ಕಲಬುರಗಿ / ಜೇವರ್ಗಿ: ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಏರ್ಪಡಿಸಿದ ಕರ್ನಾಟಕ ರಾಜ್ಯ ಬರಹಗಾರರ ಜಿಲ್ಲಾ ಘಟಕ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ಮಹಾಂತೇಶ ಎನ್ ಪಾಟೀಲ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದೇವೆ ಎಂದು ಬರಹಗಾರ ಸಂಘದ ರಾಜ್ಯ ಘಟಕ ತಿಳಿಸಿದೆ.
ಸರಿ ಸುಮಾರು ಕಲಬುರಗಿ ಜಿಲ್ಲೆಯ ಎಲೆ ಮರೆಯಕಾಯಿಯಂತೆ ಇರುವ ಸಾಹಿತಿಗಳು ಒಂದುಗೂಡಿಸಿ, ಅವರಿಗೆ ಪ್ರೇರಣೆ, ಸ್ಫೂರ್ತಿ ಕೊಟ್ಟು, ಕವನ, ಕಥೆ, ಕಾದಂಬರಿ, ಟಂಕಾ, ಹೈಕು, ಚುಟುಕು, ರುಬಾಯಿ ಹೀಗೆ ಹಲವಾರು ಸಾಹಿತ್ಯ ಪ್ರಕಾರಗಳು ಬರೆಯಲು ಪ್ರೇರಣೆ ಕೊಟ್ಟು ಕಲಬುರಗಿ ಜಿಲ್ಲೆಯ ಬರಹಗಾರರಲ್ಲಿ ಪರಿಚಯಸಿ ಜೊತೆಗೆ ಹಲವಾರು ಕವಿಗೊಷ್ಠಿ ನಡೆಸಿ, ಸಾಧಕರಿಗೆ, ಪ್ರಶಸ್ತಿ ನೀಡಿ ಗೌರವಿಸಿದರು. ಇವರ ಕೀರ್ತಿಯ ಸಾಧನಗೆ ಇವರಿಗೆ ಕೂಡ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದರು.
ವರದಿ: ಚಂದ್ರಶೇಖರ ಪಾಟೀಲ್
