ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಳಮೀಸಲಾತಿ ಸರ್ಕಾರದ ಮೃದು ಧೋರಣೆ ಖಂಡನೀಯ – ಸುರೇಶ ಚಲವಾದಿ

ಗದಗ: ರಾಜ್ಯದ ಶೋಷಿತ ಸಮುದಾಯಗಳ ನ್ಯಾಯಯುತ ಬೇಡಿಕೆಯಾದ ಒಳಮೀಸಲಾತಿ ಜಾರಿಗೊಳಿಸುವಲ್ಲಿ ವಿಳಂಬ ಮಾಡುತ್ತಾ ಮೃದು ಧೋರಣೆ ತೋರುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯವೆಂದು ಭಾರತೀಯ ಜನತಾ ಪಕ್ಷದ ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವಾಯ್. ಚಲವಾದಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ 3 ದಶಕಗಳ ಕಾಲ ಒಳಮೀಸಲಾತಿ ಜಾರಿಗೊಳಿಸುವಂತೆ ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ವಿವಿಧ ರೀತಿಯ ಹೋರಾಟವನ್ನು ಹಮ್ಮಿಕೊಂಡು ಸರ್ಕಾರಕ್ಕೆ ಸಾಕಷ್ಟು ಬಾರಿ ಛೀಮಾರಿ ಹಾಕಿದರೂ ಎಚ್ಚೆತ್ತುಕೊಳ್ಳದ ಸನ್ಮಾನ್ಯ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಈಗ ಎಚ್. ಎನ್. ನಾಗಮೋಹನ್ ದಾಸ್ ಅವರ ವರದಿ ಅಂಗೀಕರಿಸಲು ಕಾಲಹರಣ ಮಾಡುವ ಉದ್ದೇಶದಿಂದ ವೈಜ್ಞಾನಿಕ ಸಮೀಕ್ಷೆ ನೆಪವೊಡ್ಡಿ ಮತ್ತೆ 2 ತಿಂಗಳುಗಳ ಕಾಲ ಸಮಯ ತೆಗೆದುಕೊಂಡು ಈ ನೆಲದ ಅಸಂಖ್ಯಾತ ಶೋಷಿತ ಸಮುದಾಯಗಳಿಗೆ ಅನ್ಯಾಯವೆಸಗುತ್ತಿದೆ.
ಕೇವಲ ಬಾಯಿ ಮಾತಿಂದ ದಲಿತರ ಓಲೈಕೆ ರಾಜಕಾರಣ ಮಾಡುತ್ತಿರುವ ಸನ್ಮಾನ್ಯ ಸಿದ್ದರಾಮಯ್ಯನವರು ಮಾತೆತ್ತಿದರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ದಲಿತರ ನ್ಯಾಯಯುತ ಬೇಡಿಕೆಯಾದ ನಿವೃತ್ತ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿ ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕಾಗಿತ್ತು. ಆದರೆ ಅವರಿಗೆ ಬೇಕಾಗಿರುವದು ದಲಿತರ ಹೆಸರಿನ ಮೇಲೆ ರಾಜಕಾರಣವೆ ಹೊರತು ದಲಿತರ ಅಭಿವೃದ್ಧಿ ಅಲ್ಲ ಎಂಬುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಕಳೆದ 2018 ರ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬ್ರಹತ್ ಸಮಾರಂಭದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ ಒಳಮೀಸಲಾತಿ ವಿಚಾರ
ಪ್ರಸ್ತಾಪಿಸಲೇ ಇಲ್ಲ ಅಷ್ಟೇ ಅಲ್ಲದೇ ಸಮಾರಂಭಕ್ಕೆ ಆಗಮಿಸುವ ಸಂದರ್ಭದಲ್ಲಿ ಸಹೋದರ ಸಮುದಾಯದ ಕೆಲವು ಜನ ರಸ್ತೆ ಅಪಘಾತದಲ್ಲಿ ಮೃತ ಪಟ್ಟರು. ಅಷ್ಟಾದರೂ ಕನಿಕರ ಪಡದ ಸನ್ಮಾನ್ಯ ಮುಖ್ಯಮಂತ್ರಿಗಳು ದಲಿತರ ಶವಗಳ ಮೇಲೆ ರಾಜಕಾರಣ ಮಾಡಿದರೇ ಹೊರತು ಸಾಮಾಜಿಕ ನ್ಯಾಯ ದೊರಕಿಸಲಿಲ್ಲವೆಂದು ಬೇಸರ ವ್ಯಕ್ತ ಪಡಿಸಿದರು.
ನಾಡಿನ ಸಮಾನತೆಯ ಶ್ರೇಷ್ಟ ಸಂತ ವಿಶ್ವಗುರು ಬಸವಣ್ಣನವರ “ಆಡದೆ ಮಾಡುವವನು ರೂಢಿಯೊಳಗುತ್ತಮನು” ಎಂಬ ವಾಣಿಯಂತೆ ಕಳೆದ 2021-22 ನೇ ಸಾಲಿನಲ್ಲಿ ಸನ್ಮಾನ್ಯ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಡ ಜನತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂಬ ಮಹತ್ತರವಾದ ಆಲೋಚನೆಗಳಿಂದ ಸಂಪುಟ ದರ್ಜೆ ಸಭೆ ಕರೆದು ನಿವೃತ್ತ ನ್ಯಾಯಮೂರ್ತಿ ಎ. ಜೆ.ಸದಾಶಿವ ಆಯೋಗವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ತಮ್ಮ ದಿಟ್ಟತನವನ್ನು ಪ್ರದರ್ಶಿಸಿದರು. ಇದು ಶೋಷಿತ ಸಮುದಾಯದ ಬಡ ಜನತೆಯ ಮೇಲೆ ಇರತಕ್ಕಂತಹ ನೈಜ ಕಾಳಜಿ ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸಮುದಾಯದ ಒಳಿತಿಗಾಗಿ ಕ್ರಾಂತಿಕಾರಿ ಹೆಜ್ಜೆಯನ್ನಿಡುವದರ ಜೊತೆಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡುವತ್ತ ದಾಪುಗಾಲು ಹಾಕಿದರು.
ಆದರೆ ಮಾತೆತ್ತಿದರೆ ದಲಿತರ ಹೆಸರೇಳಿ ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್ ದಲಿತರ ಅಭಿವೃದ್ದಿಗಿರುವ SCSP/TSP ಅನುದಾನ ಕಬಳಿಸಿರುವದಲ್ಲದೇ ದಲಿತರ ಮಹತ್ತರ ಬೇಡಿಕೆಯಾದ ಒಳಮೀಸಲಾತಿ ಜಾರಿಗೊಳಿಸದೇ ಮತ್ತೆ ಕಾಲ ಹರಣ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.
ಕಳೆದ ವಾರ ವಿವಿಧ ದಲಿತಪರ ಸಂಘಟನೆಗಳು ಹಾಸನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಕ್ರಾಂತಿಕಾರಿ ಪಾದಯಾತ್ರೆಯ ಮೂಲಕ ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿದ ಬೃಹತ್ ಸಮಾರಂಭದಲ್ಲಿ ಹಕ್ಕೊತ್ತಾಯ ಮಂಡಿಸಿದ್ದರು. ಅಷ್ಟಕ್ಕೂ ಜಗ್ಗದ ಎಮ್ಮೆ ಚರ್ಮದ ರಾಜ್ಯ ಸರ್ಕಾರ ಮತ್ತೆ ವೈಜ್ಞಾನಿಕ ಸಮೀಕ್ಷೆಯ ನೆಪವೊಡ್ಡಿ 2 ತಿಂಗಳುಗಳ ಕಾಲ ಸಮಯವನ್ನು ತೆಗೆದುಕೊಂಡು ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದರ ಜೊತೆಗೆ ಅಸಂಖ್ಯಾತ ಶೋಷಿತ ಸಮುದಾಯದ ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದೆ, ಇನ್ನಾದರೂ ಪ್ರಜ್ಞಾವಂತ ದಲಿತ ಸಮುದಾಯ ದಲಿತರಿಗೆ ಏಮಾರಿಸುತ್ತಿರುವ ಸರ್ಕಾರದ ಜಾಣ ನಡೆಯನ್ನು ಅರ್ಥೈಸಿಕೊಳ್ಳಬೇಕೆಂದು ಹೇಳಿದರು.
ಒಳಮೀಸಲಾತಿಯನ್ನು ಆಯಾ ರಾಜ್ಯ ಸರ್ಕಾರ ಅಂಗೀಕರಿಸಬಹುದೆಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದ 7 ಸದಸ್ಯರನ್ನೊಳಗೊಂಡ ಪೀಠ ಮಹತ್ತರವಾದ ತೀರ್ಪು ನೀಡಿ ಆದೇಶಿಸಿದೆ. ಆದರೆ ನ್ಯಾಯಾಲಯದ ತೀರ್ಪನ್ನು ಗೌರವಿಸದೆ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿರುವ ರಾಜ್ಯ ಸರ್ಕಾರ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ದ್ರೋಹವಲ್ಲದೆ ಮತ್ತೇನು ಅಂಬೇಡ್ಕರ್ ಅವರು ರಚಿಸಿದ ಕಾನೂನನ್ನು ಗೌರವಿಸದಿರುವವರು ಅಂಬೇಡ್ಕರ್ ವಿಚಾರಧಾರೆಯ‌ನ್ನು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ವಿರುದ್ದವಾಗಿ ನಡೆದುಕೊಂಡು ಒಳಮೀಸಲಾತಿ ಕಲ್ಪಿಸದೇ ವಿಳಂಬ ಮಾಡಿ ಬಡಜನರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ ತುಳಿತಕ್ಕೊಳಗಾದ ಸಮುದಾಯದ ಜನತೆ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಇನ್ನೂ ಎಷ್ಟು ತಲೆ ಮಾರು ಬೇಕು ? ಸರ್ಕಾರ ಇನ್ನೂ ಎಷ್ಟು ಜೀವವನ್ನು ಬಲಿ ತೆಗೆದುಕೊಳ್ಳುವ ಆಲೋಚನೆಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಧೀರ್ಘ ಕಾಲ ಆಡಳಿತದಲ್ಲಿರುವ ಕಾಂಗ್ರೆಸ್ ದಲಿತರನ್ನು ಕೇವಲ ಚುನಾವಣಾ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ಅನ್ಯಾಯವೆಸಗುತ್ತಾ ಬಂದಿರುತ್ತದೆ. ಪ್ರಸ್ತುತ ದಿನಮಾನದಲ್ಲಿಯೂ ಸಹಿತ ತಮ್ಮ ಹಳೆ ಚಾಳಿ ಮುಂದುವರೆಸುತ್ತಿರುವ ಕಾಂಗ್ರೆಸ್‌ನ ಕೊಳಕು‌ ಮನಸ್ಥಿತಿಯನ್ನು ಪ್ರಜ್ಞಾವಂತ ಸಮುದಾಯ ಗಮನಿಸುತ್ತಿದೆ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂಬರುವ ದಿನಮಾನಗಳಲ್ಲಿ ಸಮುದಾಯದ ಶಕ್ತಿಯನ್ನು ಸರ್ಕಾರಕ್ಕೆ ತೋರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ