ಬೆಂಗಳೂರು: ಬೆಂಗಳೂರು ನಾಗರಿಕರಿಗೆ ಬಿಬಿಎಂಪಿ ಶಾಕ್ ನೀಡಲು ಮುಂದಾಗಿದ್ದು, ಇದೀಗ ಮನೆ ಪಾರ್ಕಿಂಗ್ ಸ್ಥಳಕ್ಕೆ ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು BBMP ನಿರ್ಧರಿಸಿದೆ. ವಸತಿ ಸ್ವತ್ತುಗಳಿಗೆ ಚದರ ಅಡಿಗೆ 2ರೂ. ಕಮರ್ಷಿಯಲ್ ಸಂಸ್ಥೆಗೆ ಚದರ ಅಡಿಗೆ 3ರೂ. ಎಂದು ನಿರ್ಧರಿಸಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಮನೆಯಿದ್ದರೂ 2ರೂ. ದರ ನಿಗದಿ ಮಾಡಲಾಗಿದೆ. ಈ ಹೊಸ ಪಾರ್ಕಿಂಗ್ ನೀತಿಯಿಂದ 45ಕೋಟಿ. ನಷ್ಟವಾಗಲಿದೆ.
ಒಂದು ವೇಳೆ ಈ ನೀತಿಗೆ ಆಕ್ಷೇಪಣೆ ಹೆಚ್ಚಾಗಿ ಬಂದರೆ ಪಾರ್ಕಿಂಗ್ ನೀತಿ ಬದಲಾಗಬಹುದು ಎಂದು ಹೇಳಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
