ಕಲಬುರಗಿ/ ಚಿತ್ತಾಪುರ :ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರ 58ನೇ ಹುಟ್ಟು ಹಬ್ಬದ ಅಂಗವಾಗಿ ಏ.4 ರಂದು ಕಂಬಳೇಶ್ವರ ಮಠದಲ್ಲಿ ಮಠದ ಭಕ್ತರು, ಶಿವಾಚಾರ್ಯರ ಅನುಯಾಯಿಗಳು ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ತಾಲೂಕು ಮಟ್ಟದ ಕಣ್ಣಿನ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲು ಇಂದೂರು ಹಾಗೂ ಜಗದೇವ ದಿಗ್ಗಾಂವಕರ್ ಅವರು ತಿಳಿಸಿದರು.
ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನುಗ್ರಹ ಆಸ್ಪತ್ರೆಯ ತಜ್ಞ ನೇತ್ರ ವೈದ್ಯರ ತಂಡದಿಂದ ಕಣ್ಣಿನ ತಪಾಸಣೆ ಮಾಡಲಾಗುವುದು. ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಬೇಕಾದವರನ್ನು ಆಯ್ಕೆ ಮಾಡಲಾಗುವುದು. ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ಕಲಬುರಗಿಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿ, ಮನೆಗೆ ಕರೆದುಕೊಂಡು ಬರುವ ಜವಾಬ್ದಾರಿ ಮಠದ ಭಕ್ತರು ನಿರ್ವಹಿಸಲಿದ್ದಾರೆ ಎಂದರು.
ಶಿಬಿರದಿಂದ ಕಡುಬಡವರಿಗೆ ತುಂಬಾ
ಅನುಕೂಲವಾಗಲಿದೆ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಶಿಬಿರಕ್ಕೆ ಬರುವ ಭಕ್ತರಿಗೆ, ಕಣ್ಣಿನ ತಪಾಸಣೆಗೆ ಬರುವ ಜನರಿಗೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಅವರು ತಿಳಿಸಿದರು.
ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ
ಮಲ್ಲು ಇಂದೂರು- 9448464645,
ಪ್ರಸಾದ್ ಆವಂಟಿ-8197117777,
ನೀಹಾಲ್ ಪಾಟೀಲ್ ಬೆಳಗುಂಪಾ- 9243214444, ಶಿವಶರಣಯ್ಯ -9743270344 ಅವರನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಪ್ರಸಾದ್ ಅವಂಟಿ ಮಾತನಾಡಿ, ಕಂಬಳೇಶ್ವರ ಶ್ರೀಗಳು ಮಠದ ಮೂಲಕ ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಸಮಾಜದ ಏಳಿಗೆಗೆ ತಮ್ಮದೆಯಾದ ಕೊಡುಗೆ ನೀಡುತ್ತಿದ್ದಾರೆ. ಅವರ ಸಮಾಜ ಸೇವೆಯನ್ನು ಗುರುತಿಸಿ ವಿವಿಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ ರೇಷ್ಮಿ, ನಿಹಾಲ್ ಪಾಟೀಲ್ ಬೆಳಗುಂಪಾ, ಅನೀಲಕುಮಾರ ಸುಲ್ತಾನಪೂರ, ಶಿವಶರಣಯ್ಯ ಪುರಂದರಮಠ, ಕರಬಸಯ್ಯಾ ಶಾಸ್ತ್ರಿ ಇದ್ದರು.
ವರದಿ ಮೊಹಮ್ಮದ್ ಆಲಿ, ಚಿತ್ತಾಪುರ
