ಬಳ್ಳಾರಿ / ಕಂಪ್ಲಿ : ರಾಷ್ಟ್ರೀಯ ಅಂದತ್ವ ನಿವಾರಣಾ ಕಾರ್ಯಕ್ರಮದ ಅಡಿಯಲ್ಲಿ ಬಳ್ಳಾರಿ ಜಿಲ್ಲೆಯ CSR ನಿಧಿಯ ಸಹಾಯದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಬಳ್ಳಾರಿ ಹಾಗೂ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಂಪ್ಲಿ ವತಿಯಿಂದ ದಿನಾಂಕ 27–03–2025 ಗುರುವಾರಂದು ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿಯಲ್ಲಿ ಉಚಿತ ನೇತ್ರ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ. ಕಣ್ಣಿನ ಪೊರೆ ಇರುವವರಿಗೆ ಮಾತ್ರ ತಪಾಸಣೆ ಮಾಡಿ ಅವರಿಗೆ ಶುಕ್ರವಾರ ಬೆಳಿಗ್ಗೆ ಆಪರೇಷನ್ ಮಾಡಲಾಗುವುದು ಆದ್ದರಿಂದ ಅವ್ಯಶಕತೆ ಇರುವವರು ಆಪರೇಷನ್ ಮಾಡಿಸಿಕೊಳ್ಳಲು BPL ಕಾರ್ಡ್ ಹಾಗೂ ಆಧಾರ ಕಾರ್ಡ್ ನ್ನು ತರಲು ಸೂಚಿಸಲಾಗಿದೆ. ಕಣ್ಣಿನ ಪೊರೆ ಇದ್ದವರಿಗೆ ಮಾತ್ರ ಬರಲು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಂಪ್ಲಿ ಸಂಪರ್ಕಿಸಲು ಕೋರಲಾಗಿದೆ.
ವರದಿ : ಜಿಲಾನ್ ಸಾಬ್ ಬಡಿಗೇರ.
