ಯಾದಗಿರಿ/ಗುರುಮಠಕಲ್: ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಮತ್ತು ರಾಮ ಭಂಟ ಹನುಮಂತನ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ರಾಮ ನವಮಿಯನ್ನು ನಿನ್ನೆ ಸಾಯಂಕಾಲ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಚರಣೆ ಮಾಡಲಾಯಿತು.
ರಾಮ ನವಮಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಕಲ ಸಧ್ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು, ಶ್ರೀ ಮಾತಾ ಕಾಳಿಕಾ ದೇವಿ ಭಜನಾ ಮಂಡಳಿ ಸದಸ್ಯರಿಂದ ರಾಮ ಭಜನೆ ಕಾರ್ಯಕ್ರಮಕ್ಕೆ ಬಂದಿರುವ ಭಕ್ತರಿಗೆ ಭಕ್ತಿ ಪರವಶರನ್ನಾಗಿ ಮಾಡಿತು, ಇನ್ನೂ ಮಾರವಾಡಿ ಸಮಾಜದವರು ಬಂದಿರುವ ಭಕ್ತರಿಗೆ ಸಂಪೂರ್ಣ ಪ್ರಸಾದ ವ್ಯವಸ್ಥೆ ಮಾಡಿದರು, ಬಡಾವಣೆಯ ನಿವಾಸಿಗಳು, ಶ್ರೀ ವೀರಭದ್ರೇಶ್ವರ ಸ್ವಾಮಿ ಭಕ್ತರು, ಮಾರವಾಡಿ ಸಮಾಜದ ಎಲ್ಲಾ ವರ್ತಕರು, ಗೃಹಿಣಿಯರು, ಮಕ್ಕಳು, ಹಿರಿಯರು ಹೀಗೆ ವಯಸ್ಸಿನ ಬೇಧ ಭಾವವಿಲ್ಲದೆ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಶೋಭೆ ತಂದುಕೊಟ್ಟರು.
ವರದಿ: ಜಗದೀಶ್ ಕುಮಾರ್
