ಯಾದಗಿರಿ/ಗುರುಮಠಕಲ್: 2024 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ರಾಜು ರಾಠೋಡ್ ಆಯ್ಕೆಯಾಗಿದ್ದು ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಮಳಖೇಡ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಪುಟಪಾಕ ಗ್ರಾಮದ ದಿ.ಪೂರಿಯಾ ನಾಯಕ್ ಮತ್ತು ರಾಮಿಬಾಯಿ ದಂಪತಿರವರ ನಾಲ್ಕನೇ ಸುಪುತ್ರರಾಗಿದ್ದು ಪ್ರಸ್ತುತ ಸಿಸಿಟಿ (ಗರುಡ ಪಡೆ) ಬೆಂಗಳೂರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜು ರಾಠೋಡ್ ಗುರುಮಠಕಲ್ ನ ವಿದ್ಯಾಜ್ಯೋತಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಪುಟಪಾಕ, ಪಿಯುಸಿ ಶಿಕ್ಷಣವನ್ನು ಧಾರವಾಡ ಮತ್ತು ಇಂಜಿನಿಯರಿಂಗ್ ಪದವಿಯನ್ನು ದಾವಣಗೆರೆಯಲ್ಲಿ 2015ರಲ್ಲಿ ಪಡಿದಿರುತ್ತಾರೆ. ಇವರು 2016 ನೇ ಸಾಲಿನಲ್ಲಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಗೊಂಡಿದ್ದಾರೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ತಂಡವನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನಗಳಿಸಿ ರಾಜ್ಯ ಪೋಲಿಸ್ ಇಲಾಖೆಯ ಪ್ರಖ್ಯಾತಿಯನ್ನು ಹೆಚ್ಚಿಸಿರುತ್ತಾರೆ. ತಮ್ಮ ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿದ ರಾಜ್ಯ ಪೋಲಿಸ್ ಇಲಾಖೆ ಮುಖ್ಯಮಂತ್ರಿಯವರ ಪದಕಕ್ಕೆ ಶಿಫಾರಸ್ಸು ಮಾಡಿ’ 2024 ನೇ ಸಾಲಿನ ಮುಖ್ಯಮಂತ್ರಿರವರ ಚಿನ್ನದ ಪದಕಕೆ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳು ಸನ್ಮಾರ್ಗ ದಲ್ಲಿ ನಡೆದು ಜೀವನದಲ್ಲಿ ಉನ್ನತ ಸ್ಥಾನಮನ,ಯಶಸ್ಸು ಹಾಗೂ ಮಾದರಿಯುತ ಜೀವನ ನಡೆಸಿದರೆ ಅದುವೇ ಅವರು ವಿದ್ಯೆ ಕಲಿಸಿದ ಶಿಕ್ಷಕರಿಗೆ ನೀಡುವ ಬಹುದೊಡ್ಡ ಬಹುಮಾನ ಎಂದು ಅವರು ಅಭಿಪ್ರಾಯಪಟ್ಟರು.
ವರದಿ: ಜಗದೀಶ ಕುಮಾರ್
