
ಚಾಮರಾಜನಗರ :ಜಾನಪದ ಸಾಹಿತ್ಯ ಹಾಗೂ ಕಲೆಗಳ ತವರೂರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಡಾ. ರಾಜ್ ಹಾಗೂ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಸರ್ಕಾರಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು.
ಹನೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ಆಯೋಜಿಸಲಾಗಿದ್ದ ಜಾನಪದ ಸಾಹಿತ್ಯ ಪರಿಷತ್ತು (ರಿ.) ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಹನೂರು ವತಿಯಿಂದ ಜಾನಪದ ಉತ್ಸವ ಜಾನಪದ ಸಿರಿ ಪ್ರಶಸ್ತಿ ಪ್ರಧಾನ ಅವರು ನಂತರ ಮಾತನಾಡಿದರು.
ಜಾನಪದ ಕಲೆಗಳ ತವರೂರು ಚಾಮರಾಜನಗರ ಜಿಲ್ಲೆಯಲ್ಲಿ ಮಲೆ ಮಾದೇಶ್ವರರು ಮಂಟೇಸ್ವಾಮಿ ಹಾಗೂ ಕಲಾ ಆರಾಧಕರು ಪಡೆದಂತಹ ನಾವು ಹನೂರು ತಾಲೂಕಿನ ಸಿಂಗನಲ್ಲೂರು ಗ್ರಾಮ ಕಲೆಗಳ ಉಗಮ ಸ್ಥಾನ ಎಂದರೆ ತಪ್ಪಾಗಲಾರದು ಮುಂದಿನ ದಿನಗಳಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಿಯ ಹಾಗೂ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಚಿಂತನೆ ನಡೆಸಿದ್ದು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಮ್ಯೂಸಿಯಂ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹೇಶ್ ಚಿಕ್ಕಲ್ಲೂರು ರಾಜ್ಯಾದ್ಯಂತ 22 ಕಾರ್ಯಕ್ರಮಗಳನ್ನು ನೀಡಿ ಪಟ್ಟಣದಲ್ಲಿ ಜಾನಪದ ಸಾಹಿತ್ಯ ಮತ್ತು ಕಲಾತಂಡಗಳ ಬಗ್ಗೆ ಅವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ ಜೊತೆಗೆ ಚಾಮರಾಜನಗರ ಜಿಲ್ಲೆ, ಶ್ರೀಮಂತ ಕಲಾ ಪೋಷಕರ ತವರೂರು ಎಂದರೆ ತಪ್ಪಾಗಲಾರದು ಇಡೀ ದೇಶ ರಾಜ್ಯ ತಿರುಗಿ ನೋಡುವಂತಹ ಕಲಹಾರದಕರು ಮಂಟೇಸ್ವಾಮಿ ಮಲೆ ಮಾದೇಶ್ವರರು ನಡೆದಾಡಿರುವ ತವರೂರು ಈ ನಿಟ್ಟಿನಲ್ಲಿ ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗಾಗಿ ವಿದ್ಯಾರ್ಥಿಗಳು ಈಗಿನಿಂದಲೇ ಉತ್ತಮ ವ್ಯಾಸಂಗದ ಜೊತೆ ಕಲಹದ ಆರಾಧಕರಾಗಿ ಚಾಮರಾಜನಗರ ಜಿಲ್ಲೆ ತಾಲೂಕಿನಿಂದ ಗುರುತಿಸಿಕೊಳ್ಳಲು ಈಗಿನಿಂದಲೇ ಪ್ರತಿಭಾವಂತರಾಗಿ ಸಾಧನೆ ಮಾಡಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಮೈಸೂರಿನ ಕಲಕೂಟ ಅಧ್ಯಕ್ಷರಾದ ಎಂ. ಚಂದ್ರಶೇಖರ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಜಾನಪದ ಕಲೆ ತವರೂರು ವಿದ್ಯಾರ್ಥಿಗಳು ಚಿಂತನೆಯೊಂದಿಗೆ ಮೈಗೂಡಿಸಿಕೊಂಡು ಸಾಹಿತ್ಯ ಕಲೆ ಚಿಂತನಗಳ ಜೊತೆ ಬೇರುಸುವ ತನಕ ಸಾಹಿತ್ಯ ಕಲೆ ನಾಡು ನುಡಿ ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮೊಬೈಲ್ ಬಳಕೆಯಿಂದ ಕಲೆಗಳ ಕಣ್ಮರೆಯಾಗುತ್ತಿದೆ ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳನ್ನು ಗುರುತಿಸಿ ಸಾಧಕರಿಗೆ ಹೆಮ್ಮೆಯ ವಿಚಾರವಾಗಿದೆ ವಿದ್ಯಾರ್ಥಿಗಳು ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ದತ್ತೇಶ್ ಕುಮಾರ್ ಮಾತನಾಡಿ ಚಾಮರಾಜನಗರ ಜಿಲ್ಲೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದೆ ಆದರೆ ಸಾಂಸ್ಕೃತಿಕವಾಗಿ ಪ್ರಪಂಚದಲ್ಲಿಯೇ ಚಾಮರಾಜನಗರ ಜಿಲ್ಲೆ ರಾಯಭಾರಿಯಾಗಿ ಶ್ರೀಮಂತ ಜಿಲ್ಲೆ ಹಾಗೂ ಮಲೆ ಮಾದೇಶ್ವರ ಮಂಟೇಸ್ವಾಮಿ ಶರಣರ ನೀಡಿದ ಜಿಲ್ಲೆಯ ಜೊತೆ ಹಲವಾರು ಸಾಧಕರ ಕಲೆ ನೆಲ ಜಲ ಭಾಷೆ ಬಗ್ಗೆ ಹಲವರನ್ನು ಕೊಡುಗೆಯಾಗಿ ನೀಡಿರುವ ಜಿಲ್ಲೆ ಶ್ರೀಮಂತ ಜಿಲ್ಲೆಯಾಗಿದೆ ವಿದ್ಯಾರ್ಥಿಗಳು ಸಹ ಈ ವಿಚಾರವಾಗಿ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲೆ ಬಗ್ಗೆ ಹೆಚ್ಚು ಆರಾಧಕರಾಗಿ ಚಿಂತನೆ ಮಾಡಬೇಕು ಜೊತೆಗೆ ಸಿಂಗನ್ನಲೂರು ಗ್ರಾಮದಲ್ಲಿ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಶಾಸಕರು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ ಹೀಗಾಗಿ ನಮ್ಮದು ಸಹ ಸಹಮತವಿದೆ ಹೀಗಾಗಿ ನಮ್ಮ ಕಲೆ ಮತ್ತು ಕಲಾ ಆರಾಧಕರನ್ನು ಪ್ರೋತ್ಸಾಹಿಸಿ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಉನ್ನತ ಸ್ಥಾನದಲ್ಲಿದ್ದಾರೆ ಜೊತೆಗೆ ಇಂತಹ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗಾಗಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು…
ಜಾನಪದ ಶ್ರೀ ಪ್ರಶಸ್ತಿ ಪ್ರಧಾನ
ಕನ್ನಡ ಸಾಹಿತ್ಯ ಪರಿಷತ್ತು ಇವರ ವತಿಯಿಂದ ಜಾನಪದ ಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆರು ಜನರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಗೀತಾ ಭತ್ತದ್ ಹಾಗೂ ಜಾನಪದ ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಂ. ಕೈಲಾಸ್ ಮೂರ್ತಿ ಮತ್ತು ದೊಣ್ಣೆವರಸೆ ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಗರಿಕರಾದ ನಂಜೇಗೌಡ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ಪ್ರೇಮ ಪಿ ವೈ ಕೆ ಮೊಳೆ ಮತ್ತು ಕಲಾ ಪೋಷಕರಾದ ಹರೀಶ್ ಮಗನ ಸೇರಿದಂತೆ ಕಲಾ ಪೋಷಕರಾದ ಎಂ.ಎಂ ಮಹದೇವ ಪ್ರಸಾದ್ ಅವರಿಗೆ ಜಾನಪದ ಸಾಹಿತ್ಯ ಪರಿಷತ್ತು ವತಿಯಿಂದ ಜಾನಪದ ಸಿರಿ ಪ್ರಶಸ್ತಿ ಪ್ರದಾನವನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಂತರ ಮಾತನಾಡಿದ ಕನ್ನಡ ಪ್ರಭ ಪತ್ರಿಕೆ ಮೈಸೂರು ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ “ಚಾಮರಾಜನಗರ ಜಿಲ್ಲೆ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯ ಮತ್ತು ಜಿಲ್ಲೆಯಲ್ಲಿ ಹೆಚ್ಚು ಸಾಧಕರನ್ನು ನೀಡಿರುವ ಅಂತಹವರನ್ನು ಕಾರ್ಯಕ್ರಮದಲ್ಲಿ ಗುರುತಿಸಿ ಅಧ್ಯಕ್ಷರಾದ ಮಹೇಶ್ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ ಜೊತೆಗೆ ಹನೂರು ತಾಲೂಕಿನ ಸಿಂಗನಲ್ಲೂರು ಪುಟ್ಟಸ್ವಾಮಿಯವರ ಸ್ವಗ್ರಾಮದಲ್ಲಿ ಶಾಸಕರು ಡಾಕ್ಟರ್ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಸರ್ಕಾರಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದು ಮ್ಯೂಸಿಯಂ ತೆರೆಯಲು ಮುಂದಾಗಿರುವುದು ಸಾಧಕರನ್ನು ಇನ್ನಷ್ಟು ಉತ್ತೇಜನ ಮಾಡಲು ಅನುಕೂಲದಾಯಕವಾಗಿದೆ ಚಾಮರಾಜನಗರ ಜಿಲ್ಲೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದರು ಸಹ ಸಂಪತ್ಭರಿತವಾದ ಜಿಲ್ಲೆಯಲ್ಲಿ ಇಡೀ ದೇಶದಲ್ಲಿ ಹೆಚ್ಚು ಹುಲಿಗಳಿರುವ ಬಂಡಿಪುರ ಹಾಗೂ ನಾಲ್ಕು ಅರಣ್ಯ ಪ್ರದೇಶಗಳನ್ನು ನೀಡಿರುವ ಹೆಗ್ಗಳಿಕೆ ಚಾಮರಾಜನಗರ ಜಿಲ್ಲೆಗೆ ಇದೆ ಹೀಗಾಗಿ ಇಲ್ಲಿನ ಪರಂಪರೆ ಮಲೆ ಮಾದೇಶ್ವರರು ಮತ್ತು ಮಂಟೇಸ್ವಾಮಿ ಶರಣರ ಪಡೆದಂತಹ ಜಿಲ್ಲೆಯಾಗಿದೆ ಹೀಗಾಗಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೆಯ ವಿಚಾರವಾಗಿದೆ ಜೊತೆಗೆ ಇಲ್ಲಿನ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿರುವ ಮಾನಸ ಶಿಕ್ಷಣ ಸಂಸ್ಥೆ ಚಾಮರಾಜನಗರ ಜಿಲ್ಲೆಯಲ್ಲಿಯೇ ಉತ್ತಮ ಕೆಲಸ ನಿರ್ವಹಿಸುತ್ತಿದೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಜಾನಪದ ಸಾಹಿತ್ಯ ಮತ್ತು ಇಂತಹ ಕಾರ್ಯಕ್ರಮಗಳನ್ನು ಭಾಗವಹಿಸಿ ತಮ್ಮನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಮುಂದಾಗಬೇಕು ಜೊತೆಗೆ ಇಂತಹ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡಬೇಕು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಹೇಶ್ ಚಿಕ್ಕಲ್ಲೂರು ಮಾತನಾಡಿದರು ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕಂದವೇಲು ಮತ್ತುಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಚಂದ್ರಮ ಎಸ್ ಸ್ವಾಗತ ಭಾಷಣ ಮಾಡಿದ ಡಾಕ್ಟರ್ ಆರ್ ನಾಗಭೂಷಣ್ ಗೀತಾ ಭತ್ತದ್ ಜಾನಪದ ಕಲಾತಂಡದ ಕೈಲಾಸ್ ಮೂರ್ತಿ ದೊಣ್ಣೆವರ್ಸೇ ನಂಜೇಗೌಡ ಸಂಶೋಧನಾ ಕ್ಷೇತ್ರದ ಡಾ. ಪ್ರೇಮ ಪಿ ವೈ ಕೆ ಮೊಳೆ ಹಾಗೂ ಕಲಾ ಪೋಷಕರಾದ ಎಎಂ ಮಹದೇವ್ ಪ್ರಸಾದ್ ಹರೀಶ್ ಮೊಗಣ್ಣ ಇನ್ನಿತರರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
