
ಕೊಪ್ಪಳ : ಮಹಿಳೆಯರು ಸೂಕ್ತವಾದ ಸೌಲಭ್ಯಗಳಿಂದ ಅರೋಗ್ಯವನ್ನು ಸುದರಿಕೊಳ್ಳಬೇಕು ಎಂದು ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ಉಪನ್ಯಾಸಕಿ ಡಾ. ಅಕ್ಕಮ್ಮ ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಕಾಲೇಜಿನ ಐಕ್ಯೂಎಸಿ ಮತ್ತು ಸಮಾಜಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರ ಆರೋಗ್ಯ, ಲಿಂಗ ಸಮಾನತೆ ಮತ್ತು ಪೌಷ್ಟಿಕತೆಯ ಮಹತ್ವ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಆರೋಗ್ಯವೆಂದರೆ ದೈಹಿಕ ಅರೋಗ್ಯ ಅಂತ ಅಲ್ಲ. ಅದು ನಮ್ಮ ಮಾನಸಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮತೋಲನ ಕಾಪಾಡಿಕೊಳ್ಳುವುದು ಎಂದರ್ಥ. ಮಹಿಳೆಯರು ಆಪೌಷ್ಟಿಕತೆಯಿಂದ ರಕ್ತ ಹಿನತೆಯಿಂದ ನರುಳುತ್ತಿದ್ದಾರೆ, ಶಿಶು ಮರಣ ಮತ್ತು ಹೆಣ್ಣು ಬ್ರೂಣ ಹತ್ಯೆ ಹೆಚ್ಚು ಆಗುತ್ತದೆ, ಹೆರಿಗೆ ಅದ ನಂತರ ಸರಿಯಾದ ಆರೈಕೆಯಿಲ್ಲದೆ ತಾಯಿ ಮರಣ ಪ್ರಮಾಣ ಹೆಚ್ಚು ಇದೆ. ಇವೆಲ್ಲಗಳನ್ನು ತಡೆಗಟ್ಟಲು ಸರಕಾರಿ ಬಹಳಷ್ಟು ಸೌಲಭ್ಯಗಳು ಇದ್ದರೂ ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ. ನಮ್ಮ ಸಮಾಜದಲ್ಲಿ ಅನಕ್ಷರತೆ, ಅಜ್ಞಾನ, ಮೌಢ್ಯ ಮತ್ತು ಕಂದಾಚಾರಗಳಿಗೆ ಜನರು ಬಲಿಯಾಗುತ್ತಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಚಾರ್ಯ ಡಾ. ಗಣಪತಿ ಲಮಾಣಿಯವರು ಕೈಗಾರಿಕೆ ಕ್ರಾಂತಿ ನಂತರ ಜನರು ಪಟ್ಟಣದಿಂದ ನಗರಕ್ಕೆ ವಲಸೆ ಬಂದರು. ನಗರದಲ್ಲಿ ಸರಿಯಾದ ಸೌಲಭ್ಯಗಳಿಂದ ವಂಚಿತರಾಗಿ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಇಂದು ಅವಿಭಕ್ತ ಕುಟುಂಬಗಳು ನಶಿಸಿ ಹೋಗುತ್ತವೆ. ಮಹಿಳೆಯರು ಉನ್ನತ ಶಿಕ್ಷಣಕ್ಕೆ ಸರಕಾರಿ ಹೆಚ್ಚಿನ ಸೌಲಭ್ಯ ಗಳನ್ನು ಪಡೆಕೊಳ್ಳಬೇಕು. ಕುಟುಂಬದಲ್ಲಿ ಯಾವುದಾದರು ನಿರ್ಧಾರಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಳ್ಳಬೇಕು. ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬಾರದು. ಲಿಂಗ ತಾರತಮ್ಯ ಮಾಡಬಾರದು. ಸಮಾಜದಲ್ಲಿ ಸಮಾನತೆಯನ್ನು ತರಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ಡಾ. ಮಲ್ಲಿಕಾರ್ಜುನ ಅವರು ಮಾತನಾಡುತ್ತಾ ವಿವಿಧ ವಿಷಯಗಳ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಜ್ಞಾನ ಬರುತ್ತದೆ. ಆದ್ದರಿಂದ ಎಲ್ಲರೂ ಈ ರೀತಿಯ ಉಪನ್ಯಾಸಗಳನ್ನು ಕಡ್ಡಾಯವಾಗಿ ಹಾಜರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಉಮೇಶ್ ಕಾತರಕಿ, ಡಾ. ಮಲ್ಲಿಕಾರ್ಜುನ, ಡಾ. ಹುಲಿಗೆಮ್ಮ, ಡಾ. ಅಶೋಕ ಕುಮಾರ, ಡಾ. ನರಸಿಂಹ, ಶಿವಪ್ಪ ಬಡಿಗೇರ್, ಶಿವಪ್ರಸಾದ್ ಹಾದಿಮನಿ, ಕಲ್ಲಯ್ಯ ಪೂಜಾರ್, ಶ್ರೇಕಾಂತ್, ಮಂಜಪ್ಪ ಕುರ್ಕಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಕ್ಷತಾ ನಿರೂಪಿಸಿದರು. ಕಾವ್ಯ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಜ್ಯೋತಿ ಸ್ವಾಗತಿಸಿದರು. ಗೀತಾ ವಂದಿಸಿದರು.
- ಕರುನಾಡ ಕಂದ
