ಬೀದರ್/ ಬಸವಕಲ್ಯಾಣ : ಗವಿಮಠದಲ್ಲಿ ದಿನಾಂಕ ೧೦/೦೪/೨೦೨೫ ರಂದು ಜರುಗಲಿರುವ ಶ್ರೀ ಘನಲಿಂಗ ರುದ್ರಮುನಿ ಜಾತ್ರಾ ಮಹೋತ್ಸವ ಮತ್ತು ಕರ್ನಾಟಕ ರಾಜ್ಯ ೧೩ನೆಯ ಚುಟುಕು ಸಾಹಿತ್ಯ ಸಮ್ಮೇಳನ-೨೦೨೫ ಹಾಗೂ “ಅಭಿನವ ಘನಲಿಂಗ ಶ್ರೀ” ಪ್ರಶಸ್ತಿ ಪ್ರದಾನ ಸಮಾರಂಭದ ಭಿತ್ತಿ ಪತ್ರಿಕೆಯು ಪೂಜ್ಯ ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಬಿಡುಗಡೆ ಮಾಡಿದರು.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಧನರಾಜ್ ತಾಳಂಪಳ್ಳಿ, ಅರ್ಜುನ್ ಕನಕ, ಪ್ರೊ. ಸೂರ್ಯಕಾಂತ ಶೀಲವಂತ, ಮಲ್ಲಿಕಾರ್ಜುನ್ ಅಲಗೂಡೆ, ಪ್ರೊ.ರುದ್ರೇಶ್ವರ ಗೋರ್ಟಾ, ಶಾಂತಲಿಂಗ ಮಠಪತಿ ಕಸಾಪ ಅಧ್ಯಕ್ಷರು, ಮಲ್ಲಿಕಾರ್ಜುನ್ ಪಾಟೀಲ್ ಹಳ್ಳಿ, ಶ್ರೀಶೈಲ್ ವಾತಡೆ, ಅಶೋಕ ಪಾಟೀಲ, ಸಂತೋಷ ಮಾಲಗಾರ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ
