ಯಾದಗಿರಿ/ ಗುರುಮಠಕಲ್ : ನೆರೆಯ ಆಂಧ್ರ ಪ್ರದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಸುಕ್ಷೇತ್ರ ಶ್ರೀಶೈಲಂ ಸಹ ಒಂದು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವವು ಯುಗಾದಿ ಹಬ್ಬದ ದಿನದಂದು ನಡೆಯಲಿದೆ. ಈ ಜಾತ್ರೆಗೆ ಹೋಗಲು ಗುರುಮಠಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳ ಅನುಕೂಲಕ್ಕಾಗಿ ಗುರುಮಠಕಲ್ ಮತ್ತು ಯಾದಗಿರಿ ಭಾಗದಿಂದ ವಿಶೇಷ ಬಸ್‌ಗಳ ವ್ಯವಸ್ಥೆ
ಮಾಡಲು ಗುರುಮಠಕಲ್ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಗುರುಮಠಕಲ್ ಘಟಕ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್ ಯರನಾಳ ,ಸಹಾಯಕ ಸಂಚಾರಿ ನಿರೀಕ್ಷಕರು ಶ್ರೀ ಪ್ರಕಾಶ ದಂತಪುರ ಮತ್ತು ಸಂಚಾರಿ ನಿಯಂತ್ರಕರಾದ ಶ್ರೀ ಶರಣಪ್ಪ ಹುಗಾರ ಇವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ನಿಕಟ ಪುರ್ವ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಹಿರೇಮಠ, ಶ್ರೀ ಶಿವಾನಂದ ಬೂದಿ, ಶ್ರೀ ವಿಜಯ ರಾಜ ಶಾಸ್ತ್ರಿ, ಶ್ರೀ ರವಿಕುಮಾರ್ ವಾರದ,ಶ್ರೀ ನಾಗಣ್ಣ ಕಾಳಗಿ ಹಾಜರಿದ್ದರು.
ವರದಿ ಜಗದೀಶ್ ಕುಮಾರ್
