ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ದಿ. 23.03.2025ರಂದು ಹತ್ತನೇ ತಾಲೂಕು ಸಾಹಿತ್ಯ ಸಮ್ಮೇಳನ ಜರುಗಿತು. ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯ ನೀರಾವರಿ ಕುರಿತಂತೆ ಪತ್ರಕರ್ತ ಆನಂದ ತೀರ್ಥ ಪ್ಯಾಟಿ ಪ್ರಸ್ತುತ ಸಮಸ್ಯೆ, ಸವಾಲುಗಳು,
ಅವುಗಳನ್ನು ಎದುರಿಸುವ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ವಾರ್ತಾಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ದಿವಂಗತ ರಾಜಶೇಖರ ಅಂಗಡಿ, ಅವರ ಪುಣ್ಯ ಸ್ಮರಣೆಯ ಈ ದಿನ ಅವರ ಊರಿನಲ್ಲಿ,ಅವರ ಹೆಸರಿನ ವೇದಿಕೆಯಲ್ಲಿ ಮಾತಾಡಲು, ಹೆಮ್ಮೆ ಎನಿಸುತ್ತದೆಯಾದರೂ ಅವನಿಲ್ಲದ್ದನ್ನು ನೆನೆದರೆ ಮನಸ್ಸಿಗೆ ನೋವಾಗುತ್ತದೆ ಎಂದರಲ್ಲದೆ ಕ್ರಿಯಾಶೀಲ ವ್ಯಕ್ತಿತ್ವ ದ ರಾಜಶೇಖರನ ಗುಣಗಾನ ಮಾಡಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ಬಿ.ಎಸ್ ಪಾಟೀಲ, ಹಿರಿಯ ಅಭಿಯೋಜಕರು, ನ್ಯಾಯವಾದಿಗಳು, ಬೆಂಗಳೂರು ಇವರು ಈ ಭಾಗದ ಸಮಸ್ಯೆಗಳಿಗೆ ಧ್ವನಿ ಎತ್ತುವವರೆ ಇಲ್ಲದಂತಾಗಿದೆ, ಎಂದರು.
ನಂತರ ಜರುಗಿದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಪ್ಪಳದ ಹಿರಿಯ ಕವಿಯತ್ರಿ, ಶಿಕ್ಷಕಿ ಅನಸೂಯಾ ಜಹಗೀರದಾರ್ ವಹಿಸಿದ್ದರು. ಪುಷ್ಪಲತಾ ಯೋಳಭಾವಿ, ಶಿವನಗೌಡ ಪಾಟೀಲ, ಈರಪ್ಪ ಬಿಜಲಿ, ಅನ್ನಪೂರ್ಣ ಪದ್ಮಶಾಲಿ,ರಾಜಾಸಾಬ್ ರಾಟೆ, ಶಿವಮ್ಮ ಗುರುಸ್ಥಲಮಠ,ಮಾರುತಿ ಈಳಿಗೇರ, ಶಿವಪ್ರಸಾದ್ ಹಾದಿಮನಿ, ಮುಂತಾದವರು ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಮಹೇಶ ಬಳ್ಳಾರಿ ,ಆಶಯ ನುಡಿಗಳನ್ನಾಡಿದರು, ವೇದಿಕೆಯಲ್ಲಿ,ಶಿ.ಕಾ ಬಡಿಗೇರ,ಅಕ್ಬರ್ ಕಾಲಿ ಮಿರ್ಚಿ, ಕಾರ್ಯಕ್ರಮದ ಸರ್ವಾಧ್ಯಕ್ಷ ಎಂ.ಮಾಲಾ ಬಡಿಗೇರ ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಹ್ಯಾಟಿ, ಕಾರ್ಯಕ್ರಮವನ್ನು ನಿರೂಪಿಸಿದರು, ಶಿವನಗೌಡ ಪಾಟೀಲ ವಂದಿಸಿದರು.
- ಕರುನಾಡ ಕಂದ
