನ ಚಿಕ್ಕಲ್ಲತ್ತೂರು ಗ್ರಾಮದ ಮಾದಶೆಟ್ಟಿ (70) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಜಾನುವಾರುಗಳನ್ನು ಹುಡುಕಿಕೊಂಡು ಕಾಡಿಗೆ ಹೋಗಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ
ಜಾನುವಾರುಗಳು ಮೇಯಿಸಲು ಹೋಗಿದ್ದ ಈತ ಕಳೆದ 7ರಿಂದ 8ದಿನಗಳಿಂದನೂ ನಾಪತ್ತೆಯಾಗಿದ್ದನ್ನು ಆದ್ದರಿಂದ ಈತನ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಿದರೂ ಕೂಡಾ ಪತ್ತೆಯಾಗಿರಲಿಲ್ಲ.
ಆದರೆ ಶುಕ್ರವಾರ ಮಧ್ಯಾಹ್ನ 12ರ ವೇಳೆಯಲ್ಲಿ ಈತನ ಮೃತ ದೇಹ ಕೌದಳ್ಳಿ ಹಾಗೂ ಚಿಕ್ಕಲತ್ತೂರು ಸಮೀಪದ ಅರಣ್ಯ ಪ್ರದೇಶದ ಬಳಿ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ ಎನ್ನಲಾಗಿದೆ? ಈ ಸಂಬಂಧ ಪತ್ನಿ ಪುಟ್ಟಮ್ಮ ರಾಮಾಪುರ ಪೊಲೀಸರಿಗೆ ದೂರನ್ನು ನೀಡಿದ್ದು
ಸ್ಥಳಕ್ಕೆ ರಾಮಪುರ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಎ ಎಸ್ ಐ ಗುರುಸ್ವಾಮಿ. ಕಾನ್ಸ್ಟೇಬಲ್‌ಗಳಾದ ಮಹೇಂದರ್ ಮುಕುಂದರ್ ಕೂಡ್ಲೂರು ಡಾಕ್ಟರ್ ಕಿಶೋರ್ ಹಾಗೂ ಇನ್ನಿತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
