ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳಲ್ಲಿರುವ ಪ್ರತಿಭೆ ಇನ್ನಷ್ಟು ಹೊರಹೊಮ್ಮಲು ಕಲಿಕಾ ಹಬ್ಬದಿಂದ ಮಾತ್ರ ಸಾಧ್ಯ : ಬಿ. ಇ. ಓ. ಸಿದ್ದಲಿಂಗ ಮೂರ್ತಿ

ಬಳ್ಳಾರಿ : ಕಂಪ್ಲಿ ತಾಲೂಕಿನ ಹಂಪದೇವನಹಳ್ಳಿ ಗ್ರಾಮದಲ್ಲಿ ನಡೆದ ದೇವಸಮುದ್ರ ಕ್ಲಸ್ಟರ್ ಮಟ್ಟದ ಎಫ್.ಎಲ್. ಎನ್ . ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ. ಇ. ಓ. ಸಿದ್ದಲಿಂಗ ಮೂರ್ತಿ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಇನ್ನಷ್ಟು ಹೊರ ಹೊಮ್ಮಲು ಕಲಿಕೆ ಹಬ್ಬದಿಂದ ಸಾಧ್ಯ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಪಾಲಕರೊಂದಿಗೆ ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕು ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದು ಸಂತೋಷವಾಗಿದೆ ಎಂದರು. ನಂತರ ಮಾತನಾಡಿದ ಹಂಪ ದೇವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ.ಸಿ. ಅಧ್ಯಕ್ಷ ಎಚ್. ಹುಲುಗಪ್ಪ ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಕಲಿಕೆ ಹಬ್ಬ ಪೂರಕವಾಗಿದೆ ಎಂದು ತಿಳಿಸಿದರು. ನಂತರ ದೇವಸಮುದ್ರ ಸಿ. ಆರ್. ಪಿ. ಎಸ್. ಈರೇಶ ಮಾತನಾಡಿ ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು, ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಹಾಗೂ ಒಂದು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತದೆ. ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸಲು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ತಿಳಿಸಿದರು. ತದನಂತರ ಮುಖ್ಯ ಗುರು ವೀರೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಇಲ್ಲಿನ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಕಥೆ ಹೇಳುವುದು, ಸ್ಮರಣ ಪರೀಕ್ಷೆ, ಕೈಬರಹ, ಸಂತೋಷದಾಯಕ ಗಣಿತ, ರಸಪ್ರಶ್ನೆ, ಗಟ್ಟಿ ಓದು, ಮೋಜಿನ ಆಟಗಳು, ಸಂವಾದಾತ್ಮಕ ಹೀಗೆ ಏಳು ಸ್ಪರ್ಧೆಗಳು ಜರುಗಿದವು. ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ಗ್ರಾಮದಲ್ಲಿ ಕಲಿಕಾ ಹಬ್ಬದ ಸುಂದರ ಮೆರವಣಿಗೆ ಜರಗಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ, ಷಾಮಿಯಾಚಂದ ಪ್ರೌಢಶಾಲೆಯ ಉಪಪ್ರಾಚಾರ್ಯ ಸುಜಾತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸಿ ಆರ್ ಪಿ ಈರೇಶ್, ಎನ್.ಪಿ. ಎಸ್. ನೌಕರ ಸಂಘದ ರಾಜ್ಯಾಧ್ಯಕ್ಷ ಎಂ. ನಾಗನಗೌಡ, ಎಂ.ಎ. ಜಿಪಿಟಿ ಶಿಕ್ಷಣ ಸಂಘದ ಅಧ್ಯಕ್ಷ ಮಂಜುನಾಥ, ಇಸಿಓ ರೇವಣ್ಣ, ಸಿ.ಆರ್‌.ಪಿ ಗಳಾದ ರೇಣುಕಾರಾಧ್ಯ, ಚಂದ್ರಯ್ಯ ಸೊಪ್ಪಿನ ಮಠ, ಭೂಮೇಶ್ವರ್, ಜಗಜೀವನರಾಮ ಸಂಘದ ರಾಜ್ಯಾಧ್ಯಕ್ಷ ಪಂಪಾಪತಿ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷ ಸುನಿತಾ ಪೂಜಾರ, ರಾಜೇಶ್ವರಿ, ರಾಮಣ್ಣ, ಶಿಕ್ಷಕರಾದ H. ಜಡೆಪ್ಪ, ಪ್ರಭಾಕರ, ನಾಗವೇಣಿ, ಸೋಮಶೇಖರ, ಪ್ಯಾರಿಜಾನ್, ಗೌರಮ್ಮ ಜೋಗಿ ರುದ್ರಪ್ಪ, ಗ್ರಾಮಸ್ಥರಾದ ಬಸಪ್ಪ, H. ಹುಲುಗಪ್ಪ ಅತಿಥಿ ಶಿಕ್ಷಕರು ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ