ಗ್ರಾಮೀಣ ಅಭಿವೃದ್ಧಿಯ ರಸ್ತೆಗಳಿಗೆ ಮಾನ್ಯತೆ ತುಂಬಾ ಮುಖ್ಯವಾದದ್ದು ಹಾಗೂ ರಸ್ತೆ ಕಾಮಗಾರಿ ಕಲ್ಯಾಣ ಪಥ ಯೋಜನೆಯಲ್ಲಿ 489.30 ಲಕ್ಷ ರೂ.ಗಳಲ್ಲಿ ಬಬ್ಬಲಾಪುರ ಸೇರಿದಂತೆ ಇನ್ನೂ ಹಲವು ಗ್ರಾಮಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ರಸ್ತೆಗಳ ಅಭಿವೃದ್ಧಿ ಮಾಡುವುದರಲ್ಲಿ ಸಾಕಷ್ಟು ಶ್ರಮ ಹಾಕಿದ್ದೇವೆ ಹಾಗೂ ರಸ್ತೆಗಳ ಅಭಿವೃದ್ಧಿ ಆದಂತೆ ಹಳ್ಳಿಗಳ ಅಭಿವೃದ್ಧಿ ಕಡೆ ಗಮನ ಹರಿಸಬಹುದು ಹಾಗೂ ಅಭಿವೃದ್ಧಿಯಾಗುತ್ತವೆ ಎಂದರು. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಕಲ್ಯಾಣ ಪಥ ಯೋಜನೆ ಕಲ್ಯಾಣ ಕರ್ನಾಟಕಕ್ಕಾಗಿ ಸಿದ್ದರಾಮಯ್ಯನವರ ನೇತೃತ್ವ ಕಾಂಗ್ರೆಸ್ ಸರ್ಕಾರದಿಂದ ರೂಪಿಸಲ್ಪಟ್ಟಿದೆ ಅಭಿವೃದ್ಧಿ ಯೋಜನೆಗಳು, ರಸ್ತೆ ಕಾಮಗಾರಿಗಳ ಪಟ್ಟಿ ಬಡೇಲಡಕು ನಿಂದ ಬೀರಲಗುಡ್ಡ ರಸ್ತೆ ಅಭಿವೃದ್ಧಿ ಖರ್ಚು: ₹4.04 ಕೋಟಿ ಬೀರಲಗುಡ್ಡ ನಿಂದ ಎನ್‌ಹೆಚ್-50 ರಸ್ತೆ ಅಭಿವೃದ್ಧಿ ಖರ್ಚು: ₹2.71 ಕೋಟಿ ತುಪ್ಪಕನಹಳ್ಳಿ ನಿಂದ ಅಕ್ಕಾಪುರ ರಸ್ತೆ ಅಭಿವೃದ್ಧಿ ಖರ್ಚು ₹4.89 ಕೋಟಿ ಹಿರೇಹೆಗ್ದಾಳ್ ನಿಂದ ಜಂಗಮ ಸೋವೇನಹಳ್ಳಿ ರಸ್ತೆ ಅಭಿವೃದ್ಧಿ ಖರ್ಚು:₹2.95 ಕೋಟಿ ಬೊಪ್ಪಲಾಪುರ ನಿಂದ ತಾಲೂಕು ಗಡಿ (ತಿಮ್ಮಲಾಪುರ) ರಸ್ತೆ ಅಭಿವೃದ್ಧಿ ಖರ್ಚು: ₹2.91 ಕೋಟಿ ಆರೋಗ್ಯ ಮೂಲಸೌಕರ್ಯ ಯೋಜನೆಗಳು ಮೊರಬ ಗ್ರಾಮ – ಆಯುಷ್ಮಾನ್ ಆರೋಗ್ಯ ಉಪಕೇಂದ್ರ (ಹೊಸ ಕಟ್ಟಡ) ಖರ್ಚು:₹65 ಲಕ್ಷ ಹಿರೇಹೆಗ್ದಾಳ್ ಗ್ರಾಮ – ಆಯುಷ್ಮಾನ್ ಆರೋಗ್ಯ ಉಪಕೇಂದ್ರ (ಹೊಸ ಕಟ್ಟಡ) ಖರ್ಚು:₹65 ಲಕ್ಷ,ಮುಖ್ಯ ಮಹತ್ವದ ಅಂಶಗಳು ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಆರೋಗ್ಯ ಮೂಲಸೌಕರ್ಯದತ್ತ ಗಮನ ಶಾಸಕರ ಅನುದಾನ, ರಾಜ್ಯ ಮತ್ತು ಕೇಂದ್ರ ಯೋಜನೆಗಳಮೂಲಕ ಹಣದುಬ್ಬರ ಪಾರದರ್ಶಕ ಮತ್ತು ಸುಗಮ ಅನುಷ್ಠಾನದ ಮೇಲೆ ಒತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಅನುದಾನದ ಅಡಿಯಲ್ಲಿ ರಸ್ತೆ ಮಾಡಿ ಕಲ್ಯಾಣ ಪಥ ಯೋಜನೆಯನ್ನೂ ಜಾರಿಗೆ ತಂದಿದ್ದಾರೆ ಗ್ರಾಮೀಣ ರಸ್ತೆ ಕಾಮಗಾರಿಗೆ ವಿಶೇಷ ವಾಗಿ ಗಮನ ಕೊಟ್ಟಿದ್ದಾರೆ ಸಿದ್ದರಾಮಯ್ಯ ಅವರ ಅಡಿಯಲ್ಲಿ ಹಲವಾರು ರಸ್ತೆಗಳನ್ನು ಅಭಿವೃದ್ಧಿ ಹಾಗೂ ರಸ್ತೆಯನ್ನು ಅಗಲೀಕರಣ ಮಾಡಿದ್ದೇವೆ ಮತ್ತು ಗಮನವನ್ನು ಸಹ ಕೊಟ್ಟಿದ್ದೇವೆ ರಸ್ತೆಗಳು ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದಿಂದ ಕೂಡಿದ್ದರೆ ಅಂತಹ ಅಧಿಕಾರಿಗಳಿಗೆ ಶಿಸ್ತು ಕ್ರಮ ಜರುಗಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಕಾವಲಿ ಶಿವಪ್ಪ ನಾಯಕ ಹಾಗೂ ಮರಭ,ಹಿರೇ ಹೆಗ್ಡಾಳ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಮಹಿಳಾ ಸಂಘ ಸಂಸ್ಥೆಯವರು ಮುಂತಾದ ಹಲವಾರು ಯುವಕರು, ಗ್ರಾಮಸ್ಥರು ಸೇರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
