ವಿಜಯನಗರ: ದಿ. 22.03.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು, ಶನಿವಾರದಂದು ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಸೈಕಲ್ ಏರಿ ಪಟ್ಟಣದಲ್ಲಿ ಪ್ರದಕ್ಷಣೆ ಹಾಕುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು ಹಾಗೂ ಪಟ್ಟಣದಲ್ಲಿನ ಮೂಲಭೂತ ಸೌಕರ್ಯಗಳನ್ನು ಖುದ್ದಾಗಿ ಪರಿಶೀಲಿಸಿದರು.
ಭಕ್ತಾದಿಗಳ ದೇಣಿಗೆಯಿಂದ ಹೊಸದಾಗಿ ನಿರ್ಮಾಣವಾಗುತ್ತಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಜೋಡಿ ರಥಗಳ ಕಾಮಗಾರಿಗಳನ್ನು ಪರಿಶೀಲಿಸಿದರು ಮತ್ತು ಮುಂಬರುವ ರಥೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅವಶ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಮೃತ್ 2.0 ಯೋಜನೆಯಡಿ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಸಿಹಿ ನದಿ ನೀರು ಸರಬರಾಜಾಗುವ ಕಾಮಗಾರಿಗಳನ್ನು – ಪ್ರೆಜರ್ ಫಿಲ್ಟರ್ & ಜಾಕ್ ವಾಲ್ ಪ್ರದೇಶಕ್ಕೆ ಪರಿಶೀಲಿಸಿ ರಥೋತ್ಸವ ಪ್ರಾರಂಭಕ್ಕೂ ಮುಂಚೆಯೇ ಪಟ್ಟಣದ ಎಲ್ಲಾ ಮನೆಗಳಿಗೂ ನದಿ ನೀರು ಸರಬರಾಜು ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ಬಿಸಿಯೂಟ ತಯಾರಿ ಬಗ್ಗೆ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿ ನಂತರ ಶಿಕ್ಷಕರೊಂದಿಗೆ ಮತ್ತು ಮಕ್ಕಳೊಂದಿಗೆ ಶೈಕ್ಷಣಿಕ ರಂಗದ ಪ್ರಗತಿ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ಲಭ್ಯವಿದ್ದ ದಾಖಲೆಗಳನ್ನು ಪರಿಶೀಲಿಸಿ ತಕ್ಷಣವೇ ನಿಯಮಾನುಸಾರ ನಾಗರೀಕರಿಗೆ ಫಾರಂ 03 ವಿತರಿಸಲು ಸೂಚನೆ ನೀಡಲಾಯಿತು.
ಸರ್ಕಾರದ ನಿಮಾನುಸಾರ ಅನುಮೋದಿತವಲ್ಲದ ಲೇ-ಔಟ್ ಗಳಿಗೆ ಬಿ-ಖಾತಾ ವನ್ನು ವಿತರಿಸುವ ಕ್ರಮಕ್ಕೆ ಸೂಚನೆ ನೀಡಲಾಯಿತು.
KSRTC ಬಸ್ ನಿಲ್ದಾಣ , ಮಾರುಕಟ್ಟೆ ಪ್ರದೇಶ, ಆಟೋ ಸ್ಟ್ಯಾಂಡ್ ಮತ್ತು ಇತರೆ ಸಾರ್ವಜನಿಕ ಪ್ರದೇಶದಲ್ಲಿ ಸಾರ್ವಜನಿಕರೊಂದಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಸಾರ್ವಜನಿಕರ ಬಂಧುಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದರು ಸಾರ್ವಜನಿಕರಿಗೆ ಯಾವುದೇ ತೊಂದರೆಗಳ ಒಳಗಾಗದೆ ಸೌಲಭ್ಯಗಳನ್ನು ಇರುವುದರಿಂದ ಕುಡಿಯುವ ನೀರು ಹಾಗೂ ಬೆಂಕಿ ಅಪಘಾತಗಳು ಸಂಭವಿಸಬಹುದು ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಅಲ್ಲ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
