ಬಳ್ಳಾರಿ/ ಕಂಪ್ಲಿ : ಕಂಪ್ಲಿ ಪಟ್ಟಣದ ಕುರುಗೋಡು ರಸ್ತೆಯಲ್ಲಿರುವ ಮಾಜಿ ಶಾಸಕ ಟಿ. ಎ. ಸುರೇಶಬಾಬು ಅವರ ಸಾರ್ವಜನಿಕ ಜನ ಸಂಪರ್ಕ ಕಚೇರಿ ಆವರಣದಲ್ಲಿ ಭಾರತೀಯ ಜನತಾ ಪಕ್ಷದ 45ನೇ ಸಂಸ್ಥಾಪನ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪಕ್ಷದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ಭಾರತಾಂಬೆಯ ಭಾವಚಿತ್ರಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಚನೆ ಮಾಡಿದ ನಂತರ ಪಕ್ಷದ ಧ್ವಜಾರೋಹಣವನ್ನು ಕಂಪ್ಲಿ ತಾಲೂಕು ಭಾಜಪ ಅಧ್ಯಕ್ಷ ಸಿ.ಡಿ. ಮಹಾದೇವ ನೆರವೇರಿಸಿದರು. ನಂತರ ಸಿ.ಡಿ. ಮಹಾದೇವ ಅವರು ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ 1980 ರಲ್ಲಿ ಸ್ಥಾಪನೆಯಾಗಿದ್ದು ಇಂದು ಪಕ್ಷದ 45ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಕೇವಲ ಬೆರಣಿಕೆಯಷ್ಟು ಶಾಸಕರು ಹಾಗೂ ಸಂಸದರೊಂದಿಗೆ ಆರಂಭವಾದ ಪಕ್ಷದ ಏಳಿಗೆ ಇಂದು ಇಡೀ ದೇಶದಲ್ಲಿ ಮುಕ್ಕಾಲು ಭಾಗದಷ್ಟು ರಾಜ್ಯಗಳಲ್ಲಿ ಮತ್ತು ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಭಾಜಪ ಪಕ್ಷವು ಆಡಳಿತ ನಡೆಸುತ್ತಿದೆ. ಭಾರತೀಯ ಜನತಾ ಪಕ್ಷದ ಎಲ್ಲಾ ಮುಖಂಡರು ಹಿರಿಯರು ಕಾರ್ಯಕರ್ತರು ಅಭಿಮಾನಿಗಳಿಂದಾಗಿ ಪಕ್ಷವು ಅದ್ಭುತವಾದ ಸಾಧನೆ ಮಾಡಿದೆ ಮೂರನೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಸುಭದ್ರತೆ ನೆಲೆಸಿದೆ.
ಮುಂದೆಯೂ ಭಾಜಪವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು. ನಂತರ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷ ಡಾ. ಅರುಣ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ಪುರಸಭೆ ಸದಸ್ಯರು ವಿವಿಧ ಮೋರ್ಚಗಳ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಪಕ್ಷದ ವಿಧ ಮೋರ್ಚಗಳ ಪದಾಧಿಕಾರಿಗಳು ಪುರಸಭೆ ಸದಸ್ಯರಾದ ಎನ್. ರಾಮಾಂಜನೇಯಲು, ಡಾ. ವಿ. ಎಲ್. ಬಾಬು, ಟಿ. ವಿ. ಸುದರ್ಶನ್ ರೆಡ್ಡಿ, ಹೂಗಾರ್ ರಮೇಶ, ಮುಖಂಡರಾದ ಮುರಳಿ ಮೋಹನ್ ರೆಡ್ಡಿ, ಪಿ. ಬ್ರಹ್ಮಯ್ಯ, ಅಗಳಿ ಪಂಪಾಪತಿ, ಎನ್, ಪುರುಷೋತ್ತಮ, ಕೊಡಿದಲ ರಾಜು , ಇಟಗಿ ವಿರೂಪಾಕ್ಷಿ, ಎಸ್ . ಕೆ. ಇಂತೀಯಾಜ್, ಮಾಜಿ ಶಾಸಕ ಆಪ್ತ ಸಹಾಯಕ ವಿರುಪಾಕ್ಷಿ, ರಬಿಯ ಸೇರಿದಂತೆ ವಿವಿಧ ಮೋರ್ಚಾದ ಪದಾಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
