ಬಸವಕಲ್ಯಾಣ / ಹುಲಸೂರ : ಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಬಾವಿಗಳ ನೀರು ಪಡೆಯಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಅಡ್ಡಿಪಡಿಸುವುದು ಕಾನೂನು ಬಾಹಿರವಾಗಿರುತ್ತದೆ ಎಂದು ತಹಸೀಲ್ದಾರ್ ಶಿವಾನಂದ ಮೆತ್ರೆ ತಿಳಿಸಿದರು.
ತಾಲೂಕಿನ ಕಾದೆಪೂರ ಗ್ರಾಮದಲ್ಲಿ ಉಜ್ವಲ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರದಂದು ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ವರ್ಗದ ಆಧಾರದ ಮೇಲೆ ನಿರ್ಬಂಧ ಹೇರಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಸವಣ್ಣನವರ ನಾಡಿನಲ್ಲಿ ಸಮಾನತೆ ಇಂದ ಬದುಕಬೇಕು ಜಾತಿ ರಹಿತ ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕು,1989 ರ ಪ್ರೋಬೆಸ್ಸನ್ ಆಫ್ ಆಕ್ಟ್ ಅನುಗುಣವಾಗಿ ಸಮಾನತೆ ಸ್ವಾತಂತ್ರ್ಯ ಬದುಕು ಸಾಗಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ ಕುಮಾರ ಉತ್ತಮ ಅವರು ತಿಳಿಸಿದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಬಸವಂತ ರೆಡ್ಡಿ ಅವರು ಮಾತನಾಡಿ ಕಾನೂನು ತುಂಬಾ ಸೂಕ್ಷ್ಮವಾಗಿದ್ದು ಅದನ್ನು ಅರಿತುಕೊಳ್ಳಬೇಕು ಸಮಾನತೆ ಸ್ವಾತಂತ್ರ್ಯ ಬದುಕು ಸಾಗಿಸುವ ಹಕ್ಕು ನಮ್ಮ ಸಂವಿಧಾನ ನಮ್ಮಗೆ ನೀಡಿದೆ. ಇಂದು ಪಾಲಕರು ತಮ್ಮ ವಾಹನಗಳನ್ನು ಚಿಕ್ಕ ಮಕ್ಕಳಿಗೆ ಚಲಾಯಿಸಲು ನೀಡುತ್ತಿದ್ದಾರೆ ಆದ್ದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಇದನ್ನು ಪಾಲಕರು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಗ್ರಾ.ಪಂ ಅಧ್ಯಕ್ಷೆ ಸೋನಿಯಾ ಸಿದ್ದರೂಢಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಜ್ವಲ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ನಿರೂಪಿಸಿದರು. ಸಂದೀಪ, ರವಿ ಪ್ರಶಾಂತ ಸೇರಿದಂತೆ ಗ್ರಾಮದ ಜನರು ಉಪಸ್ಥಿತರಿದ್ದರು.
ವಿಧ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿ ತೋರಬೇಕು ಕಠಿಣ ಪರಿಶ್ರಮದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕವಾದಲ್ಲಿ ತಮ್ಮ ಗ್ರಾಮಕ್ಕೆ ಹೆಮ್ಮೆ ತರುವಂತಹದ್ದು ಎಂದು ಪಿ.ಎಸ್.ಐ ನಾಗೇಂದ್ರ ಅವರು ತಿಳಿಸಿದರು.
ವರದಿ: ಶ್ರೀನಿವಾಸ ಬಿರಾದಾರ
