ಬಳ್ಳಾರಿ / ಕಂಪ್ಲಿ : ಧಾರವಾಡದ ರಂಗಾಯಣ ಸುವರ್ಣ ಸಮುಚ್ಚಯ ಭವನದಲ್ಲಿ ಧಾರವಾಡದ ಕರ್ನಾಟಕ ಸೋಶಿಯಲ್ ಕ್ಲಬ್ ಮತ್ತು ಹುಬ್ಬಳ್ಳಿಯ ವಿಶ್ವಾಸ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ 51 ಜನ್ಮದಿನದ ನಿಮಿತ್ತ ಅಪ್ಪು ಉತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ನಿರೂಪಕ ಸಂಪನ್ಮೂಲ ವ್ಯಕ್ತಿ ಎಸ್ ರಾಮಪ್ಪ ಅವರ ಶಿಕ್ಷಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಗಾಗಿ ಪುನೀತ್ ರಾಜಕುಮಾರ್ ಸ್ಪೂರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಸೇವಾ ಕ್ಷೇತ್ರದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಸ್ಪೂರ್ತಿ ಹಾಗೂ ಪುನೀತ್ ಅವರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರ ಎಂದರು
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಸರ್ವಧರ್ಮ ಸಮಾಜ ಸೇವಕ ರಮೇಶ್ ಮಹದೇವಪ್ಪ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಜಿಲ್ಲಾ ಘಟಕದ ಮಹಿಳಾ ಗೌರವ ಅಧ್ಯಕ್ಷ ವೀಣಾ ಹೊಸಮನಿ, ಸಾಹಿತಿ ಶಿಕ್ಷಕ ಪಂಡಿತ್ ಅವಜಿ, ವಿಶ್ವಾಸ್ ಫೌಂಡೇಶನ್ ಮಂಜುಳಾ ಬೆಣ್ಣೆ, ಕರ್ನಾಟಕ ಸೋಶಿಯಲ್ ಕ್ಲಬ್ ನ ಚಂದ್ರಶೇಖರ್ ಮಾಡಲಗೇರಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
