ಚಾಮರಾಜನಗರ/ ಹನೂರು :
ತಾಲೂಕಿನ ಲೋಕೋಪಯೋಗಿ ಅತಿಥಿ ಗೃಹದ ಅವರಣದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡಗಳ ಅಲೆಮಾರಿ ಹಾಗೂ ಅಲೆಮಾರಿ ಸೂಕ್ರ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಹಸುಗಳ ವಿತರಿಸಿ ನಂತರ ಮಾತನಾಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮಮ್ತಾಜ್ ಬೇಗಂ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,ಸಹಾಯಕ ನಿರ್ದೇಶಕ ಪಶುಸಂಗೋಪನೆ ಇಲಾಖೆ ಸಿದ್ದರಾಜು, ಸಮಾಜ ಕಲ್ಯಾಣಾ ಇಲಾಖೆ ಅಲೆಮಾರಿ ನಿಗಮದ ಅಧಿಕಾರಿ ಈಶ್ವರ್, ಮುಖಂಡರುಗಳಾದ ಉದ್ದಾನೂರು ಗಿರೀಶ್, ಪ್ರಮೋದ್ ,ವಿಜಯ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
