ಯಾದಗಿರಿ/ಗುರುಮಠಕಲ್: ತಾಲೂಕಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಬೆಳಿಗ್ಗೆಯಿಂದಲೇ ಪ್ರಾರಂಭವಾಗಿ ಮಧ್ಯಾಹ್ನ 12 ಗಂಟೆ ವರೆಗೆ ಬಿರುಸಾಗಿ ಜರುಗಿತು.
340 ಮತಗಳ ಪೈಕಿ 258 ಮತದಾನವಾಗಿದ್ದು ಶೇಕಡಾ 76% ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಶ್ರೀಮತಿ ಗಿರಿಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಿರೋಧವಾಗಿ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಲ್ಲಿ ಮಾಣಿಕಪ್ಪ ಕಿಸ್ಟಪ್ಪ, ಹಿಂದುಳಿದ ವರ್ಗದ ಶಾಮಪ್ಪ ಚಂದ್ರಪ್ಪ ತಾಸಿಲ್, ನಾಗೇಂದ್ರಪ್ಪ ರಾಚಣ್ಣ, ಪರಿಶಿಷ್ಠ ಜಾತಿ ವರ್ಗದ ಜಿ. ತಮ್ಮಣ್ಣ, ಚಂದಪ್ಪ, ಪರಿಶಿಷ್ಠ ಪಂಗಡದ ಅಂಬವ್ವ ತಿಪ್ಪಣ್ಣ, ಮಹಿಳಾ ಕ್ಷೇತ್ರ ಶ್ರೀಮತಿ ಈಶ್ವರಮ್ಮ ಮಲ್ಲಣ್ಣ ಹುಗಾರ, ಕಿಸ್ಟಮ್ಮ
ಲಕ್ಷ್ಮಪ್ಪ ತಹಸೀಲ್ ಆಯ್ಕೆಯಾಗಿದ್ದರೆ.
ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ನರಸಿಂಹ ರೆಡ್ಡಿ ಹನುಮಂತ ರೆಡ್ಡಿ (163), ಬಸಪ್ಪ ತಂದೆ ವೀರಪ್ಪ ಅರಬಿಂಜರ (133), ನಾರಾಯಣ ಶ್ರೀನಿವಾಸ ಕಲಾಲ (123), ರಾಜೇಶ್ವರ ರೆಡ್ಡಿ ತಂದೆ ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್ (128), ವಿರೂಪಾಕ್ಷ ರೆಡ್ಡಿ ಬಸವರಾಜ್ ಶೇರಿ (110), ಬಾಲಪ್ಪ ಸಾಯಪ್ಪ (101) ಭೀಮರೆಡ್ಡಿ ಉಡಾಮಲಗಿದ್ದ (99), ಹನ್ಮಯ್ಯ ಕಲಾಲ್ (81) ಮತಗಳನ್ನು ಪಡೆದಿದ್ದಾರೆ.
ವರದಿ: ಜಗದೀಶ್ ಕುಮಾರ್
