ಬಳ್ಳಾರಿ / ಕಂಪ್ಲಿ : ಆಧುನಿಕ ಭಾರತದಲ್ಲಿ ಮನುಷ್ಯನಿಂದ ಸಾಕಷ್ಟು ಪರಿಸರ ನಾಶವಾಗುತ್ತಿರುವ ಸಂದರ್ಭದಲ್ಲಿ ಇನ್ನೊಬ್ಬ ಪರಿಸರ ಪ್ರೇಮಿ ಹಳ್ಳಿ ಮರದ ವೀರೇಶ್ ಇವರು ಇಲ್ಲಿನ ಗಿಡವನ್ನ ಜೆಸಿಬಿ ಮೂಲಕ ತೆಗೆಸಿ ಬೇರೆ ಕಡೆ ಸ್ಥಳಾಂತರಿಸುವ ಮೂಲಕ ಪರಿಸರ ಪ್ರೇಮ ಮೆರೆದಿರುವುದು ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.
ತಾಲೂಕು ಸಮೀಪದ ಸಿರಿಗೇರಿ ಗ್ರಾಮದಲ್ಲಿರುವ ನೂತನ ಶ್ರೀ ವಾರದ ಆಂಜನೇಯ ದೇವಸ್ಥಾನ ಆವರಣದಲ್ಲಿದ್ದ ಬೃಹತ್ ಆಕಾರದ ಆಲದ ಮರವನ್ನು ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಗೆ ಸ್ಥಳಾಂತರಿಸಲಾಯಿತು.
ದೇವಸ್ಥಾನದ ಕಾಂಪೌಂಡಿನ ಒಳಭಾಗದಲ್ಲಿ ಎರಡು ಬೃಹತ್ಕಾರದ ಮರಗಳು ಅಡ್ಡವಾಗಿದ್ದವು. ಈ ಗಿಡಗಳನ್ನು ತೆರವುಗೊಳಿಸುವ ಅನಿವಾರ್ಯತೆ ಉಂಟಾದ ಹಿನ್ನೆಲೆ ಗಮನ ಹರಿಸಿದ ಪರಿಸರ ಪ್ರೇಮಿ ಹಳ್ಳಿಮರ ವೀರೇಶ್ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ಬುಡ ಸಮೇತ ಮರಗಳನ್ನು ತೆರವುಗೊಳಿಸಿ ನಂತರ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಸಾರಿಗೆ ಬಸ್ ನಿಲ್ದಾಣ ಮುಂಭಾಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಸ್ಥಳದಲ್ಲಿ ಮರಗಳನ್ನ ನೆಡುವ ಮೂಲಕ ಮಾದರಿಯಾಗಿದ್ದಾರೆ.
ಸಸಿಗಳು ಮರಗಳಾಗಿ ಬೆಳೆದು ಮನುಷ್ಯ ಸೇರಿದಂತೆ ಸಕಲ ಜೀವ ಪ್ರಾಣಿಗಳಿಗೆ ಗಾಳಿ ಮತ್ತು ನೆರಳಿನ ಆಶ್ರಯ ನೀಡುತ್ತದೆ. ಆದರೆ ಇತ್ತೀಚಿನ ದಿನಮಾನದಲ್ಲಿ ಪರಿಸರ ನಾಶದಿಂದಾಗಿ ಮಳೆ ಕೊರತೆ ಪರಿಸರದಲ್ಲಾಗುವ ಬದಲಾವಣೆಯನ್ನು ಕಾಣಬಹುದಾಗಿದೆ. ಇಂಥದರಲ್ಲಿ ಇಲ್ಲಿನ ಹಳ್ಳಿ ಮರದ ವೀರೇಶ್ ಅವರ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
