ರಾಯಚೂರು/ಸಿಂಧನೂರು :
ಸಿಂಧನೂರು ನಗರದ ಬಸವ ವೃತ್ತದಲ್ಲಿ ಬಸವ ಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಸಿಂಧನೂರು ಶಾಖಾವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಆರಂಭಿಸಲಾಯಿತು.
ನೀರಿನ ಅರವಟ್ಟಿಗೆಯನ್ನು ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ವೀರೇಶ್ ಎನ್ ಹೊಸೂರು ಹಾಗೂ ರುದ್ರಪ್ಪಣ್ಣ ಪಿ ಕುರಕುಂದ ಇವರು ಉದ್ಘಾಟಿಸಿದರು.
ಸಿಇಓ ವೀರೇಶ್ ಎನ್ ಹೊಸೂರು ಮಾತನಾಡುತ್ತಾ, ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಪಟ್ಟಣದ ವ್ಯಾಪಾರ ವಹಿವಾಟಿಗಾಗಿ ಬರುವ ಸಾರ್ವಜನಿಕರ ದಾಹ ತಣಿಸಲು ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಅರವಟಿಗೆಯನ್ನು ಪ್ರಾರಂಭಿಸಿದ್ದೇವೆ ಹಾಗೂ ನಮ್ಮ ಸಂಸ್ಥೆಯ ಶಾಖೆಗಳನ್ನು ಹೊಂದಿರುವ ನಗರಗಳಲ್ಲಿ ಕೂಡಾ ಆರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಂಧನೂರು ಬಸವ ಕೇಂದ್ರದ ಅಧ್ಯಕ್ಷರಾದ ಕರೇಗೌಡ ಕುರುಕುಂದ, ವೀರಭದ್ರಗೌಡರು, ಬಸವರಾಜ ಬಿ. ವಕೀಲರು, ಬಸವರಾಜಪ್ಪ, ಬಸಲಿಂಗಪ್ಪ ಬಾದರ್ಲಿ, ಚಂದ್ರೆಗೌಡ ಹರೇಟನೂರು, ಶಿಕ್ಷಕರಾದ ನಾಗನಗೌಡರು, ಹುಸೇನ್ ಭಾಷಾ, ಮಲ್ಲಿಕಾರ್ಜುನ, ಶಾಖಾ ವ್ಯವಸ್ಥಾಪಕರಾದ ಸೂಗನಗೌಡ ಹಾಗೂ ಸಿಬ್ಬಂದಿವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- ಕರುನಾಡ ಕಂದ
