ಬಳ್ಳಾರಿ / ಕಂಪ್ಲಿ : ಇತ್ತೀಚಿಗೆ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರಿಂದ ಮುಖ್ಯಮಂತ್ರಿ ಪದಕ ಪಡೆದ ಕಂಪ್ಲಿ ಪೊಲೀಸ್ ಠಾಣೆಯ ಸಿ.ಪಿ.ಐ. ಕೆ.ಬಿ.ವಾಸುಕುಮಾರ ಇವರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಿಲಾಯಿತು.
ನಂತರ ಟ್ರಸ್ಟ್ ಅಧ್ಯಕ್ಷ ಯು. ಜಿಲಾನ (ಅಕ್ಕಿ ಜಿಲಾನ) ಮಾತನಾಡಿ, ಸಿಪಿಐ ವಾಸುಕುಮಾರ ಅವರ ದಕ್ಷ ನಿರ್ವಹಣೆ ಅಪರಾಧ ಚಟುವಟಿಕೆ ನಿಯಂತ್ರಣ, ಕಳ್ಳತನ ಪ್ರಕರಣ ಪತ್ತೆ ಕಾರ್ಯ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ಅಮೂಲ್ಯ ಸೇವೆ ಹಾಗೂ ಸಮುದಾಯ ಸ್ನೇಹಪೂರ್ಣ ಕಾರ್ಯ ಮತ್ತು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಬಗೆಹರಿಸಿದ ಪ್ರತಿಫಲವಾಗಿ ಸಿಎಂ ಪದಕ ಒಲಿದು ಬಂದಿದ್ದು, ಇದರಿಂದ ಕಂಪ್ಲಿ ಠಾಣೆಗೆ ಕೀರ್ತಿ ಬಂದಂತಾಗಿದೆ. ಶಿಸ್ತಿನ ಸಿಪಾಯಿಯಂತೆ ಜನರ ಸೇವೆ ಮಾಡಿಕೊಂಡು, ಅಚ್ಚುಮಚ್ಚಿನ ಅಧಿಕಾರಿಯಾಗಿದ್ದಾರೆ. ಇವರಿಗೆ ಇನ್ನಷ್ಟು ಪದಕಗಳು ಸಿಗಲಿ ಮತ್ತು ಉತ್ತುಂಗಕ್ಕೆ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಟ್ರಿಸ್ಟ್ ನ ಸಂಚಾಲಕ ಬಡಿಗೇರ್ ಜಿಲಾನ್ ಸಾಬ್, ಉಪಾಧ್ಯಕ್ಷ ಹಾಜಿ ಎಸ್. ಕೆ. ಇಂತಿಯಾಜ್, ಆರ್ ಸುಭಾನ್, ಪದಾಧಿಕಾರಿಗಳಾದ ಆರ್ ಜಿಲಾನ್, ಮೈನುದ್ದೀನ್, ಎನ್ ಮೌಲ ಹುಸೇನ್, ಎ .ಎಸ್. ಯಲ್ಲಪ್ಪ, ಗಾದಿಲಿಂಗಪ್ಪ, ಎನ್. ಮೆಹಬೂಬ್, ಮೈನುದ್ದೀನ್ ಮುಸ್ತಾಫ, ನಿಸಾರದ್ದೀನ್ , ರಿಯಾಜ್, ಸೇರಿದಂತೆ ಇತರರು ಇದ್ದರು.
ವರದಿ : ಬಡಿಗೇರ್ ಜಿಲಾನ್ ಸಾಬ್
