ದುರಿತ ಕರ್ಮವನೊಲ್ಲದಿರು ಪುಣ್ಯವನೆ ಮಾಡು
ಕೊಪ್ಪಳ/ ಯಲಬುರ್ಗಾ : ಧರ್ಮದ ಕಾರ್ಯದಲ್ಲಿ ಪ್ರತಿನಿತ್ಯ ತೊಡಗಿದಾಗ ಜೀವನದಲ್ಲಿ ಪುಣ್ಯದ ಫಲ ದೊರೆಯಲು ಸಾಧ್ಯ ಎಂದು ಶಿಕ್ಷಕ ಸಕ್ರಪ್ಪ ಕುಟ್ರು ಅವರು ದುರಿತ ಕರ್ಮವನೊಲ್ಲದಿರು ಪುಣ್ಯವನೆ ಮಾಡು ಎಂಬ ವಿಷಯವಾಗಿ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುರ್ದಶಿ ಅಂಗವಾಗಿ ಮಾ.೨೮ ರಂದು ಹಮ್ಮಿಕೊಂಡಿರುವ ೩೭೨ ನೇ ಶಿವಾನುಭವಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಧರ್ಮದ ಹಾದಿಯಲ್ಲಿ ಸಾಗಬೇಕು ಎಂದರು. ಧರ್ಮರಮಠದ ಹನುಮಂತಪ್ಪಜ್ಞ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿಯ ಮಾರ್ಗದರ್ಶನ ನೀಡಬೇಕು ಅಂದಾಗ ಮಕ್ಕಳು ನಮ್ಮ ಜೋತೆ ಪ್ರೀತಿಯಿಂದ ಇರಲು ಸಾಧ್ಯ ಮತ್ತು ಅವರ ಬದುಕು ಸುಂದರವಾಗಲು ಸಾಧ್ಯ ಎಂದು ಚಿಕ್ಕ ಮ್ಯಾಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಶರಣುಕುಮಾರ ಅಮರಗಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪಾಪದ ಕೆಲಸಗಳಿಂದ ದೂರವಿದ್ದು ಪುಣ್ಯದ ಕಾರ್ಯದಲ್ಲಿ ಸಾಗಬೇಕು, ಸಿರಿತನ ಬಂದವರು ಹಣ, ಧವಸ ಧ್ಯಾನಗಳನ್ನು ನೀಡಿ ಪುಣ್ಯದ ಕಾರ್ಯ ಮಾಡುತ್ತಾರೆ ಆದರೆ ಹಣ ಇಲ್ಲದವರು ರಕ್ತದಾನ, ಅನ್ನದಾನ, ನೀರಿನದಾನ, ಸಂಗೀತ ಸೇವೆ ದಾನ, ಬೇಸಿಗೆ ದಿನದಲ್ಲಿ ಮೂಕ ಪಶು ಪಕ್ಷಿಗಳಗೆ ನೀರುಣಿಸುವ ಸಮಾಜ ಸೇವೆ ಮಾಡುವದು ಈ ರೀತಿಯಾಗಿ ಸಮಾಜಮುಖಿಯಾಗಿ ಮಾಡುವ ಕಾರ್ಯದಿಂದ ಪುಣ್ಯ ಲಭಿಸುತ್ತದೆ ಎಂದು ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಪ್ರಾಸ್ತಾವಿಕವಾಗಿ ಗುರುಮೂರ್ತಿ ಬಡಿಗೇರ, ದುರಗೇಶ ಹರಿಜನ, ಬಸವರಾಜ ಜಂಬಾಳಿ,ಭೀಮಣ್ಣ ಹವಳಿ, ಮಾತನಾಡಿದರು. ಈ ವೇಳೆ ಶರಣಪ್ಪ ಬಳಿಗೇರಿ, ಈರಪ್ಪ ರಾವಣಕಿ, ಇಬ್ರಾಹಿಂ ಸಾಬ ವಾಲಿಕಾರ, ಶರಣೆಗೌಡ ದ್ಯಾಮನಗೌಡ್ರ, ಗಣೇಶ ನಿಡಗುಂದಿ, ಶಕ್ರಪ್ಪ ಇಟಗಿ ಸೇರಿದಂತೆ ಇತರರು ಇದ್ದರು. ಸಂಗೀತ ಸೇವೆಯನ್ನು ಕಾಳೇಶ ಕಮ್ಮಾರ, ನೀಲಕಂಠಪ್ಪ ರೋಡ್ಡರ, ಕಳಕಪ್ಪ ಹಡಪದ,ಯಮನೂರಪ್ಪ ಹಳ್ಳಿಕೇರಿ ಸೇರಿದಂತೆ ಇತರರು ಇದ್ದರು.
ನಂತರ ಅನ್ನಸಂತರ್ಪಣೆ ಜರುಗಿತು.
- ಕರುನಾಡ ಕಂದ
