ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಬಿಜೆಪಿ ಸ್ಥಾಪನೆ ದಿನದ ಅಂಗವಾಗಿ ಸಿಂದಗಿ ಮಂಡಲ ವತಿಯಿಂದ ಮೋರಟಗಿ ಮಹಾಶಕ್ತಿ ಕೇಂದ್ರ ಧ್ವಜಾರೋಹಣ ನೆರವೇರಿಸಿ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕರಾದ ರಮೇಶ ಭೂಸನೂರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ಕಾರ್ಯಕರ್ತರು ನಮ್ಮ ಪಕ್ಷದ ಸಂಸ್ಥಾಪನೆಯ ಮೂಲ ಉದ್ದೇಶವನ್ನರಿತು ಹಿರಿಯರ ಕನಸು ಈಡೇರಿಸುವ ಮೂಲಕ ಎಲ್ಲರೂ ಸಮರ್ಪಣಾ ಭಾವದಿಂದ ಶ್ರಮಿಸೋಣ ಎಂದು ಹೇಳಿದರು. ಭಾರತೀಯ ಜನತಾ ಪಾರ್ಟಿ ಕೇವಲ ಒಂದು ರಾಜಕೀಯ ಪಕ್ಷವಲ್ಲ ಇದೊಂದು ತತ್ವ ಸಿದ್ಧಾಂತ ಹಾಗೂ ತಪಸ್ಸಿನ ತಾಣ ದೇಶ ಕಟ್ಟಲೆಂದೇ ದೇಶ ಉಳಿಸಲೆಂದೇ ಆತ್ತತ್ವಕ್ಕೆ ಬಂದ ರಾಷ್ಟ್ರ ಭಕ್ತಿಯ ಸಂಘಟನೆಯ ನಾನೊಬ್ಬ ಬಿಜೆಪಿಯ ಕಾರ್ಯಕರ್ತ ಎಂದು ಹೇಳುಕೊಳ್ಳಲು ಪ್ರತಿಯೊಬ್ಬ ಕಾರ್ಯಕರ್ತರಿಗೂ ಹೆಮ್ಮೆ ಪಡುವಂತೆ ಇಂದು ಪಕ್ಷಿ ಬೆಳೆದು ನಿಂತಿದೆ ತ್ಯಾಗ ಬಲಿದಾನಗಳಿಂದ ನಿರ್ಮಿತವಾಗಿರುವ ಪರಂಪರೆಯ ಕೋಟಿಯಾಗಿ ನೆಲೆ ನಿಂತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ತೊಟ್ಟು ಭಾರತೀಯ ಜನತಾ ಪಾರ್ಟಿ ಸಂಸ್ಥಾಪನೆಯ ಧ್ಯೇಯವನ್ನು ಸಾಕಾರಗೊಳಿಸೋಣ ಎಂದು ಈ ಸಂದರ್ಭದಲ್ಲಿ ಹೇಳಿದರು ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ರಮೇಶ ಭೂಸನೂರ ಸಿಂದಗಿ ಮಂಡಲ ಅಧ್ಯಕ್ಷರಾದ ಸಂತೋಷ್ ಪಾಟೀಲ್ ಡಂಬಳ ಹಾಗೂ ಪಕ್ಷದ ಎಲ್ಲಾ ತಾಲೂಕು ಮುಖಂಡರು ಹಾಗೂ ಭೂತ ಮಟ್ಟದ ಅಧ್ಯಕ್ಷರು ಮೋರಟಗಿ ಮಹಾಶಕ್ತಿ ಕೇಂದ್ರ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ. ಹಣಮಂತ ಚ. ಕಟಬರ್
