
ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ, ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಅರ್ಥಶಾಸ್ತ್ರ ವಿಭಾಗ ಆಯೋಜಿಸಿದ ಕೇಂದ್ರ ಬಜೆಟ್ 2025 26ರ ಕುರಿತು ವಿದ್ಯಾರ್ಥಿಗಳ ಪ್ರಬಂಧ ಮಂಡನೆ ಕಾರ್ಯಕ್ರಮವು ಸೋಮವಾರ ಕಾಲೇಜಿನಲ್ಲಿ ನೆರವೇರಿತು. ಅಂತಿಮ ಬಿ.ಎ ಅರ್ಥಶಾಸ್ತ್ರ ವಿದ್ಯಾರ್ಥಿಗಳು ಕೇಂದ್ರ ಬಜೆಟ್ ನ ಕುರಿತಾಗಿ ಪ್ರಬಂಧ ಮಂಡನೆಯನ್ನು ಮಾಡಿದರು. ಪ್ರಬಂಧ ಮಂಡನೆ ವಸ್ತುನಿಷ್ಠ ರೂಪವಾಗಿದ್ದು ಬಜೆಟ್ ನ ವಿವಿಧ ಮಜಲುಗಳನ್ನು ವಿದ್ಯಾರ್ಥಿನಿಯರು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ಗಣಪತಿ ಕೆ. ಲಮಾಣಿ ರವರು ವಿದ್ಯಾರ್ಥಿನಿಯರು ಮಂಡಿಸಿದ ಪ್ರಬಂಧಗಳ ಸಂಗ್ರಹ ರೂಪದ ಪುಸ್ತಕವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿನಿಯರ ಪ್ರಯತ್ನವನ್ನು ಶ್ಲಾಘಿಸಿದರು. ಕೇಂದ್ರ ಬಜೆಟ್ ವ್ಯಕ್ತಿ ರಾಜ್ಯ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಆರ್ಥಿಕ ದಿಕ್ಸೂಚಿಯನ್ನು ನೀಡುತ್ತದೆ ಇಂತಹ ಬಗ್ಗೆ ವಿಶ್ಲೇಷಣೆಯಲ್ಲಿ ಎಲ್ಲರಿಗೂ ಉಪಯುಕ್ತವಾದುದು. ಅರ್ಥಶಾಸ್ತ್ರ ವಿಷಯದಲ್ಲಿ ಬಹಳಷ್ಟು ಅವಕಾಶಗಳು ಲಭ್ಯವಿದ್ದು ವಿದ್ಯಾರ್ಥಿನಿಯರು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಸಂಶೋಧನೆಗಳಿಗೆ ಸಿದ್ದಗೊಳಿಸಲು ಸಹಾಯಕವೆಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಆರತಿ ಎ ಸಣ್ಣ ಉದ್ಯಮದಾರರು ಮತ್ತು ಅರ್ಥಶಾಸ್ತ್ರ ಉಪನ್ಯಾಸಕರು ಕೇಂದ್ರ ಬಜೆಟ್ ನ ಸಂಕ್ಷಿಪ್ತ ವಿವರಣೆ ನೀಡಿ ರಾಷ್ಟ್ರದ ಪ್ರಗತಿಗೆ ಬಜೆಟ್ ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಪ್ರಾಪ್ತಮಿಕದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶುಭ ಟಿ.ಇ ಬಜೆಟ್ ವಿಶ್ಲೇಷಣೆ ವೈಯಕ್ತಿಕ ಹಾಗೂ ರಾಷ್ಟ್ರೀಯ ಹಿನ್ನೆಲೆಯಲ್ಲಿ ಮಹತ್ವವಾದುದು ಎಂದು ತಿಳಿಸಿ ವಿದ್ಯಾರ್ಥಿನಿಯರ ಪ್ರಯತ್ನವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಾಗರತ್ನ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾಕ್ಟರ್ ಹುಲಿಗೆಮ್ಮ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾಕ್ಟರ್ ಅಶೋಕ್ ಕುಮಾರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ನರಸಿಂಹ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಬಸಮ್ಮ ಹಾಜರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶ್ರೀದೇವಿ ನಿರೂಪಿಸಿದರು, ವಿದ್ಯಾರ್ಥಿನಿ ರಾಜೇಶ್ವರಿ ಸ್ವಾಗತಿಸಿದರು, ವಿದ್ಯಾರ್ಥಿನಿ ಕಮಲ ವಂದನಾರ್ಪಣೆಯನ್ನು ಸಲ್ಲಿಸಿದರು, ವಿದ್ಯಾರ್ಥಿನಿ ಶಾಶ್ವತ, ಪ್ರಾರ್ಥನಾ ಗೀತೆ ನೆರವೇರಿಸಿಕೊಟ್ಟರು.
- ಕರುನಾಡ ಕಂದ
