ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಏಪ್ರಿಲ್ ಕೂಲ್ ಆಚರಿಸಿ ಪರಿಸರ ಉಳಿಸಿ

ಎಲ್ಲೆಂದರಲ್ಲಿ ಬಿಸಿಲ ಬೇಗೆಯಲ್ಲಿ ನರಳಾಡುವ  ಜೀವಿಗಳು ಮನಕಲುಕುವ ದೃಶ್ಯ ನೋವು ಉಂಟುಮಾಡುತ್ತದೆ ಇವುಗಳ ಮಧ್ಯೆ ಏಪ್ರಿಲ್ ಫೂಲ್ ಆಚರಣೆ ಬೇಕೇ?
ಮಾನವರಾದ ನಾವು ಎತ್ತ ಸಾಗುತ್ತಿದ್ದೇವೆ ? ಸ್ವಾರ್ಥ ಪರ ಜೀವನ ಅವನತಿಗೆ ಕಾರಣ ಎಂಬುದು ಅರ್ಥವಾಗುತ್ತಿಲ್ಲವೇ?

ಅಣ್ಣ ಬಸವಣ್ಣನವರು ತಮ್ಮ ವಚನದಲ್ಲಿ
“ದಯವಿಲ್ಲದ ಧರ್ಮ ಯಾವುದಯ್ಯ? ದಯವಿರಬೇಕು ಸಕಲಪ್ರಾಣಿಗಳಲಿ, ದಯವೇ ಧರ್ಮದ ಮೂಲವಯ್ಯ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ “ಎಂದಿದ್ಧಾರೆ ನಾವು ಬದುಕಿ ಮತ್ತೊಬ್ಬರನ್ನು ಬದುಕಿಸುವ ಪ್ರೇಮತ್ವ ನಮ್ಮದಾಗಬೇಕು, ಸುಡ ಬೇಸಿಗೆಯ ಈ ಸಂದರ್ಭದಲ್ಲಿ ಏಪ್ರೀಲ್ ಫೂಲ್ ಬದಲಾಗಿ ಏಪ್ರೀಲ್ ಕೂಲ್ ಆಚರಿಸುವ ಮೂಲಕ ಪರಿಸರ ರಕ್ಷಣೆಯೊಂದಿಗೆ ಕಾಳಜಿ ಮೆರೆಯಬೇಕು.

ಎಲ್ಲಡೆ ಕೆಂಡದಂತ ಬಿಸಿಲು ಉಗ ಉಗ ಗಾಳಿ ,ಕುಚ್ಚುವ ಸೆಕೆ ,ಮನೆ ಬಿಟ್ಟು ಹೊರಗೆ ಕಾಲಿಟ್ಟರೆ ಸಾಕು ಬೆಂಕಿಯಲ್ಲಿ ಬೆಂದು ಹೋಗುತ್ತಿದ್ಧಾರೆ, ಬಿಸಿಲಿನ ತಾಪಕ್ಕೆ ಜನ ನೀರು ನೀರು ಅಂತಿದ್ಧಾರೆ, ಆದ್ರೆ ಮೂಕ ಪ್ರಾಣಿ ಪಕ್ಷಗಳ ಪಾಡು ದೇವರೇ ಗತಿ, ಬಿಸಿ ಗಾಳಿ ಬೆಂಕಿ ಬಿಸಲಿಗೆ ಜನರು ಮನೆ ಬಿಟ್ಟು ಬರುವುದಕ್ಕೂ ಹೆದರುತ್ತಿದ್ದಾರೆ, ಕಾಡಿಗೆ ಹೋದರೆ ಒಂದು ಹನಿಯೂ ನೀರಿಲ್ಲ,ಹಳ್ಳ,ಕೊಳ್ಳಗಳು ಒಣಗಿವೆ ಆದ್ದರಿಂದ ನೀರಿನ ಮೌಲ್ಯ ನಾವಿಂದು ಅರಿತು ಎಲ್ಲಡೆ ಅರಿವು ಮೂಡಿಸಬೇಕಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ

“ಜಾಗತಿಕ ತಾಪಮಾನದ ಏರಿಕೆ
ಆಗದಿರಲಿ ಹಕ್ಕಿ ಪಕ್ಷಿಗಳ ಮರೀಚಿಕೆ
ಚಾವಣಿಗಳ ಮೇಲಿರಲಿ ನೀರಿನ ಪಾತ್ರೆ
ಬದುಕು ಮೌಲ್ಯಗಳ ಯಾತ್ರೆ”

ಮನೆಯ ಸುತ್ತಮುತ್ತ ನೀರಿನ ತಟ್ಟೆ ಮಾಡಿ ಗಿಡಗಳಿಗೆ ಕಟ್ಟಬೇಕು ಅಲ್ಲದೆ ವಿವಿಧ ನಮೂನೆಯ ಇದ್ದ ಕಾಳು ಕಡಿಗಳನ್ನು ತಟ್ಟೆಯಲ್ಲಿ ಹಾಕಬೇಕು ಇದರಿಂದ ಪಕ್ಷಿಗಳಿಗೆ ನೀರು ಮತ್ತು ಆಹಾರ ದೊರೆಯಲು  ಅನೂಕೂಲವಾಗುತ್ತದೆ.

“ಮನೆಯಲ್ಲಿರುವ ದವಸ ಧಾನ್ಯ
ಹಂಚಿಕೊಂಡು ತಿಂದರೆ ಜೀವನ ಧನ್ಯ
ಬಾಡದಂತೆ ಕಾಪಾಡಿ ಗಿಡ ಮರ
ಬರಡಾಗದಿರಲಿ ಪ್ರಕೃತಿಯ ಆಕಾರ”

ಇತ್ತಿಚೀಗೆ ನಾಡಿನ ತುಂಬೆಲ್ಲಾ ಸಮಾಜಮುಖಿ ಸೇವಾ ಸಂಸ್ಥೆಗಳು ,ಸಮಾಜ ಸೇವಕರು ಸಮುದಾಯ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು, ಮಡಿಕೆಗಳು, ತೆಂಗಿನ ಚಿಪ್ಪುಗಳಲ್ಲಿ ನೀರನ್ನು ಹಾಕಿ ಮರ ಗಿಡಗಳಿಗೆ ಜೋತು ಬಿಡುವ ಮೂಲಕ ಪರಿಸರ ಕಾಳಜಿ ಮೆರದಿದ್ದಾರೆ,ಕೆಲ ವಿದ್ಯಾ ಸಂಸ್ಥೆಗಳಂತೂ ಇಂದಿಗೂ ಟೊಂಕ ಕಟ್ಟಿ ನಿಂತಿವೆ ಈ ಕಾರ್ಯ ನಾಡಿನ ಶಾಲಾ ಕಾಲೇಜ್ ಗಳ ಮೂಲಕ ನಡೆಯುವಂತಾಗಬೇಕು ಸರಕಾರ ಎಲ್ಲಾ ಇಲಾಖೆಗಳ ಮೂಲಕ ಎಲ್ಲಾ ಕಡೆ ಒಂದು ದಿನದ ಪರಿಸರದ ಕಾರ್ಯ(ಕೂಲ್ ಡೇ) ಬೇಸಿಗೆಯಲ್ಲಿ ಹಮ್ಮಿಕೊಂಡರೆ ಒಳ್ಳೆಯದು.

“ನೀರನ್ನು ಮಿತವಾಗಿ ಬಳಸದಿದ್ದರೆ ಹಾಕಲಿ ದಂಡ
ನಿಸರ್ಗವೇ ನಮಗೆ ಆಧಾರ
ಅರಣ್ಯದಲ್ಲಿ ನಿರ್ಮಿಸಲಿ ಜಲ ಹೊಂಡ
ವನ್ಯ ಪ್ರಾಣಿಗಳಿಗೆ ಆಸರ”

ಯಾಂತ್ರೀಕರಣ, ನಗರೀಕರಣ,ಜಾಗತೀಕರಣದ  ಪರಿಣಾಮವಾಗಿ ಪರಿಸರ ನಾಶವಾಗುತ್ತಿದೆ, ಕೂಲ್ ಡೇ ದಿನ ಪ್ರತಿಯೊಬ್ಬರೂ ಒಂದು ಮರವನ್ನು ನಾಡಿನಲ್ಲಿ ನೆಡುವಂತಗಾಬೇಕು ಕಾಡು ಪ್ರದೇಶಗಳಲ್ಲಿ ಪ್ರಾಣಿಗಳಿಗೆ ಅನೂಕೂಲವಾಗುವ ಹಾಗೇ ಕೆರೆ ಹೊಂಡಗಳನ್ನು ಸರಕಾರಗಳು ನಿರ್ಮಿಸಬೇಕಿದೆ ಅಲ್ಲದೇ ಏಪ್ರೀಲ್ ಕೂಲ್ ಡೇ ಆಚರಿಸುವ ವಿಷಯವನ್ನು ಪಠ್ಯ ಕ್ರಮದಲ್ಲಿ ಅಳವಡಿಸಬೇಕು ಇದರಿಂದ ಪರಿಸರ ಅರಿವು ಕಾಳಜಿ ಮಕ್ಕಳಿಗೆ  ಮೂಡುತ್ತದೆ.

“ನಿಸ್ವಾರ್ಥವಾಗಿ ಬದುಕೋಣ
ಸೃಷ್ಟಿಯನ್ನು ಪ್ರೀತಿಸೋಣ
ಏಪ್ರೀಲ್ ಕೂಲ್ ಆಗಲಿ ಜನಾಂದೋಲನ
ಜೀವ ಸಂಕುಲವ ರಕ್ಷಿಸೋಣ”

ಏಪ್ರಿಲ್ ಕೂಲ್ ಡೆ ಆಚರಿಸುವ ಮೂಲಕ ನಾವೆಲ್ಲರೂ ಪರಿಸರ ಕಾಳಜಿ ಮೆರೆಯೋಣ, ಒಬ್ಬಬ್ಬರೂ ಗಿಡಗಳ ನೆಡುವುದರೊಂದಿಗೆ ,ಪ್ರಾಣಿ ಪಕ್ಷಿಗಳಿಗೆ ಆಹಾರ,ನೀರು ನೀಡುವದರೊಂದಿಗೆ ಮೌಲ್ಯಗಳ ತಳ ಹದಿಯ ಮೇಲೆ ಬಾಳೋಣ, ಏಪ್ರೀಲ್ ಕೂಲ್ ಡೇ… ಗೆ ಜಯವಾಗಲಿ, ಪರಿಸರ ಅಭಿವೃದ್ಧಿಯಾಗಲಿ.

  • ಕವಯಿತ್ರಿ ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ