ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀಮದ್ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವ ಯುಗಮಾನೋತ್ಸವ

ಬಳ್ಳಾರಿ / ಕಂಪ್ಲಿ : ನಗರದ ಸಂಗಾತ್ರಾಯ ಪಾಠಶಾಲೆಯಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜವು ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತೋತ್ಸವ ಯುಗಮಾನೋತ್ಸವ ಸಮಾರಂಭ ಜರಗಿತು. ಹೆಬ್ಬಾಳದ ಬ್ರಹನ್ಮಮಠದ ಶ್ರೀ ಷ||ಬ್ರ||ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ರೇಣುಕಾಚಾರ್ಯರ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಸರ್ಕಾರವೇ ರೇಣುಕಾಚಾರ್ಯರ ಜಯಂತೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಸನಾತನ ವೀರಶೈವ ಧರ್ಮ ಜಾಗೃತಿಗಾಗಿ ಆದಿ ಜಗದ್ಗುರು ರೇಣುಕಾಚಾರ್ಯರು ಜನಿಸಿದರು. ವೀರಶೈವ – ಲಿಂಗಾಯತರು ಬೇರೆ ಬೇರೆ ಅಲ್ಲ ಬಸವಣ್ಣ ಮತ್ತು ಆದಿ ಜಗದ್ಗುರು ರೇಣುಕಾಚಾರ್ಯರು ವೀರಶೈವ ಮತ್ತು ಲಿಂಗಾಯತರ ಎರಡು ಕಣ್ಣುಗಳಂತಾಗಿದ್ದು ಸಮಾನ ಗೌರವದಿಂದ ಕಾಣಬೇಕಿದೆ. ಸರ್ವರನ್ನೂ ಒಂದಾಗಿ ಕರೆದುಕೊಂಡು ಸಾಗುವ ಹಾಗೂ ಸಂಘಟಿಸಿ ಸಮಾಜದಲ್ಲಿ ಶಕ್ತಿಯನ್ನು ನೀಡುವಲ್ಲಿ ಪಂಚಪೀಠಗಳು ನಿರತವಾಗಿವೆ ಎಂದರು. ಹಂಪಿ ಸಾವಿರ ದೇವರ ಮಠದ ಶ್ರೀ ಷ||ಬ್ರ||ವಾಮದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ರೇಣುಕಾಚಾರ್ಯರು ಸರ್ವರನ್ನು ಒಂದುಗೂಡಿಸುವ, ಸರ್ವರಿಗೂ ಹಿತವಾಗುವ ಧರ್ಮವನ್ನು ಬೋಧಿಸಿದ್ದಾರೆ. ಶತ್ರು ಇಲ್ಲದವ, ಶತ್ರು ಆಗಿರದವ, ಜಗದ ಕರ್ತವನ್ನು ಪಿತೃವಿನಂತೆ ದೇಹದ ಮೇಲೆ ಧರಿಸಿಕೊಂಡು ಜಗದ ಜನರನ್ನು ಮಿತ್ರರಂತೆ ಕಾಣುವ ಅಜಾತ ಶತ್ರುವೇ ವೀರಶೈವ ಲಿಂಗಾಯತನಾಗಿದ್ದಾನೆ. ಸನಾತನ ವೀರಶೈವ ಲಿಂಗಾಯತ ತತ್ವಗಳು ಪಂಚಪೀಠಗಳ ಪಂಚ ತತ್ವಗಳಿವೆ ಎಂದರು. ಬುಕ್ಕಸಾಗರದ ಶ್ರೀ ಷ||ಬ್ರ|| ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪಾಠಶಾಲೆಯ ಎಂ. ಎಸ್. ಶಶಿಧರ ಶಾಸ್ತ್ರಿ, ಘನಮಟ್ಟದಯ ಹಿರೇಮಠ, ಕಲ್ಯಾಣ ಚೌಕಿ ಮಠದ ಬಸವರಾಜ ಶಾಸ್ತ್ರಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಿ.ಎಂ. ಮೂಕಯ್ಯಸ್ವಾಮಿ, ಮುಖಂಡರಾದ ಗೊಗ್ಗ ಚೆನ್ನಬಸವರಾಜ, ಅರಬಿ ಬಸವನಗೌಡ, ಕೆ.ಎಂ. ಹೇಮಯ್ಯಸ್ವಾಮಿ, ಎಸ್. ಎಂ. ಚನ್ನಯ್ಯ ಸ್ವಾಮಿ, ಇಟಗಿ ಬಸರಾಜ ಗೌಡ, ಕಲ್ಗುಡಿ ವಿಶ್ವನಾಥ, ಎಸ್. ಎಂ.ನಾಗರಾಜ, ಜಿ. ಚಂದ್ರಶೇಖರಗೌಡ, ಕೆ. ಎಂ.ವಾಗೀಶ, ಎಲಿಗಾರ್ ವೆಂಕಟರೆಡ್ಡಿ, ಎಸ್. ಡಿ . ಬಸವರಾಜ, ವಾಲಿ ಕೊಟ್ರಪ್ಪ, ಬಿ. ಸದಾಶಿವಪ್ಪ, ಜೀರು ಗಾದಿಲಿಂಗ, ವಿ ವಿದ್ಯಾಧರ, ಬಳೆ ಮಲ್ಲಿಕಾರ್ಜುನ, ಎನ್ ಎಂ ಪತ್ರಯ ಸ್ವಾಮಿ, ಮುಕ್ಕುಂದಿ ಶಿವಗಂಗಮ್ಮ ಸೇರಿದಂತೆ ವೀರಶೈವ ಸಮಾಜ ಬಾಂಧವರು ಸದ್ಭಕ್ತರು ಉಪಸ್ಥಿತರಿದ್ದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ