ಬಳ್ಳಾರಿ / ಕಂಪ್ಲಿ : ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿರುವ ಶ್ರೀ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಕ್ಕಮಹಾದೇವಿ ಜಯಂತಿಯ ಅಂಗವಾಗಿ ಏಪ್ರಿಲ್ 8 ರಿಂದ ಏಪ್ರಿಲ್ 13 ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಹಾಗೂ ಕಳಸಾರೋಹಣ ಮತ್ತು ಪ್ರವಚನ ಕಾರ್ಯಕ್ರಮಗಳು ಹಾಗೂ ಅಕ್ಕಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ಜರಗಲಿವೆ ಎಂದು ಅಕ್ಕಮಹಾದೇವಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಬಿ.ಎಂ. ಪುಷ್ಪ ರುದ್ರಯಸ್ವಾಮಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಅವರು ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಏಪ್ರಿಲ್ ಎಂಟರಿಂದ ಏಪ್ರಿಲ್ ೧೧ ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ 7:00 ವರೆಗೆ ಉತ್ತರ ಕನ್ನಡ ಜಿಲ್ಲೆ ಅತ್ತಿವೇರಿ ಬಸವ ಧಾಮದ ಪೂಜ್ಯಶ್ರೀ ಬಸವ ಮಾತಾಜಿಯವರಿಂದ ಶರಣರ ಆಚಾರ ವಿಚಾರಗಳು ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 11ರ ಸಂಜೆ 5:30ಕ್ಕೆ ವಚನ ಗಾಯನ ಸ್ಪರ್ಧೆ ನಡೆಯಲಿದ್ದು ಏಪ್ರಿಲ್ 12 ರಂದು ಬೆಳಿಗ್ಗೆ ಸಂಗಾತ್ರಯ ಸಂಸ್ಕೃತ ಪಾಠಶಾಲೆಯ ವಿಶ್ರಾಂತ ಪ್ರಾಚಾರ್ಯರಾದ ಎಂ.ಎಸ್. ಶಶಿಧರ್ ಶಾಸ್ತ್ರಿಗಳ ನೇತೃತ್ವದಲ್ಲಿ ನೂತನ ಕಳಸರೋಣ ನೆರವೇರಲಿದ್ದು, ಬೆಳಗ್ಗೆ 10.30 ಕ್ಕೆ ನೂತನವಾಗಿ ನಿರ್ಮಿಸಲಾದ ಅಕ್ಕಮಹಾದೇವಿಯ ಅನುವಭ ಮಂಟಪದ ಲೋಕಾರ್ಪಣೆ ಜರುಗಲಿದೆ ಸಂಜೆ 4:00ಗೆ ಶ್ರೀ ಅಕ್ಕಮಹಾದೇವಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು ಸಂಜೆ ಏಳು ಗಂಟೆಗೆ ಮುತ್ತೈದರಿಗೆ ಉಡಿತುಂಬುವ ಕಾರ್ಯಕ್ರಮ ಜರಗಲಿದೆ. ಏಪ್ರಿಲ್ 13 ರಂದು ಸಾಧಕರಿಯರಿಗೆ ಅಕ್ಕಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮಗಳಲ್ಲಿ ನಾಗಭೂಷಣ ಶಿವಾಚಾರ್ಯರು ಶ್ರೀ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯರು ಶ್ರೀ ವಾಮದೇವ ಶಿವಾಚಾರ್ಯ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಶಿವಾಚಾರ್ಯರು ಹಾಲಿ ಮಾಜಿ ಜನಪ್ರತಿನಿಧಿಗಳು ಅಕ್ಕಮಹಾದೇವಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆಂದು ವಿವರಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ.
