
ಕೊಪ್ಪಳ / ಕುಕನೂರ : ಕಳ್ಳ ಹೊಕ್ಕ ಮನೆ ಉಳಿಯಬಹುದು ಆದರೆ ಕೊಳ್ಳಿ ಹೊಕ್ಕ ಮನೆ ಉಳಿಯಲಾರದು ಮದ್ಯಪಾನ ಇದು ಕೊಳ್ಳಿ ಇದ್ದಂತೆ ಆದ್ದರಿಂದ ಮದ್ಯಪಾನ ಪ್ರಿಯರು ಇದರಿಂದ ದೂರವಿರಬೇಕು ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ದೀಪ ಬೆಳಗಿಸಿ ಮಾತನಾಡಿದರು. ದುಷ್ಟ ಚಟಗಳಿಂದ ದೂರವಿದ್ದಾಗ ನೆಮ್ಮದಿ ಕಾಣುವದಕ್ಕೆ ಸಾಧ್ಯ ಎಂದು ಪಿಡಿಓ ವೀರನಗೌಡ ಚನ್ನನಗೌಡ್ರ ಅವರು ಮೈಲಾರಲಿಂಗೇಶ್ವರ ದೇವಸ್ಥಾನ ತಳಕಲ್ಲ ಗ್ರಾಮದಲ್ಲಿ ನವಜೀವನೋತ್ಸವ ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯವರಿಗೆ ಸಲಹೆ ನೀಡಿದರು. ಮದ್ಯವ್ಯಸನಿಗಳು ಮೋಜು ಮಸ್ತಿಗಾಗಿ ಕುಡಿದು ನಂತರ ಚಟಕ್ಕೆ ದಾಸರಾಗಿ ಚಟ್ಟ ಕಟ್ಟಿ ಅವರ ಬದುಕು ಕಗ್ಗತ್ತಲಾಗಿ ಅವರ ಕುಟುಂಬ ಬೀದಿಪಾಲಾಗಿ ಹೋಗುತ್ತದೆ ಆದ್ದರಿಂದ ಜಾಗೃತಿ ವಹಿಸಬೇಕು ಎಂದು ಜನಜಾಗೃತಿ ಸಮಿತಿ ಸದಸ್ಯ ವೀರಣ್ಣ ನಿಂಗೋಜಿ ಅವರು ಮಾತನಾಡಿದರು. ಕುಟುಂಬದಲ್ಲಿ ಮದ್ಯ ಮಾರಾಟ ಮಾಡುವ ಸಮಯದಲ್ಲಿ ವಿದ್ಯಾವಂತ ಮಹಿಳೆಯರು ಸಿಲುಕಿ ಕೋರ್ಟ್ ಕಛೇರಿ ಅಲೆದಾಡುವ ಪ್ರಸಂಗಗಳು ಜರುಗಿವೆ ಇದರಿಂದ ಹೊರಬರಲಾರದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ತೊಂದರೆ ಅನುಭವಿಸುತ್ತಿದ್ದಾರೆ ಆದ್ದರಿಂದ ಜಾಗೃತರಾಬೇಕು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯೆ ಸಾವಿತ್ರಿ ಗೊಲ್ಲರ ಅವರು ಮಾತನಾಡಿದರು. ಜೀವನದ ಬದುಕಿನಲ್ಲಿ ಬದಲಾವಣೆ ಪರ್ವ ಜರುಗಿದಾಗ ಹೊಸ ಬದುಕು ನಿರ್ಮಿಸಲು ಸಾಧ್ಯ ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಕರಬಸಯ್ಯ ಬಿನ್ನಾಳ ಅವರು ಮಾತನಾಡಿದರು. ತಳಕಲ್ಲ ನವಜೀವನ ಸಮಿತಿ ಅಧ್ಯಕ್ಷ ಷಣ್ಮುಖಯ್ಯ ಅವರು ಅದ್ಯಕ್ಷತೆ ವಹಿಸಿ ಮಾತನಾಡಿ ನಮಗೆಲ್ಲರಿಗೂ ಈ ಯೋಜನೆಯಲ್ಲಿ ಗೌರವ ಸ್ಥಾನ ಸಿಗುವುದಕ್ಕೆ ಸಾಧ್ಯವಾಯಿತು ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಪ್ರಕಾಶ್ ರಾವ್ , ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ನಾಗೇಶ್ ವಾಯ್ ಎ , ಯಲಬುರ್ಗಾ ಯೋಜನಾಧಿಕಾರಿ ಸತೀಶ ಜಿ, ಮುಖಂಡರಾದ ಲಿಂಬನಗೌಡ ಪೋಲಿಸ್ ಪಾಟೀಲ, ಮೇಲ್ವಿಚಾರಕ ಶಿವಪ್ಪ ಪೂಜಾರ, ಸೇವಾ ಪ್ರತಿನಿಧಿಗಳಾದ ಸುಮಂಗಲಾ, ನೀಲಮ್ಮ, ಸುನಂದಾ ಹಾಗು ಉಡಚಮ್ಮದೇವಿ ನವ ಜೀವನ ಸಮಿತಿ ತಳಕಲ್ಲ ಸಮಿತಿಯ ಸರ್ವ ಪದಾಧಿಕಾರಿಗಳು, ನವಜೀವನ ಪೋಷಕರು ಭಾಗವಹಿಸಿದ್ದರು.
- ಕರುನಾಡ ಕಂದ
