ತುಮಕೂರು/ ತಿಪಟೂರು – ತಾಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಯಶಸ್ವಿನಿ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಿಪಟೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಹರೀಶ್ ಕುಮಾರ್ ರವರು ರೈತರು, ಬಡವರು ಹಾಗೂ ಮಧ್ಯಮ ವರ್ಗದ ಸದಸ್ಯರನ್ನು ಯಶಸ್ವಿನಿ ವಿಮಾ ಯೋಜನೆಯಲ್ಲಿ ನೊಂದಣಿ ಮಾಡಿಸುವುದು ಸಮಾಜ ಸೇವಾ ಕಾರ್ಯವೆಂದು ಭಾವಿಸಬೇಕು. ಯಶಸ್ವಿನಿ ವಿಮೆಯು ಖಾಸಗಿ ವಿಮಾ ಕಂಪನಿಗಳಂತೆ ಆದಾಯ ಉದ್ದೇಶಕ್ಕಾಗಿ ನಡೆಸುತ್ತಿರುವ ವಿಮಾ ಯೋಜನೆ ಅಲ್ಲ. ಇದರಲ್ಲಿ ಒಬ್ಬ ಸದಸ್ಯರಿಗೆ ಕೇವಲ ಒಂದು ನೂರು ರೂ. ಗಳಂತೆ ಶುಲ್ಕ ವಿಧಿಸಲಾಗುವುದು. ಹಾಗೂ ಪ್ರತಿ ಸದಸ್ಯರಿಗೆ 5 ಲಕ್ಷ ರೂಗಳವರೆಗೆ ಶಸ್ತ್ರಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು ಹಾಗೂ ಖಾಸಗಿ ವಿಮಾ ಕಂಪನಿಗಳಂತೆ ಯಾವುದೇ ನಿಬಂಧನೆಗಳಿರುವುದಿಲ್ಲ. ಆದ್ದರಿಂದ ನಿಮ್ಮ ಸಹಕಾರ ಸಂಘಗಳ ಪ್ರತಿ ಸದಸ್ಯರ ಕುಟುಂಬವನ್ನು ಯಶಸ್ವಿನಿ ವಿಮಾ ಯೋಜನೆ ಅಡಿ ನೊಂದಾಯಿಸಿ ಅವರುಗಳಿಗೆ ಕಷ್ಟಕಾಲದಲ್ಲಿ ನೆರವಾಗುವಂತಹ ಕಾರ್ಯದಲ್ಲಿ ತಾವು ಪಾಲ್ಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ನಿರೀಕ್ಷಕರಾದ ರಂಗನಾಥ್ ತುಮಕೂರು ಹಾಲು ಒಕ್ಕೂಟದ ತಿಪಟೂರು ಉಪ ಶಾಖೆಯ ಮೇಲ್ವಿಚಾರಕರಾದ ದಿವಾಕರ್ ಶಶಿಕಲಾ ಶ್ರೀ ಲಕ್ಷ್ಮಿ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮನು ಸಿಡ್ಲೆಹಳ್ಳಿ
