ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಹಾವಳಿ ಎಗ್ಗಿಲ್ಲದೇ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕುಳಿತುಕೊಂಡಿದ್ದನ್ನು ನೋಡಿದರೆ ಇಲಾಖೆಯ ಅಧಿಕಾರಿಗಳು ನೇರವಾಗಿ ಇದರಲ್ಲಿ ಪಾಲುದಾರರು ಎಂಬ ಅನುಮಾನ ಕಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇಧಿಕೆ ತಾಲೂಕು ಅಧ್ಯಕ್ಷರಾದ ನಂದಪ್ಪ ಮಡ್ಡಿ ಆರೋಪಿಸಿದ್ದಾರೆ. ಅವರು ಇಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಕೊಟ್ಟು ಸುದ್ಧಿಗಾರರೊಂದಿಗೆ ಮಾತನಾಡಿ ತಾಲೂಕಿನ ಗಬ್ಬೂರು ಸುಂಕೇಶ್ವರಹಾಳ ಜಾಲಹಳ್ಳಿ ದೇವದುರ್ಗ ತುಂಬಾ ಅನಧಿಕೃತ ಕೋಚಿಂಗ್ ಸೆಂಟರ್ ನಲ್ಲಿ ಸರಕಾರಿ ಮತ್ತು ಅನುದಾನಿತ ಅನುದಾನ ರಹಿತ ಶಾಲಾ ಮಕ್ಕಳನ್ನು ದಾಖಲು ಮಾಡಿಕೊಳ್ಳದೆ ಇಲಾಖೆಯ ನಿಯಮ ಉಲ್ಲಂಘನೆ ಮಾಡಿ ನಡೆಸುತ್ತಿರುವುದನ್ನು ಶುಕ್ರವಾರದೊಳಗೆ ಬಂದ್ ಮಾಡದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿರ್ಧಾಷ್ಟಾವದಿ ಧರಣಿ ಮಾಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗುರುನಾಥ ರಡ್ಡಿ ಭೀಮಣ್ಣ ಅಮರೇಶ ನಂದಪ್ಪ ಎಸ್ ಪಿಡ್ಡಪ್ಪ ಉಪಸ್ಥಿತರಿದ್ದರು.
ವರದಿ :ಶರಣು
