ಕಲಬುರಗಿ: ಮಾದಿಗ ಸಮುದಾಯದ ಮನೆ ಮನೆಗೆ ಜಾತಿ ಸಮೀಕ್ಷೆ ಅಧಿಕಾರಿಗಳು ಭೇಟಿ ನೀಡಿದಾಗ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ “ಮಾದಿಗ” ಎಂದು ಬರೆಯಿಸಬೇಕೆಂದು ಮಾದಿಗ ಸಮಾಜದ ಮುಖಂಡ ರವಿ ಸಿಂಗೆ ಅರಣಕಲ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಪದ್ಮಶ್ರೀ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಸುಮಾರು 30 ವರ್ಷಗಳ ಸುಧೀರ್ಘ ಒಳ ಮೀಸಲಾತಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹೋರಾಟದ ಹಿನ್ನಲೆ ಆ.1 ರಂದು ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸದನದಲ್ಲಿ ಅಂಗೀಕರಿಸಿ ವರ್ಗೀಕರಣವನ್ನು ಕಾಯ್ದೆ ರೂಪದಲ್ಲಿ ತರಲು ಆಯಾ ರಾಜ್ಯಗಳು ಮುಂದಾಗಿವೆ. ಆದರೆ ಕರ್ನಾಟಕ ರಾಜ್ಯದಲ್ಲಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಅವರು ತೆಗೆದುಕೊಂಡ ಎರಡು ತಿಂಗಳ ಸಮಯದೊಳಗಡೆ ಮಾ.27ರಂದು ನ್ಯಾ. ಹೆಚ್. ಎನ್. ನಾಗಮೋಹನ್‌ದಾಸ್ ರವರ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾಕ್ಕೆ ರಾಜ್ಯದಲ್ಲಿನ ತಮ್ಮ ಜಾತಿಯ ಹೆಸರು ಹೇಳಿಕೊಳ್ಳದೇ ಇರುವ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಎಸ್.ಸಿ, ಹರಿಜನ ಎಂದು ಪ್ರಮಾಣ ಪತ್ರ ಪಡೆದಿರುವ ಜನರು ತಮ್ಮ ಜಾತಿಯ ಹೆಸರುನ್ನು ಬರೆಯಿಸದೇ ಗೊಂದಲವಿರುವ ಕಾರಣ ನಿಖರವಾದ ಮಾಹಿತಿಗಾಗಿ ಜಾತಿಯನ್ನು ಕಡ್ಡಾಯವಾಗಿ ಬರೆಯಿಸಿಕೊಳ್ಳಲು ಸದರಿ ಸಮೀಕ್ಷೆಯನ್ನು ಸರ್ಕಾರ ನಡೆಸಲು ಮುಂದಾಗಿದೆ ಎಂದು ಹೇಳಿದರು.
ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ, ಎಸ್.ಸಿ. ಹರಿಜನ ಮತ್ತು ಪರಿಶಿಷ್ಟ ಜಾತಿಯ ಉಪ ಜಾತಿಗಳ ಜನಸಂಖ್ಯೆ ಕುಟುಂಬಗಳ ಸಂಖ್ಯೆ ಅವರ ಶಿಕ್ಷಣ ವೃತ್ತಿ ವಾಸಿಸುತ್ತಿರುವ ಪ್ರದೇಶ ಮನೆಯ ಆದಾಯ, ಭೂಮಿಯ ಒಡೆತನ, ಮಾನವ ಅಭಿವೃದ್ಧಿ ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿಷಯಗಳ ಸಮಗ್ರ ವರದಿಯನ್ನು ತಯಾರಿಸುವುದು ಅವಶ್ಯವಾಗಿದೆ ಎಂದರು. 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಸುಮಾರು 1,04,74,992 ಪರಿಶಿಷ್ಟ ಜಾತಿಯ ಜನ ಸಂಖ್ಯೆಯಿದೆ. ಪುನಃ ಈ ಎಲ್ಲಾ ಕುಟುಂಬಗಳನ್ನು ಸಂಪೂರ್ಣ ರಾಜ್ಯಾದ್ಯಂತ ಸಮೀಕ್ಷೆ ನಡೆಸಲು ಎ.26 ರವರೆಗೆ ರಾಜ್ಯ ಸರಕಾರ ಅದೇಶವನ್ನು ಹೊರಡಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ನಗರಗಳಲ್ಲಿ ಮತ್ತು ಎಲ್ಲಾ ತಾಲೂಕಿನ ಗ್ರಾಮಗಳಲ್ಲಿ ಜಾತಿಯ ಸಮೀಕ್ಷೆ ಮಾಡಲು ಅಧಿಕಾರಿಗಳು ಮನೆ ಮನೆಗೆ ಬರುತ್ತಾರೆ. ಆ ಸಮಯದಲ್ಲಿ ಮಾದಿಗ ಸಮುದಾಯ ಕಡ್ಡಾಯವಾಗಿ ತಮ್ಮ ಜಾತಿಯ ಹೆಸರನ್ನು ಮಾದಿಗ ಎಂದು ಬರೆಯಿಸಬೇಕು ಮತ್ತು ಮಾದಿಗರು ಎಂದು ಹೇಳಿ ಎಂದು ಮಾದಿಗ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಹಾಗೂ ಮಾದಿಗ ಉಪ ಜಾತಿಗಳಲ್ಲಿರುವ ಅವರ ಉಪಜಾತಿಗಳನ್ನು ಕೂಡ ಬರೆಯಿಸಬೇಕೆಂದು ಮನವಿ ಮಾಡಿದರು.
- ಕರುನಾಡ ಕಂದ
