
ಅಯಯ್ಯೋ ಇದು ಯಾವ ನ್ಯಾಯ ಗಾಳಿಗೆ ತೂರಿದ ಕಂಪನಿಯ ಕಾನೂನು
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಈರಪ್ಪ ಛತ್ರಸಲಾ ರವರು ವಿಕಟ್ ಸಾಗರ್ ಸಿಮೆಂಟ್ ಕಂಪನಿ ಗೆ ಭೂಮಿಯನ್ನು ಕೊಟ್ಟಿದ್ದಾರೆ ಆದರೆ ವಿನಾ ಕಾರಣ ನೆಪ ವಡ್ಡಿ ಇವತ್ತಿಗೂ ಕೂಡಾ ಕೆಲಸ ಕೊಡದೆ ಸತಾಯಿಸುತ್ತಿರುವ ಕಂಪನಿ ಟ್ರೈನಿಂಗ್ ನಲ್ಲಿ ಇರುವಾಗಲೇ ಸಾವನ್ನಪ್ಪಿ ಆ ಜಮೀನು ಕೊಟ್ಟ ಯಜಮಾನನ ಕುಟುಂಬದವರು ಬಂದು ಕೇಳಿದಾಗ ಕೆಲಸವನ್ನು ಕೊಡದೆ ದಿನ ದೂಡುತ್ತಿದ್ದಾರೆ , ಅದಕ್ಕಾಗಿ ಇಂದು ತಾಯಿ ಮತ್ತು ಮಗಳು ಕಂಪನಿಯ ಎದುರುಗಡೆ ವಿಕಟ ಸಾಗರ್ ಸಿಮೆಂಟ್ ಕಂಪನಿಯ ಗೇಟ್ ಹತ್ತಿರ ಪೆಟ್ರೋಲ್ ಹಿಡಿದುಕೊಂಡು ಬಂದು ಹೋರಾಟ ನಡೆಸಿದರು.
ಒಂದು ವೇಳೆ ಈ ಕೂಡಲೇ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಕ್ಷೇತ್ರದ ಶಾಸಕರ ಕಾರ್ಯಾಲಯದ ಎದುರುಗಡೆ ನೊಂದ ಈ ಕುಟುಂಬದವರನ್ನು ಕರೆದುಕೊಂಡು ಕಾರ್ಮಿಕರ ಜೊತೆಗೂಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀ ಗೋಪಾಲ್ ಎಂ. ಪಿ,
ಶ್ರೀ ಮಾರುತಿ ಗಂಜಗಿರಿ , ಶ್ರೀ ದಸ್ತಾಪ್ಪಾ ಪೂಜಾರಿ ,
ಶ್ರೀ ಬಾಬುರಾವ್ ಪೂಜಾರಿ ಎಚ್ಚರಿಸಿದ್ದಾರೆ.
- ಕರುನಾಡ ಕಂದ
